• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮದರಸಾ ಕೆಲಸದಾಕೆ ಮೇಲೆ ಅತ್ಯಾಚಾರವೆಸಗಿ ಐರನ್ ಬಾಕ್ಸ್‌ನಿಂದ ಸುಟ್ಟ ಮೌಲ್ವಿ

|

ಬೆಂಗಳೂರು, ಡಿಸೆಂಬರ್ 14: ಮೌಲ್ವಿಯೊಬ್ಬ ಮನೆ ಕೆಲಸದಾಕೆ ಮೇಲೆ ಅತ್ಯಾಚಾರವೆಸಗಿ ಕೊನೆಗೆ ಐರನ್ ಬಾಕ್ಸ್‌ನಿಂದ ಸುಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಇತ್ತೀಚೆಗೆ ಒಂದರ ಹಿಂದೊಂದರಂತೆ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಇದೆಲ್ಲದರ ನಡುವೆ ಮೌಲ್ವಿ ಪ್ರಕರಣ ಬೆಳಕಿಗೆ ಬಂದಿದೆ.

ಅತ್ಯಾಚಾರ ಆರೋಪಿಗಳ ಎನ್‌ಕೌಂಟರ್: ಸುಪ್ರೀಂಕೋರ್ಟ್ ಮಹತ್ವದ ನಿರ್ಧಾರಅತ್ಯಾಚಾರ ಆರೋಪಿಗಳ ಎನ್‌ಕೌಂಟರ್: ಸುಪ್ರೀಂಕೋರ್ಟ್ ಮಹತ್ವದ ನಿರ್ಧಾರ

ಕೆಲಸಕ್ಕೆಂದು ಯುವತಿಯನ್ನು ಕರೆತಂದು, ಆಕೆಯನ್ನು ಗೃಹ ಬಂಧನದಲ್ಲಿಟ್ಟು ಅತ್ಯಾಚಾರ ನಡೆಸಿದ್ದಷ್ಟೇ ಅಲ್ಲದೆ ಐರನ್ ಬಾಕ್ಸ್​ನಿಂದ ಯುವತಿಯ ದೇಹ ಸುಟ್ಟು ಚಿತ್ರಹಿಂಸೆ ನೀಡಿದ್ದಾನೆ.

ಕೋರಮಂಗಲದಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಣ ಸಂಸ್ಥೆಗಳು (ಟ್ಯುಟೋರಿಯಲ್) ಮತ್ತು ಮದರಸಾ ನಡೆಸುತ್ತಿರುವ ಫರ್ವೇಜ್ ಎಂಬ ಮೌಲ್ವಿ ಯುವತಿಯ ಮೇಲೆ ಅತ್ಯಾಚಾರವೆಸಗಿ ವಿಕೃತಿ ಮೆರೆದ ವ್ಯಕ್ತಿಯಾಗಿದ್ದಾನೆ.

ಪೊಲೀಸರು ಮೌಲ್ವಿಯನ್ನು ಬಂಧಿಸಿ ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ. ಈ ಘಟನೆ ಸಂಬಂದ ಆರೋಪಿ ಫರ್ವೇಜ್ ವಿರುದ್ಧ ಐಪಿಸಿ ಸೆಕ್ಷನ್ 344 (ಅಕ್ರಮ ಬಂಧನ), 376 (ಅತ್ಯಾಚಾರ), 307 (ಕೊಲೆ ಯತ್ನ), 506, 507 (ಬೈಗುಳ), (ಜೀವ ಬೆದರಿಕೆ) ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

English summary
Islamic Preacher Arrested For raping abduction won inside the Madarasa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X