ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋರಮಂಗಲದಲ್ಲಿ ಗಿರಿರಾಜ್ ನಿರ್ದೇಶನದ ಮಾಸ್ತಿ ಕಲ್ಲು ಪ್ರದರ್ಶನ

|
Google Oneindia Kannada News

ಬೆಂಗಳೂರು, ಫೆಬ್ರವರಿ 10: ಜಟ್ಟ, ಮೈತ್ರಿ ಚಲನಚಿತ್ರ ಖ್ಯಾತಿಯ ಗಿರಿರಾಜ್ ಬಿಎಂ ಅವರ ನಿರ್ದೇಶನದ 'ಮಾಸ್ತಿಕಲ್ಲು' ನಾಟಕದ ಪ್ರದರ್ಶನ ಫೆಬ್ರವರಿ 14ರಂದು ಪ್ರಭಾತ್ ಕಲಾ ದ್ವಾರಕದಲ್ಲಿ ಆಯೋಜಿಸಲಾಗಿದೆ ಎಂದು ಅಶ್ವಘೋಷ ಥಿಯೇಟರ್ ಟ್ರಸ್ಟ್ ಕಾರ್ಯದರ್ಶಿ ನಂದೀಶ್ ದೇವ್ ಹೇಳಿದ್ದಾರೆ.

ಈ ನಾಟಕವನ್ನು ನಿರ್ದೇಶಕರಾದ ಬಿ.ಎಂ. ಗಿರಿರಾಜ ರವರು ನಿರ್ದೇಶಿಸಿದ್ದಾರೆ. ಜಟ್ಟ, ಮೈತ್ರಿ ಮತ್ತು ಅಮರಾವತಿ ಚಲನಚಿತ್ರಗಳಿಗೆ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಇವರ ಸುಗಂಧದ ಸೀಮೆಯಾಚೆ ನಾಟಕಕ್ಕೆ ನಾಟಕ ಅಕಾಡೆಮಿಯ ಪ್ರಶಸ್ತಿಯೂ ಸಹ ಲಭಿಸಿದೆ. ಪ್ರಸ್ತುತ ಕೆ.ಶಿವರಾಮ ಕಾರಂತರವರ ಸರಸಮ್ಮನ ಸಮಾಧಿ ನಾಟಕವನ್ನು ರಂಗಕ್ಕೆ ಅಳವಡಿಸಿ ಮಾಸ್ತಿಕಲ್ಲು ಎಂಬ ನಾಟಕವನ್ನು ಬರೆದು ನಿರ್ದೇಶನವನ್ನು ಮಾಡಿದ್ದಾರೆ. ಪುನೀತ್ ರಾಜ್‍ಕುಮಾರ್, ಮೋಹನ್ ಲಾಲ್ ಅವರ ಜೊತೆ ಕೆಲಸಮಾಡಿ ಈಗ ಮತ್ತೆ ರಂಗಭೂಮಿಯ ಕಡೆ ಒಲವು ತೋರಿದ್ದಾರೆ.

ನಾಟಕ - ಮಾಸ್ತಿಕಲ್ಲು
ಬೆಳಕು - ಮಂಜು ನಾರಾಯಣ್
ಸಂಗೀತ - ಅಭಿಲಾಷ್ ಲಾಕ್ರ
ನಿರ್ವಹಣೆ - ನಂದೀಶ್ ದೇವ್
ಪ್ರಸಾದನ - ಮೋಹನ್ ಕುಮಾರ್
ರಂಗ ಸಜ್ಜಿಕೆ ಮತ್ತು ರಂಗ ಪರಿಕರ - ಪ್ರಸಾದ್ ಶಾನು
ರಂಗರೂಪ ಮತ್ತು ನಿರ್ದೇಶನ - ಬಿ ಎಂ ಗಿರಿರಾಜ್
ರಚನೆ - ಕೆ. ಶಿವರಾಮ ಕಾರಂತ್

Masti Kallu Kannada Play at Prabhath kala Dwaraka, Koramanagala

ದಿನಾಂಕ - 14 ಫೆಬ್ರವರಿ 2021
ಭಾನುವಾರ ಸಂಜೆ 7:30ಕ್ಕೆ

ಪ್ರಭಾತ್ ಕಲಾ ದ್ವಾರಕ
ಕೋರಮಂಗಲ
ದಿ ಕೋರಮಂಗಲ ಕ್ಲಬ್

ಟಿಕೆಟ್ ದರ - 150/-

ಪುರುಷ ಪ್ರಧಾನ ಸಮಾಜದಲ್ಲಿ "ಜೀವನದ ಅನೇಕ ಕ್ಷೇತ್ರಗಳಲ್ಲಿ ಸ್ತ್ರೀಯ ಮನಸ್ಸು ಮತ್ತು ಶರೀರಗಳೆರಡೂ ಅವನ ಸೊತ್ತು; ಅದಕ್ಕೆ ಸ್ವತಂತ್ರ ಅಸ್ತಿತ್ವವಿಲ್ಲ" ಎಂಬ ಭಾವನೆ ಜಗತ್ತಿನ ದೇಶ ಮತ್ತು ಮತಗಳು ಸಾರುತ್ತ ಬಂದಿವೆ. ಪ್ರಾಣಿ ಜೀವನ ಪರಿಶೀಲಕರು ಅಂಥ ಕಲ್ಪನೆ ತೀರ ಅಸಾಧು ಎಂದು ನಮಗೆ ಸುಲಭದಲ್ಲಿ ತಿಳಿಸಿಯಾರು. ಆಧುನಿಕ ಮನಶಾಸ್ತ್ರಜ್ಞರು ಅದನ್ನು ವಿವರಿಸಬಲ್ಲರು. ಆದರೆ, ಯಾರ ಸಂಸ್ಕೃತಿಯೇ ಆಗಲಿ, ತನ್ನ ಜನಗಳ ಮೇಲೆ ವಿಧಿಸಿದ ವರ್ತನೆಗಳ ಬೆನ್ನಿಗೆ, ಪಾಪ-ಪುಣ್ಯ, ನ್ಯಾಯ-ನೀತಿ, ಸ್ವರ್ಗ-ನರಕಗಳ ನಂಬಿಕೆಗಳನ್ನು ಬೆಸೆಯುತ್ತ ಬಂದಿರುವುದರಿಂದ, ಅದರಿಂದಾಗಿ ಅಸಂಖ್ಯರು ಮನೋದಾಸ್ಯದಿಂದ ಬಂಧಿತರಾಗಿರುವುದರಿಂದ, ನಮ್ಮ ನಾಡಿನ ಪರಂಪರೆ ಸಾರುತ್ತಿರುವ 'ನೀತಿ'ಗಳನ್ನು ಪ್ರಶ್ನಿಸುವ ಧೈರ್ಯವನ್ನು ಇಲ್ಲಿಯವರು ತಳೆದಿಲ್ಲ; ಆ ಸಾಹಸಕ್ಕೆ ಹೋಗಿಲ್ಲ.

Masti Kallu Kannada Play at Prabhath kala Dwaraka, Koramanagala

ಅಲ್ಲದೆ ಮನುಷ್ಯ ವರ್ಗವೇ ಸಾಕಷ್ಟು ಕಪಟ ಜೀವನ ನಡೆಸುತ್ತಿರುವ ಒಂದು ಜಾತಿಯಗಿದೆ. ಅದು ಪರರ ವಿಚಾರದಲ್ಲಿ ಯಾವೆಲ್ಲ ನಿಯತ್ತು, ಶಿಕ್ಷೆ, ದೋಷಾರೋಪಣೆ ಮಾಡಲು ಸಿದ್ದವೋ, ತನ್ನ ವಿಷಯ ಬಂದಾಗ, ತನ್ನನ್ನು ತಾನು ತೂಗಬೇಕಾಗಿ ಬಂದಾಗ, ತನ್ನ ನಡೆಗಳನ್ನು ತಾನು ಪ್ರಶ್ನಿಸಲೇ ಬೇಕಾದಾಗ, ಆ ಬಗ್ಗೆ ಯಾವ ಸಂಕೋಚವೂ ಇಲ್ಲದಂತೆ ವರ್ತಿಸುತದೆ.

ಅಂಥ ಮನಸ್ಸಿನ ಗಂಡಸು ಮತ್ತು ಹೆಂಗಸರ ನಡುವಣ ದಾಂಪತ್ಯದ ಚಂಚಲ ಸಂಬಂಧಗಳನ್ನು ಕುರಿತು ಈ ಕಾದಂಬರಿ ಚಿತ್ರಿಸಿದೆ.

Masti Kallu Kannada Play at Prabhath kala Dwaraka, Koramanagala

Recommended Video

ಎಟಿಎಂ ಹಣ ಕದ್ದು ಎಸ್ಕೇಪ್ ಆಗಿದ್ದ ಡ್ರೈವರ್ ಅರೆಸ್ಟ್ | Oneindia Kannada

ಸರಸಮ್ಮನ ಸಮಾಧಿಯು ಒಂದು ಉತ್ಕೃಷ್ಟವಾದ ಕೃತಿಯಾಗಿದ್ದು, ಜನರು, ವಿಶೇಷವಾಗಿ ಪುರುಷರು ತಮ್ಮ ಜೀವನದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಿಂದ, ಮಾಡುವ ಆಯ್ಕೆಗಳಿಂದ, ತಮ್ಮ ಜೀವನದ ಭಾಗವಾದ ಹೆಂಗಸರ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತಿದೆ ಎಂದು ಅವಲೋಕನ ಮಾಡಿಕೊಳ್ಳಲು ಪ್ರೇರೇಪಿಸುತ್ತದೆ. ಕೇವಲ ಭೋಗದ ವಸ್ತುಗಳಾದ ಆಭರಣಗಳು, ಸಿರಿವಂತಿಕೆಗಳಿಂದ ಹೆಂಗಸರನ್ನು ಸಂತೋಷಪಡಿಸಲು ಆಗುವುದಿಲ್ಲ, ಆದರೆ ಪ್ರೀತಿ-ಸಹಾನುಭೂತಿಗಳಿಂದ ಸಾಧ್ಯ ಎನ್ನುವುದು ಇದರ ಕೇಂದ್ರ ವಸ್ತು. ಬಿಗಿಯಾದ ನಿರೂಪಣೆ ಮತ್ತು ಪ್ರಬುದ್ಧ ಪಾತ್ರ ಪೋಷಣೆಯಿಂದ ಓದಿಸುತ್ತಾ ಸಾಗಿಸುವ ಈ ಪುಸ್ತಕವು ಎಲ್ಲಿಯೂ ಕೂಡ ಸಡಿಲಗೊಳ್ಳುವುದಿಲ್ಲ. ಪುಸ್ತಕದ ಹೆಸರನ್ನು ಕಂಡು, ಇದೊಂದು ರಕ್ತಸಿಕ್ತ ಕಥಾನಕವಿರಬಹುದೆಂದು ಭಾವಿಸಿದ್ದ ನನಗೆ, ಸಮಾಜದ ಬಗ್ಗೆ ಮತ್ತು ಅದರ ಕಟ್ಟುಪಾಡುಗಳ ಬಗ್ಗೆ, ಮದುವೆಯ ಕುರಿತಾದ ನಂಬಿಕೆಗಳ ಬಗ್ಗೆ ವಿಮರ್ಶೆಗೆ ಒಳಗಾಗುವಂತೆ ಮಾಡಿದ, ಸ್ವಲ್ಪ ಮಟ್ಟಿಗೆ ನಕ್ಕುನಲಿಯುವಂತೆ ಮಾಡಿದ ಒಂದು ಸುಂದರ ಕೃತಿ. ಪ್ರತಿಯೊಬ್ಬರೂ ಕೂಡ ಇದನ್ನು ಓದಲೇ ಬೇಕೆಂದು ನಾನು ಶಿಫಾರಸ್ಸು ಮಾಡುತ್ತೇನೆ ಎಂದು ಬಿಎಂ ಗಿರಿರಾಜ ಹೇಳಿದ್ದಾರೆ.

English summary
Masti Kallu Kannada Play loosely based the on Kota Shivaram Karanth’s evergreen novel Sarasammana Samadhi written and directed by Giriraj BM will be stage on Feb 14 at Prabhath kala Dwaraka, Koramanagala, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X