ಪಾಕ್ ಪರ ಘೋಷಣೆ; ಅಮೂಲ್ಯ ಲಿಯೋನಾ ವಿರುದ್ಧ ವ್ಯಾಪಕ ಪ್ರತಿಭಟನೆ
ಬೆಂಗಳೂರು, ಫೆಬ್ರವರಿ 21: ಬೆಂಗಳೂರಿನಲ್ಲಿ ಪಾಕ್ ಪರ ಘೋಷಣೆ ಕೂಗಿರುವ ಅಮೂಲ್ಯ ಲಿಯೋನಾ ವಿರುದ್ಧ ಶುಕ್ರವಾರ ರಾಜ್ಯಾದ್ಯಂತ ವಿವಿಧ ಹಿಂದು ಪರ ಸಂಘಟನೆಗಳು ಪ್ರತಿಭಟನೆಗೆ ಕರೆ ಕೊಟ್ಟಿವೆ.
ಅಮೂಲ್ಯ ದೇಶದ್ರೋಹದ ಹೇಳಿಕೆಗೆ ಕೇವಲ ರಾಜ್ಯವಷ್ಟೇ ಅಲ್ಲದೇ ದೇಶಾದ್ಯಂತ ಆಕ್ರೋ ವ್ಯಕ್ತವಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲಾ ಹಾಗೂ ತಾಲೂಕಾ ಕೇಂದ್ರಗಳಲ್ಲಿ ಶ್ರೀರಾಮ ಸೇನಾ, ಭಜರಂಗದಳ, ವಿಎಚ್‌ಪಿ ಎಬಿವಿಪಿ ಸಂಘಟನೆಗಳು ಅಮೂಲ್ಯಳ ವಿರುದ್ಧ ಪ್ರತಿಭಟನೆ ಆರಂಭಿಸಿವೆ.
ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದ ಎಂದು ತಿಳಿದು ಬಂದಿದೆ. ಅಮೂಲ್ಯಳ ಊರಾದ ಕೊಪ್ಪ ಬಳಿಯ ವಾಜಿಯಲ್ಲಿ ಹೆಚ್ಚಿನ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದ್ದು ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಿನ ಪ್ರೀಡಂಪಾರ್ಕ್‌ನಲ್ಲಿ ಗುರುವಾರ ಸಂಜೆ ಮುಸ್ಲಿಂ ಸಂಘಟನೆಗಳು ಆಯೋಜಿಸಿದ್ದ ಸಭೆಯಲ್ಲಿ ಮಾತನಾಡುತ್ತಿದ್ದ ಅಮೂಲ್ಯ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಳು. ಬಲವಂತದಿಂದ ಮೈಕ್ ಕಸಿದುಕೊಳ್ಳಲಾಯಿತು.












Click it and Unblock the Notifications