• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾಸ್ಕ್ ಹಾಕ್ಕೊಳ್ಳಿ: ಬಿಬಿಎಂಪಿ ಮಾರ್ಷಲ್ ಮೇಲೆ ಹಲ್ಲೆ, ಮೂವರ ಬಂಧನ

|

ಬೆಂಗಳೂರು, ಅ. 14: ಮಾಸ್ಕ್ ಧರಿಸದೇ ಇರುವವರಿಗೆ ಕೇಸ್ ಹಾಕುತ್ತಿದ್ದ ಪೊಲೀಸರ ಮೇಲೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದ 03 ಜನ ಆರೋಪಿಗಳನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಎಎಸ್‍ಐ ಅಶ್ವಥಯ್ಯ, ಮತ್ತು ಪೊಲೀಸ್ ಕಾನ್ಸ್ ಟೇಬಲ್ ಗುರು ಜಂಬಗಿ ಅವರು ಬಿ.ಬಿ.ಎಂ.ಪಿ ಮಾರ್ಷಲ್ ಮುನಿರಾಜು ರವರೊಂದಿಗೆ ಮಾಸ್ಕ್ ಧರಿಸದೆ ಇರುವವರು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವವರ ಮೇಲೆ ಸರ್ಕಾರದ ಆದೇಶದಂತೆ ಪ್ರಕರಣ ದಾಖಲಿಸುವಂತೆ ಸೂಚಿಸಿ ಕರ್ತವ್ಯ ನೇಮಕ ಮಾಡಲಾಗಿದೆ.

ಅಶ್ವಥಯ್ಯ ಎಎಸ್‍ಐ ಹಾಗೂ ಸಿಬ್ಬಂದಿಗಳು ಠಾಣಾ ಸರಹದ್ದಿನ ಗೋಕುಲದಲ್ಲಿ ಗಸ್ತು ಮಾಡುತ್ತಿರುವಾಗ ಬುಧವಾರ ಬೆಳಿಗ್ಗೆ ಸುಮಾರು 10-50 ಗಂಟೆಗೆ ಗೋಕುಲ ಬ್ರಿಡ್ಜ್ ಕೆಳಗಡೆ ಹಳೆ ರೈಲ್ವೆ ಗೇಟ್ ಹತ್ತಿರ ಇರುವ ಬಾಬು ಮೋಟಾರ್ಸ್ ಗ್ಯಾರೇಜ್ ಮುಂದೆ ಗ್ಯಾರೇಜ್‍ನಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಆಸಾಮಿಯು ಗ್ಯಾರೇಜ್ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದ.

ಈತನಿಗೆ ನಾವು ದೇಶದಾದ್ಯಂತ ಕೋವಿಡ್-19 ಸೋಂಕು ಹರಡುತ್ತಿದ್ದು, ಈ ಬಗ್ಗೆ ಸೋಂಕನ್ನು ತಡೆಗಟ್ಟಲು ಕೇಂದ್ರ ಸರ್ಕಾರ/ರಾಜ್ಯ ಸರ್ಕಾರಗಳು ಸೋಂಕು ಹರಡದಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು, ಫೇಸ್ ಮಾಸ್ಕ್ ಧರಿಸಲು, ಸ್ಯಾನಿಟೈಸರ್ ಬಳಸುವುದು ಮುಂತಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಯಿತು.

''ಸಹಾ ನೀವು ಮಾಸ್ಕ್ ಧರಿಸದೆ ಓಡಾಡುತ್ತಿದ್ದಿರಾ''? ಎಂದ ಸರ್ಕಾರದ ಆದೇಶದಂತೆ ಸರ್ಕಾರಕ್ಕೆ ದಂಡವನ್ನು ಕಟ್ಟಿಸಿಕೊಳ್ಳುವಂತೆ ನಾವು ಮತ್ತು ಬಿ.ಬಿ.ಎಂ.ಪಿ ಮಾರ್ಷಲ್ ರವರು ಅವರಿಗೆ ತಿಳಿಸಿದಾಗ ಗ್ಯಾರೇಜ್ ಬಳಿ ಇದ್ದ ಶಿವಕುಮಾರ್ ಎಂಬ ವ್ಯಕ್ತಿ ಅಲ್ಲಿಗೆ ಬಂದು ''ಲೋ$# ನನ್ನ ಮಕ್ಳು ಪೊಲೀಸರು, ಮಾಡೋಕೆ ಏನೂ ಬೇರೆ ಕೆಲಸ ಇಲ್ಲ'' ಎಂದು ನಮಗೆ ಬೈಯ್ದನು.

ಆಗ ''ನಾವು ಯಾಕೆ ಬೈಯುತ್ತಿದ್ದೀರಿ?'' ಎಂದು ಕೇಳುತ್ತಿದ್ದಾಗ ಗ್ಯಾರೇಜ್‍ನಲ್ಲಿದ್ದ ಕಾರ್ಲ್ ಮಾರ್ಕ್ಸ್ ಎಂಬುವನು ಅಲ್ಲಿಗೆ ಬಂದು ''ನಮಗೇನು ಕರೋನಾ ಇದೆಯೇ ನಾವು ಯಾಕೆ ಮಾಸ್ಕ್ ಹಾಕಬೇಕು, ನಾವು ಮಾಸ್ಕ್ ಹಾಕುವುದಿಲ್ಲ, ದಂಡನು ಕಟ್ಟುವುದಿಲ್ಲ ಏನು ಮಾಡಕೊಳುತ್ತೀರೂ ಮಾಡ್ಕೂಳ್ಳಿ'' ಎಂದು ಹೇಳಿ ಈ ಪೊಲೀಸನರಿಗೆ ಇವತ್ತು ಬುದ್ದಿ ಕಲಿಸಬೇಕು ಎಂದು ಏಕಾಏಕಿ ನಮ್ಮ ಮೇಲೆ ಗಲಾಟೆ ಮಾಡಿದನು.

ನಮಗೆ ಬೋ# ಮಕ್ಕಳ ಎಂದು ಬೈಯ್ದುತ್ತಿದ್ದನು ಆಗ ಅಲ್ಲೇ ಇದ್ದ ಗ್ಯಾರೇಜ್ ಮಾಲೀಕ ಬಾಬು ಬಂದು ನನ್ನ ಕೈಗಳನ್ನು ಹಿಡಿದುಕೊಂಡನು ಆಗ ಕಾರ್ಲ್ ಮಾರ್ಕ್ಸ್ ನನಗೆ ಆತನ ಕೈ ಮುಷ್ಠಿಯಿಂದ ನನ್ನ ಎಡ ಭಾಗದ ಕೆನ್ನೆಗೆ ಗುದ್ದಿದ್ದು ಅದರ ಪರಿಣಾಮವಾಗಿ ನನಗೆ ನೋವುಂಟಾಗಿರುತ್ತದೆ. ನಂತರ ಅವರುಗಳು ನನ್ನ ಸಮವಸ್ತ್ರ ಹಿಡಿದು ಎಳೆದಾಡಿ ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆಂದು ಇವರುಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಅಶ್ವಥಯ್ಯ, ಎಎಸ್‍ಐ ರವರು ಕೊಟ್ಟ ವರದಿಯನ್ನು ಸ್ವೀಕರಿಸಿ ಠಾಣಾ ಮೊ.ಸಂ.89/2020 ಕಲಂ 353, 332, 504 ರೆ/ವಿ 34 ಐಪಿಸಿ ರೀತಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

1) ಮನೋರಾಯನಪಾಳ್ಯ, ಆರ್.ಟಿ.ನಗರ ನಿವಾಸಿ ಕಾರ್ಲ್‍ಮಾರ್ಕ್ಸ್ ಬಿನ್ ಕುಮಾರ್(25 ವರ್ಷ)

2) ಸಿಂಗಾಪುರ ಲೇಔಟ್, ವಿದ್ಯಾರಣ್ಯಪುರ ಅಂಚೆ ನಿವಾಸಿ ಶಿವಕುಮಾರ್ ಬಿನ್ ಲೇಟ್ ಶಾಮ್‍ಬಯ್ಯಾ(54 ವರ್ಷ)

3) ಮನೋರಾಯನಪಾಳ್ಯ ನಿವಾಸಿ ಎಸ್ ಬಾಬು ಬಿನ್ ಸುಬ್ರಮಣಿ(40) ಎಂಬುವವರನ್ನು ದಸ್ತಗಿರಿ ಮಾಡಿದ್ದು, ಸದರಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

   Sriramulu ಎರಡು ವರುಷ ಇಂದ ಕೇಳ್ತಿದಿನಿ | Oneindia Kannada

   English summary
   Mask imposition: Three held for attacking BBMP Marshal named Muniraju. Muniraju was working on behalf of BBMP Gokula ward. Three are booked for attacking on duty government servants and criminal intimidation.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X