ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಲಸೂರು ಕೆರೆಗೆ ಬರಲಿವೆ ಮಾರುತಿ 800 ಇಂಜಿನ್ ಯುಕ್ತ ಬೋಟ್ ಗಳು!

ಏರ್ ಬೋಟ್ ಗಳಿಗೆ ಮಾರುತಿ 800 ಇಂಜಿನ್ ಅಳವಡಿಕೆ. ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿ ವಿಜ್ಞಾನಿಗಳಿಂದ ಹೊಸ ಪ್ರಯೋಗ.

|
Google Oneindia Kannada News

ಬೆಂಗಳೂರು, ಜುಲೈ 25: ಎಂಬತ್ತು ಹಾಗೂ ತೊಂಭತ್ತರ ದಶಕದಲ್ಲಿ ಮಧ್ಯಮ ವರ್ಗದ ಡ್ರೀಮ್ ಕಾರ್ ಎಂದೇ ಖ್ಯಾತವಾಗಿದ್ದ ಮಾರುತಿ 800 ಕಾರುಗಳ ತಯಾರಿಕೆ ಈಗ ಸ್ಥಗಿತಗೊಂಡಿದೆ. ಆದರೇನು, ಆ ಹಳೆಯ ಕಾರುಗಳ ಇಂಜಿನ್ ಗೆ ಹೊಸ ಬೇಡಿಕೆಯನ್ನು ತಂದುಕೊಟ್ಟಿದ್ದಾರೆ ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್ (ಎನ್ಎಎಲ್).

ಆ ಮಾರುತಿ 800 ಕಾರುಗಳ ಇಂಜಿನ್ ಗಳಿಗೆ ಸುಧಾರಿತ ಸ್ವರೂಪವನ್ನು ಕೊಡುವ ಮೂಲಕ ಹಲವಾರು ಕೆರೆಗಳಲ್ಲಿ, ಅಮ್ಯೂಸ್ ಮೆಂಟ್ ಪಾರ್ಕ್ ಗಳಲ್ಲಿ ಉಪಯೋಗಿಸಬಹುದಾದ ಏರ್ ಬೋಟ್ ಗಳನ್ನು ಎನ್ಎಎಲ್ ತಯಾರಿಸಿದೆ.

MARUTI 800 ENGINE TO POWER AIRBOATS IN HALASURU LAKE

ಹೊಸದಾಗಿ ತಯಾರಿಸಲಾದ ಈ ಬೋಟ್ ಗಳ ಮೊದಲ ಪ್ರಯೋಗವು ಬೆಂಗಳೂರಿನ ಹಲಸೂರು ಕೆರೆಯಲ್ಲಿ ನಡೆಯಲಿದೆ. ಈ ಬಗ್ಗೆ ವಿವರಣೆ ನೀಡಿದ ಎನ್ಎಎಲ್ ಅಧಿಕಾರಿಯೊಬ್ಬರು, ಮೊದಲಿಗೆ ಈ ಇಂಜಿನ್ ಗಳನ್ನು ಬಳಸಿಕೊಂಡು ಹಾರವ ಯಂತ್ರಗಳನ್ನು ತಯಾರಿಸುವ ಬಗ್ಗೆ ಆಲೋಚಿಸಲಾಗಿತ್ತು. ಆದರೆ, ಇದು ಏರ್ ಬೋಟ್ ಗಳಿಗೆ ಹೆಚ್ಚು ಉಪಯೋಗವಾಗುವುದೆಂದು ನಿರ್ಧರಿಸಿ ಈ ಏರ್ ಬೋಟ್ ಗಳನ್ನು ತಯಾರಿಸಲಾಗಿದೆ ಎಂದು ಹೇಳಿದ್ದಾರೆ.

English summary
Owning a Maruti 800 was a dream for the middle class in the 80s and 90s. Now, its powerful engines are being used for airboats. Engines are modified by National Aerospace Laboratories (NAL).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X