ಪತ್ನಿಯ ಸ್ನೇಹಿತೆ ಮೇಲೆ ಅತ್ಯಾಚಾರ: ಗಂಡ ಜೈಲಿಗೆ

ಘಟನೆ ವಿವರ: ಸ್ಥಳೀಯ ಫೈನಾನ್ಸ್ ಕಂಪನಿಯೊಂದರಲ್ಲಿ ಉದ್ಯೋಗಿ ಆಗಿರುವ ಶ್ರೀನಿವಾಸ್ ಕಳೆದ 5-6 ವರ್ಷಗಳ ಹಿಂದೆ ವಿವಾಹವಾಗಿದ್ದ. ಈತ 6 ತಿಂಗಳ ಹಿಂದೆ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ರಚನಾ (23) (ಹೆಸರು ಬದಲಿಸಿದೆ) ಮೇಲೆ ಮೋಹಗೊಂಡಿದ್ದ. ರಚನಾ, ಶ್ರೀನಿವಾಸ್ ಪತ್ನಿಯ ಸ್ನೇಹಿತೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಗಣೇಶ ಹಬ್ಬದ ಸಂದರ್ಭದಲ್ಲಿ ಆಕೆ ಮನೆಗೆ ಬಂದಿದ್ದಾಗ ಶ್ರೀನಿವಾಸ್ ತಂಟೆ ಮಾಡಿದ್ದ ಎನ್ನಲಾಗಿದೆ. ನಂತರ ಮೂರ್‍ನಾಲ್ಕು ದಿನ ಕಳೆದ ನಂತರ ಆಕೆಗೆ ದೂರವಾಣಿ ಕರೆ ಮಾಡಿ ಪತ್ನಿಗೆ ಅಪಘಾತವಾಗಿದೆ. ಮನೆಗೆ ಬಂದು ನೋಡಿಕೊಂಡು ಹೋಗಿ ಎಂದು ಹೇಳಿದ್ದಾನೆ. ಅದರಂತೆ ರಚನಾ ಮನೆಗೆ ಬಂದಾಗ ಚಾಕು ತೋರಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲಾಗಿದೆ.
ಕಳೆದ ಎರಡು ತಿಂಗಳ ಹಿಂದೆ ಶ್ರೀನಿವಾಸನ ಕುಕೃತ್ಯದ ಬಗ್ಗೆ ಪತ್ನಿಗೆ ಗೊತ್ತಾಗಿತ್ತು ಎನ್ನಲಾಗಿದೆ. ಹೇಗಾದರೂ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನ ನಡೆಸಿದ್ದರು. ದೌರ್ಜನ್ಯಕ್ಕೊಳಗಾಗಿದ್ದ ರಚನಾರನ್ನು ಕರೆಸಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಮದುವೆಯಾಗುವಂತೆ ಬೇಡಿಕೆ ಇಟ್ಟಿದ್ದಳು.
ಇದಕ್ಕೆ ಶ್ರೀನಿವಾಸ್ ಒಪ್ಪದೆ ಸತಾಯಿಸಿದ ಹಿನ್ನೆಲೆಯಲ್ಲಿ ದಾರಿ ಕಾಣದೆ ಯುವತಿ ರಾಜಾಜಿನಗರ ಠಾಣೆಗೆ ಬಂದು ದೂರು ನೀಡಿದ್ದಾರೆ. ಪ್ರಸ್ತುತ ರಚನಾ ಗರ್ಭಿಣಿ ಎಂದು ತಿಳಿದು ಬಂದಿದೆ. ರಾಜಾಜಿನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.












Click it and Unblock the Notifications