B.Dayanand: ಪೊಲೀಸ್ ಕಮಿಷನರ್ ಬೆನ್ನಿಗೆ IPS ಅಧಿಕಾರಿಗಳು, ಮುಂದೇನಾಗುತ್ತೆ: 5 ಅಂಶಗಳು...
ಬೆಂಗಳೂರು, ಜೂನ್ 08: ರಾಯಲ್ ಚಾಲೇಂಜರ್ಸ್ ಬೆಂಗಳೂರು (RCB) ವಿಜಯೋತ್ಸವ ವೇಳೆ ನಡೆದ ಕಾಲ್ತುಳಿತ (RCB fans stampede) ವೇಳೆ 11 ಮೃತಪಟ್ಟ ಬೆನ್ನಲ್ಲೆ ಸರ್ಕಾರ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರನ್ನು ಅಮಾನತು ಮಾಡಿ ಕೈ ತೊಳೆದುಕೊಂಡಿದೆ. ಸರ್ಕಾರದ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಕಾಲ್ತುಳಿತದ ನಂತರ ರಾಜಕೀಯ ಬೆಳವಣಿಗೆ ನಡೆದಿವೆ. ಘಟನೆಗೆ ಪೊಲೀಸರನ್ನು ಹೊಣೆ ಮಾಡಲಾಗಿದೆ. ಪೊಲೀಸ್ ಆಯುಕ್ತರ ಅಮಾನತು ವಿಚಾರ ದ್ಯ ಕೇಂದ್ರ ಸರ್ಕಾರದ ಅಂಗಳದಲ್ಲಿದೆ. ಹಾಗಾದರೆ ಮುಂದೇನಾಗುತ್ತೆ? ಎಂಬುದರ ಕಾತರತೆ ಕಾಡುತ್ತಿದೆ. ಇದಕ್ಕೆ ಸಂಬಂಧಿಸಿದ 5 ಅಂಶಗಳು ಇಲ್ಲಿವೆ.
5 ಪ್ರಮುಖ ಅಂಶಗಳು
* ಬೆಂಗಳೂರು ಪೊಲೀಸ್ ಆಯುಕ್ತರ ಅಮಾನರಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡುತ್ತದೆಯೋ ಎಂಬುದರ ಮೇಲೆ ಎತ್ತರ ಚಿತ್ತ ನೆಟ್ಟಿದೆ. ರಾಜ್ಯ ವಿಪಕ್ಷ ನಾಯಕರು ಸಿದ್ದರಾಮಯ್ಯ ಸರ್ಕಾರವು ಉನ್ನತ ಪೊಲೀಸ್ ಅಧಿಕಾರಿ ಮತ್ತು ಇತರ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಬಲಿಪಶುವನ್ನಾಗಿ ಮಾಡಿದ ನಿರ್ಧಾರ, ಧೋರಣೆಯಲ್ಲಿ ಟೀಕಿಸಿದ್ದಾರೆ. ಸಿಎಂ, ಡಿಸಿಎಂ ರಾಜೀನಾಮೆಗೆ ಆಗ್ರಹಿಸಿದ್ದಾರೆ.

* ಕೇಂದ್ರ ಸರ್ಕಾರವು ಭಾರತೀಯ ಪೊಲೀಸ್ ಸೇವೆ (IPS) ಅಧಿಕಾರಿಯಾಗಿರುವ ಪೊಲೀಸ್ ಆಯುಕ್ತರ ಅಮಾನತನ್ನು 30 ದಿನಗಳ ಒಳಗೆ ಅನುಮೋದಿಸಬೇಕು ಎಂಬ ನಿಯಮವಿದೆ. ಕೇಂದ್ರ ಸರ್ಕಾರ ತನ್ನ ನಿರ್ಧಾರ ಪ್ರಕಟಿಸಲು ಇನ್ನು ಸಮಯ ವಿದೆ.
* ಅಮಾನತುಗೊಂಡ ಪೊಲೀಸ್ ಅಧಿಕಾರಿಯನ್ನು ಅನೇಕ ಐಪಿಎಸ್ ಅಧಿಕಾರಿಗಳು ಬೆಂಬಲಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತೆಗೆದುಕೊಂಡ ಅಮಾನತು ನಿರ್ಧಾರಕ್ಕೆ ಕೇಂದ್ರ ಅನುಮೋದನೆ ನೀಡದಂತೆ ರಾಜ್ಯ ಬಿಜೆಪಿ ನಾಯಕರು ಮನವಿ ಮಾಡಿದ್ದಾರೆ.
* ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತ ಹಾಗೂ ಬಿಜೆಪಿ ನಾಯಕ ಭಾಸ್ಕರ್ ರಾವ್ ಅವರು ತೀಕ್ಷಣವಾಗಿ ಪ್ರತಿಕ್ರಿಯಿಸಿದ್ದಾರೆ. ರಾಜ್ಯ ಸಿಎಂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ಭಯಭೀತರಾಗಿದ್ದಾರೆ' ಎಂದು ಟೀಕಿಸಿದ್ದಾರೆ. ಪೊಲೀಸ್ ಆಯುಕ್ತರ ಅಮಾನತು ರದ್ದುಗೊಳಿಸಬೇಕೆಂದು ತಾವು ಬಿಜೆಪಿ ಹೈಕಮಾಂಡ್ ಅನ್ನು ಕೇಳುವುದಾಗಿ ತಿಳಿಸಿದ್ದಾರೆ.
* ಕಾಲ್ತುಳಿತ ಪ್ರಕರಣ ಬಳಿಕ ಐಪಿಎಸ್ ಹಾಗೂ ಇತರ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ಕೈಗೊಂಡ ಕ್ರಮವು ಖಾಕಿ ನೈತಿಕ ಸ್ಥೈರ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರ ಅಮಾನತು ಕರ್ನಾಟಕ ಪೊಲೀಸರ ಇತಿಹಾಸದಲ್ಲಿ ಅತ್ಯಂತ ಕರಾಳ ದಿನ. ಬೆಂಗಳೂರು ನಗರ ಸುರಕ್ಷತೆಗೆ ಶ್ರಮಿಸಿದವರಿಗೆ ಸರ್ಕಾರ ಅಮಾನತಿನ ಬಳುವಳಿ ನೀಡಿದೆ. ಇದು ಖಂಡನೀಯ ಎಂದು ಭಾಸ್ಕರ್ ರಾವ್ ಟೀಕಿಸಿದ್ದಾರೆ.












Click it and Unblock the Notifications