Mango Mela: ಮಾವು ಮತ್ತು ಹಲಸು ಮೇಳ: ವಿವಿಧ ಬಗೆಯ ಮಾವಿನ ಹಣ್ಣಿನ ಬೆಲೆ ಎಷ್ಟಿದೆ?

ಅಕಾಲಿಕ ಮಳೆ ಮತ್ತು ಬಿಸಿಗಾಳಿಯ ಪರಿಣಾಮದಿಂದ ಮಾವಿನ ಇಳುವರಿಯಲ್ಲಿ ಗಣನೀಯ ಕುಸಿತ ಕಾಣುವ ಆತಂಕದ ನಡುವೆಯೂ ಬೆಂಗಳೂರಿನಲ್ಲಿ ಮಾವು ಮತ್ತು ಹಲಸು ಮೇಳಕ್ಕೆ ಚಾಲನೆ ಸಿಕ್ಕಿದೆ. ಮೇ 26ರಂದು ಲಾಲ್‌ಬಾಗ್‌ನಲ್ಲಿ ಹಲಸು ಮತ್ತು ಮಾವು ಮೇಳ ಆರಂಭವಾಗಿದೆ.

ಜೂನ್ 4ರವರೆಗೆ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಹಲಸು ಮತ್ತು ಮಾವು ಮೇಳ ನಡೆಯಲಿದೆ. ನಗರದ ಎಲ್ಲಾ ಹಾಪ್‌ಕಾಮ್ಸ್‌ಗಳಲ್ಲಿ ರಿಯಾಯಿತಿ ದರದಲ್ಲಿ ಮಾವು ಮತ್ತು ಹಲಸಿನ ಹಣ್ಣುಗಳನ್ನು ಮಾರಾಟ ಮಾಡುವುದಾಗಿ ಹಾಪಕಾಮ್ಸ್ ವ್ಯವಸ್ಥಾಪ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

Mango Varieties And Prices

ಮೇ ತಿಂಗಳ ಆರಂಭದಲ್ಲಿ ರಾಜ್ಯದಲ್ಲಿ ಮಾವಿನ ಇಳುವರಿ ಕಡಿಮೆಯಾಗಿರುವುದರಿಂದ ಮೇಳ ನಡೆಯುವುದು ಅನುಮಾನ ಎನ್ನುವ ಆತಂಕ ಮಾವು ಪ್ರಿಯರನ್ನು ಕಾಡಿತ್ತಾದರೂ, ಅಂತಿಮವಾಗಿ ಮಾವು ಮಾರುಕಟ್ಟೆಗೆ ಬರುತ್ತಿರುವುದರಿಂದ ಮಾವು ಮೇಳ ನಡೆಯುತ್ತಿದೆ.

ರೈತರಿಂದ ನೇರ ಮಾರಾಟ

ಲಾಲ್‌ಬಾಗ್‌ನಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡ ಮಾವು ಮೇಳ ನಡೆಯುತ್ತಿದ್ದು, ರಾಜ್ಯದ ವಿವಿಧ ಭಾಗಗಳಿಂದ ರೈತರು ಆಗಮಿಸಿ ತಾವು ಬೆಳೆದ ವಿವಿಧ ಬಗೆ ಮಾವು ಮತ್ತು ಹಲಸಿನ ಹಣ್ಣುಗಳನ್ನು ಮಾರಾಟ ಮಾಡುತ್ತಾರೆ. ಅದರಲ್ಲೂ ಹಣ್ಣುಗಳ ರಾಜ ಮಾವಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ. ರೈತರು ಮತ್ತು ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಿಂದ ತೋಟಾಗಾರಿಕೆ ಇಲಾಖೆಯೇ ಮಾವಿನ ಹಣ್ಣಿಗೆ ದರ ನಿಗದಿ ಮಾಡುತ್ತದೆ.

ಮಾವು ಮೇಳದಲ್ಲಿ 20ಕ್ಕೂ ಅಧಿಕ ತಳಿಯ ಮಾವಿನ ಹಣ್ಣುಗಳನ್ನು ನೋಡಬಹುದಾಗಿದೆ. ಆಮ್ರಪಾಲಿ, ತೋತಾಪುರಿ, ರಸಪೂರಿ, ಬಾದಾಮಿ, ಮಲ್ಲಿಕಾ, ಬಂಗನಪಲ್ಲಿ, ಸಿಂದೂರ, ದಶಹರಿ, ಮಲಗೋವಾ, ಇಮಾಮ್ ಪಸಂದ್, ಕಾಲಾಪಾಡ್, ಕೇಸರ್, ಸಕ್ಕರೆಗುತ್ತಿ ಸೇರಿದಂತೆ ಹಲವು ಬಗೆಯ ಮಾವಿನ ಹಣ್ಣು ಸವಿಯಲು ಸಿಗುತ್ತದೆ.

ಈ ಬಾರಿ ಅತಿಯಾದ ಬಿಸಿಲು, ಅಕಾಲಿಕ ಮಳೆಯ ಕಾರಣ ಇಳುವರಿ ಕೂಡ ಕಡಿಮೆಯಾಗಿದ್ದು, ಬೆಲೆ ಸ್ವಲ್ಪ ಅಧಿಕವಾಗಿದೆ. 35 ರುಪಾಯಿಗಳಿಂದ 165 ರುಪಾಯಿವರೆಗೆ ಬೆಲೆ ನಿಗದಿಪಡಿಸಲಾಗಿದೆ. ಇಮಾಮ್ ಪಸಂದ್ ತಳಿಯ ಮಾವಿನ ಹಣ್ಣಿಗೆ ಅಧಿಕ ದರವಿದೆ.

ವಿವಿಧ ತಳಿಯ ಮಾವಿನ ಹಣ್ಣುಗಳ ಬೆಲೆ

ತೋತಾಪುರಿ - 35 ರುಪಾಯಿ, ಸೆಂದೂರ- 58 ರುಪಾಯಿ, ಬಂಗನಪಲ್ಲಿ - 58 ರುಪಾಯಿ, ಮಲ್ಲಿಕಾ- 120 ರುಪಾಯಿ, ರಸಪುರಿ - 125 ರುಪಾಯಿ, ಬಾದಾಮಿ -148 ರುಪಾಯಿ, ಕಾಲಾಪಾಡು -154 ರುಪಾಯಿ, ಅಲ್ಫೊನ್ಸೊ 155 ರುಪಾಯಿ, ಮಲಗೋವಾ - 160 ರುಪಾಯಿ, ಇಮಾಮ್ ಪಸಂದ್ - 165 ರುಪಾಯಿಗೆ ಮಾರಾಟ ಮಾಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+