ವಶಕ್ಕೆ ಪಡೆಯುವಾಗ ಕೈ, ಕಾಲಿಗೆ ಗಾಯ : ಶೋಭಾ ಕರಂದ್ಲಾಜೆ
Recommended Video

ಬೆಂಗಳೂರು, ಸೆಪ್ಟೆಂಬರ್ 5: ನಗರದ ಫ್ರೀಡಂ ಪಾರ್ಕ್ ನಿಂದ 'ಮಂಗಳೂರು ಚಲೋ' ರ‍್ಯಾಲಿ ಹೊರಟ ಬಿಜೆಪಿ ಕಾರ್ಯಕರ್ತರನ್ನು ಅಲ್ಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. 'ವಶಕ್ಕೆ ಪಡೆಯುವ ವೇಳೆ ನನಗೆ ಸಣ್ಣ ಪುಟ್ಟ ಗಾಯಗಳಾಗಿವೆ' ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.
In Pics : ಮಂಗಳೂರು ಚಲೋ rallyಯನ್ನು ಬುಡದಲ್ಲೇ ಹೊಸಕಿದ ಕಾಂಗ್ರೆಸ್
ಅನುಮತಿ ನಿರಾಕರಿಸಿದ ಮೇಲೂ ಬಿಜೆಪಿ ಕಾರ್ಯಕರ್ತರು ರ‍್ಯಾಲಿಗೆ ಮುಂದಾಗಿದ್ದರು. ಈ ವೇಳೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರ‍್ಯಾಲಿ ನಡೆಸಲು ಮುಂದಾದವರನ್ನು ಪೊಲೀಸರು ವಶಕ್ಕೆ ಪಡೆದರು. ಬಿಜೆಪಿ ನಾಯಕರಾದ ಶೋಭಾ ಕರಂದ್ಲಾಜೆ, ಆರ್. ಅಶೋಕ್, ಪ್ರತಾಪ್ ಸಿಂಹ, ಅರವಿಂದ ಲಿಂಬಾವಳಿ ಮೊದಲಾದವರನ್ನು ಬಲವಂತವಾಗಿ ಪೊಲೀಸರು ವಶಕ್ಕೆ ಪಡೆದರು.

"ವಶಕ್ಕೆ ಪಡೆಯುವ ವೇಳೆ ನನ್ನ ಕೈ ಮತ್ತು ಕಾಲುಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಪೊಲೀಸರು ವಶಕ್ಕೆ ಪಡೆಯುವಾಗ ಹಿಡಿದು ಎಳೆದಾಡಿದ್ದಾರೆ. ಕಾಲು ಮುಟ್ಟಬೇಡಿ ಎಂದರೂ ಹಿಡಿದು ಎಳೆದಾಡಿದ್ದಾರೆ. ಇದರಿಂದ ಕೈ ಚರ್ಮ ಕಿತ್ತು ಬಂದಿದೆ. ನನ್ನ ಜತೆ ಪೊಲೀಸರು ಕೆಟ್ಟದಾಗಿ ನಡೆದುಕೊಂಡಿದ್ದಾರೆ," ಎಂದು ಶೋಭಾ ಕರಂದ್ಲಾಜೆ ದೃಶ್ಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
"ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೆವು. ಆದರೆ, ಪೊಲೀಸರನ್ನು ಬಳಸಿಕೊಂಡು ರಾಜ್ಯ ಸರಕಾರ ದಬ್ಬಾಳಿಕೆ ನಡೆಸಿದೆ," ಎಂದು ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಸಿದ್ದರಾಮಮಯ್ಯ ಸರ್ಕಾರ ಯಾವುದೇ ತಡೆಯೊಡ್ಡಿದರು ಬಿಜೆಪಿ ಕಾರ್ಯಕರ್ತರಾದ ನಾವು ಯಾವ ತ್ಯಾಗವನ್ನಾದರೂ ಮಾಡಿ ಈ ಜಾಥಾವನ್ನು ಯಶಸ್ವಿಗೊಳಿಸುತ್ತೇವೆ ಎಂದು ಶೋಭಾ ಕರಂದ್ಲಾಜೆ ಗುಡುಗಿದ್ದಾರೆ












Click it and Unblock the Notifications