Manchanabele Dam: ಭಾರೀ ಮಳೆಗೆ ಭರ್ತಿಯಾದ ಡ್ಯಾಂನಿಂದ ನದಿಗೆ ನೀರು ಬಿಡುಗಡೆ, ಅರ್ಕಾವತಿಗೆ ಜೀವಕಳೆ

ಬೆಂಗಳೂರು, ಅಕ್ಟೋಬರ್ 23: ನೆಲಮಂಗಳ, ಮಾಗಡಿ ತಾಲೂಕು ವ್ಯಾಪ್ತಿಯ ಸುತ್ತಮುತ್ತಲೂ ಉತ್ತಮ ಮಳೆ ಆಗಿರುವ ಕಾರಣ ಮಂಚನಬೆಲೆ ಜಲಾಶಯದಲ್ಲಿ ಒಳಹರಿವು ಏರಿಕೆ ಆಗಿದೆ. ಇಲ್ಲಿಂದ ನೀರನ್ನು ಅರ್ಕಾವತಿ ನದಿಗೆ ಬಿಡುಗಡೆ ಮಾಡಲಾಗಿದೆ. ಡ್ಯಾಂ ಹಾಗೂ ನದಿ ಪಾತ್ರದ ಜನರಲ್ಲಿ ಪ್ರವಾಹದ ಆತಂಕ ಶುರುವಾಗಿದ್ದು, ಎಚ್ಚರಿಕೆ ನೀಡಲಾಗಿದೆ.

ಮಾಗಡಿಗೆ ನೀರು ಒದಗಿಸುವ ಈ ಮಂಚನಬೆಲೆ ಡ್ಯಾಂ 1.2 ಟಿಎಂಸಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದೇ ಜಲಾಶಯದಿಂದ ಮಾಗಡಿ ಹಾಗೂ ಬಿಡದಿ ಇನ್ನಿತರ ಭಾಗಗಳಲ್ಲಿ ಕುಡಿಯಲು ಯೋಜನೆ ಕಲ್ಪಿಸಲಾಗಿದೆ.

Manchanabele Dam Inflow Raise Huge Cusecs Water Release into Arkavathi River

ಕಳೆದ ಎರಡು ವಾರದಿಂದ ಮಾಗಡಿ, ನೆಲಮಂಗಲ, ಬೆಂಗಳೂರು ಹಾಗೂ ಮಂಚನಬೆಲೆ ಜಲಾಶಯದ ಮೇಲ್ಭಾಗದ ಪ್ರದೇಶಗಳಲ್ಲಿ ವಿಪರೀತ ಮಳೆ ಆಗುತ್ತಿರುವ ಪರಿಣಾಮ ಈ ಮಂಚನಬೆಲೆ ಡ್ಯಾಂ ಒಳಹರಿವು ಹೆಚ್ಚಾಗಿದೆ. ಹೀಗಾಗಿ ಸರ್ಕಾರ ಆರ್ಕಾವತಿ ನದಿಗೆ ಬುಧವಾರ ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿದೆ. ಇದೀಗ ಅರ್ಕಾವತಿ ನದಿ ಭರ್ತಿಯಾಗಿ ಹರಿಯುತ್ತಿದೆ.

ಜಲಾನಯನ ಪ್ರದೇಶಗಳಿಗೆ ಡ್ಯಾಂ ನೀರು ಬಳಕೆ

ಮಾಗಡಿ ತಾಲೂಕಿನ ವ್ಯಾಪ್ತಿಯಿಂದ ರಾಮನಗರ ಮೂಲಕ ಕನಕಪುರ ಮಾರ್ಗವಾಗಿ ತಮಿಳುನಾಡು ಸೇರಿಕೊಳ್ಳಲಿದೆ. ಕೇವಲ 84 ಅಡಿ ಎಚ್ಚರವಿರುವ ಈ ಜಲಾಶಯ ಅತ್ಯಧಿಕ ಜಲಾನಯನ ಪ್ರದೇಶಗಳನ್ನು ಒಳಗೊಂಡಿದೆ. ಇಲ್ಲೆಲ್ಲ ಕೃಷಿ ಚಟುವಟಿಕೆಗಳು ನಡೆಯುತ್ತಿವೆ.

Manchanabele Dam Inflow Raise Huge Cusecs Water Release into Arkavathi River

ಜಲಾಶಯದ ಸುರಕ್ಷತೆ ದೃಷ್ಟಿಯಿಂದ ನೀರನ್ನು ಹೊರ ಬೀಡಲಾಗುತ್ತಿದೆ. ಈ ಸಂಬಂಧ ಆರ್ಕಾವತಿ ನದಿ ತೀರದ ಪ್ರದೇಶಗಳಿಗೆ ಇಲ್ಲವೇ ಜಲಾಶಯದ ಹಾಗೂ ಆರ್ಕಾವತಿ ಬಫರ್ ಜೋನ್ ವ್ಯಾಪ್ತಿಯ ನಿವಾಸಿಗಳಿಗೆ ಮುನ್ನೆಚ್ಚರಿಕೆ ಕೊಡಲಾಗಿದೆ. ಸುರಕ್ಷತೆ ಸ್ಥಳಕ್ಕೆ ತೆರಳುವಂತೆ ಹೇಳಲಾಗಿದೆ.

ಅರ್ಕಾವತಿ ನದಿ ನೀರು ಕೊಳಚೆ ಪಾಲು

ತಿಂಗಳ ಹಿಂದಷ್ಟೇ ಬೆಂಗಳೂರು ಪಶ್ಚಿಮ ವಿಭಾಗದ ಅರ್ಕಾವತಿ ನದಿಯಲ್ಲಿ ನೊರೆ ಕಾಣಿಸಿಕೊಂಡಿತ್ತು. ತ್ಯಾಜ್ಯ, ಚರಂಡಿ, ಒಳಚರಂಡಿ ನೀರು ಮಿಶ್ರಣಗೊಂಡು ಈ ನದಿ ಹರಿಯುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾರೆ, ವರುಷಗಳ ಹಿಂದೆ, ಬಹುಪಯೋಗಿ ನೀರಿನ ಚಟುವಟಿಕೆಗಳಿಗೆ ಉಪಯೋಗವಾಗುತ್ತಿದ್ದ ಅರ್ಕಾವತಿ ನದಿ ನೀರು ಇದೀಗ ಕೊಳಚೆ ಪಾಲಾಗಿದೆ.

ಇದೀಗ ಮಂಚನಬೆಲೆ ಜಲಾಶಯದಿಂದ ನೀರು ಬಿಡುಗಡೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಡ್ಯಾಂ ನೀರಿನ ರಭಸಕ್ಕೆ ತ್ಯಾಜ್ಯ, ಕೊಳಚೆ ಮಿಶ್ರಿತ ಅರ್ಕಾವತಿ ನೀರು ಹರಿದು ಹೋಗಲಿದೆ. ಸದ್ಯಕ್ಕೆ ನೊರೆ ಭೀತಿ ಕಡಿಮೆ ಎನ್ನಲಾಗುತ್ತಿದೆ.

ಉಕ್ಕಿ ಹರಿದ ವೃಷಭಾವತಿ ನದಿ

ಮೊನ್ನೆಯಷ್ಟೇ ವೃಷಭಾವತಿ ನದಿ ಭಾರೀ ಮಳೆಯಿಂದಾಗಿ ಉಕ್ಕಿಹರಿದಿತ್ತು. ಇದು ಅಕರಶಃ ರಾಜಕಾಲುವೆ ಪಾಲಾಗಿದ್ದು, ಚರಂಡಿ, ತ್ಯಾಜ್ಯ ನೀರು ಈ ನದಿಯಲ್ಲಿ ಹರಿದು ಹೋಗುತ್ತದೆ. ದಶಕಗಳ ಹಿಂದೆ ಈ ವೃಷಭಾವತಿ ನದಿ ನೀರನ್ನು ದೇವಾಲಯಗಳಿಗೆ, ಕುಡಿಯಲು ಬಳಕೆ ಮಾಡುತ್ತಿದ್ದರು. ಇಂದು ನದಿ ದಡದಲ್ಲಿ ಓಡಾಡಲು ಮನಸ್ಸು ಆಗದಷ್ಟು ನದಿ ಕಲುಷಿತಗೊಂಡು ಒಳಚರಂಡಿಯಾಗಿ ಮಾರ್ಪಟ್ಟಿದೆ.

ಸದ್ಯ ಮಳೆಗೆ ಬೆಂಗಳೂರಿನ ನದಿಗಳು, ಕೆರೆ ಕಟ್ಟೆಗಳು, ಭರ್ತಿಯಾಗಿವೆ. ಕೆಲವೆಡೆ ಪ್ರವಾಹ ಸೃಷ್ಟಿಯಾಗಿದೆ. ಹೀಗಾಗದಂತೆ ತಡೆಯಲೆಂದೇ ಮಂಚನಬೆಲೆ ಡ್ಯಾಂನಿಂದ ನೀರು ಬಿಡುಗಡೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+