ಮ್ಯಾಟ್ರಿಮೋನಿಯಲ್ಲಿ ಪರಿಚಯವಾದವಳು ಮದುವೆ ನಿರಾಕರಿಸಿದ್ದಕ್ಕೆ ಕಿರುಕುಳ
ಬೆಂಗಳೂರು, ಏ.9: ವ್ಯಕ್ತಿಯೊಬ್ಬ ಮ್ಯಾಟ್ರಿಮೋನಿ ಮೂಲಕ ಪರಿಚಯ ಮಾಡಿಕೊಂಡಿದ್ದಬ್ಬಳ ಯುವತಿ ಮದುವೆಯ ಪ್ರೊಪೋಸಲ್ ಒಪ್ಪಿಕೊಳ್ಳದ ಕಾರಣ ಯುವತಿಗೆ ಕಿರುಕುಳ ನೀಡಿರುವ ಘಟನೆ ಬೆಂಗಳೂರಲ್ಲಿ ವರದಿಯಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಟೆಕ್ಕಿಯೊಬ್ಬರು ತನ್ನ ಕಿರಿಯ ತಂಗಿಯ ಪ್ರೊಫೈಲ್ ಒಂದನ್ನು ಮ್ಯಾಟ್ರಿಮೊನಿಯಲ್ಲಿ ಅಪ್‌ಲೋಡ್ ಮಾಡಿದ್ದರು. ಬಳಿಕ ಹಿರಿಯ ಸಹೋದರಿಯನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದರು.
ಆದರೆ ಕಿರಿಯ ಸಹೋದರಿ ಹಾಗೂ ಜ್ಯೋತಿ ಕೃಷ್ಣನ್ ಉತ್ತಮ ಸ್ನೇಹಿತರಾದರು. ಹಲವು ಬಾರಿ ಹೊರಗಡೆ ಸಾಕಷ್ಟು ಓಡಾಡಿದ್ದರು. ಆದರೆ ಹಿರಿಯ ಸಹೋದರಿ ಆತನನ್ನು ಭೇಟಿಯಾದಾಗ ಆತನ ಗುಣ ಅಷ್ಟು ಹಿಡಿಸಲಿಲ್ಲ. ಹಾಗಾಗಿ ಹಿರಿಯ ಸಹೋದರಿ ಮದುವೆಯನ್ನು ನಿರಾಕರಿಸಿದ್ದಳು.

ಆದರೆ ಕಿರಿಯ ಸಹೋದರಿ ಆತನನ್ನು ಮದುವೆಯಾಗಲು ಒಪ್ಪಿದ್ದಳು. ಆದರೆ ಕೃಷ್ಣನ್‌ಗೆ ಈ ಸಂಬಂಧದಿಂದ ಸಂತೋಷವಾಗಿರಲಿಲ್ಲ. ಇಬ್ಬರೂ ಸಹೋದರಿಯರಿಗೂ ಕಿರುಕುಳ ನೀಡಲು ಆರಂಭಿಸಿದ್ದ. ವಾಟ್ಸ್ ಅಪ್ ಮೂಲಕ ಬೆದರಿಕೆ ಎಸ್‌ಎಂಎಸ್‌ಗಳನ್ನು ಕಳುಹಿಸುತ್ತಿದ್ದ, ಅಷ್ಟೇ ಅಲ್ಲದೆ ಅವರ ಮನೆಗೆ ಹೋಗಿ ಕಿರಿಯ ಸಹೋದರಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ.












Click it and Unblock the Notifications