ಸ್ನೇಹಿತನನ್ನು ಕೊಂದು ಆತ್ಮಹತ್ಯೆಯ ಕತೆ ಕಟ್ಟಿದ್ದ ವ್ಯಕ್ತಿಯ ಬಂಧನ
ಬೆಂಗಳೂರು, ಮೇ 16: ಕುಡಿದ ಮತ್ತಿನಲ್ಲಿ ಸ್ನೇಹಿತನನ್ನು ಉಸಿರುಗಟ್ಟಿಸಿ ಕೊಂದು ಆತ್ಮಹತ್ಯೆಯ ಕತೆ ಕಟ್ಟಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ನೇಪಾಳ ಮೂಲದ ಬಾರ್ ಕೆಲಸಗಾರನೊಬ್ಬನ ಅಸಲಿ ಮುಖವು ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿದೆ. ಹಂತಕನ ಕೈಗೆ ಆಡುಗೋಡಿ ಪೊಲೀಸರು ಕೋಳ ತೊಡಿಸಿದ್ದಾರೆ.
ಬಿಜಿ ರಸ್ತೆಯ ಮೈಕೋ ಸಿಗ್ನಲ್ ಸಮೀಪದ ಶೈನ್ ಮಾರ್ಬಲ್ ಸೆಂಟರ್‌ನ ಕಾವಲುಗಾರ ರವೀಂದ್ರ ಬಹದ್ದೂರ್ ಜೆಟೇರಾ(35) ಮೃತ ದುರ್ದೈವಿ. ಮೃತನ ಸ್ನೇಹಿತ ರಾಜ್ ಬಿಸ್ಟಾನನ್ನು ಪೊಲೀಸರು ಬಂಧಿಸಿದ್ದಾರೆ.

ರವೀಂದ್ರ ಬಹದ್ದೂರ್ ಬಿಜಿ ರಸ್ತೆಯ ಶೈನ್ ಮಾರ್ಬಲ್‌ನಲ್ಲಿ ಕೆಲಸಕ್ಕೆ ಸೇರಿದ್ದ, ಇನ್ನೂ ರಾಜ್ ಬಿಸ್ಟಾ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಅವರಿಬ್ಬರ ಮದ್ಯೆ ಹಣಕಾಸಿನ ವ್ಯವಹಾರ ಕೂಡ ಇತ್ತು.
ಮೇ 8ರಂದು ಶೆಡ್‌ಗೆ ಬಂದ ರಾಜ, ಮದ್ಯ ಸೇವಿಸಿದ್ದಾನೆ. ಬಳಿಕ ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿದೆ. ಕೋಪಗೊಂಡ ರಾಜ ರವೀಂದ್ರ ಮೇಲೆ ಹಲ್ಲೆ ನಡೆಸಿದ್ದಾನೆ. ಮೊಣಕೈಯಿಂದ ಕತ್ತು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ನಂತರ ಕುತ್ತಿಗೆಯನ್ನು ಬಟ್ಟೆಯಿಂದ ಬಿಗಿದು ಆತನಿಗೆ ನೇಣುಹಾಕಿ ಅಲ್ಲಿಂದ ಪರಾರಿಯಾಗಿದ್ದ. ಮರಣೋತ್ತರ ಪರೀಕ್ಷೆ ಬಳಿಕ ಸತ್ಯ ತಿಳಿದುಬಂದಿದೆ. ರಾಜನನ್ನು ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications