ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು : ಅಶ್ಲೀಲ ವಿಡಿಯೋ ಅಪ್‌ಲೋಡ್ ಮಾಡುತ್ತಿದ್ದವ ಸಿಬಿಐ ಬಲೆಗೆ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮೇ 15 : ಅಂತರ್ಜಾಲ ಮತ್ತು ಸಾಮಾಜಿಕ ಜಾಲ ತಾಣಗಳಿಗೆ ಅಶ್ಲೀಲ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬೆಂಗಳೂರಿನಲ್ಲಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಸುಪ್ರೀಂಕೋರ್ಟ್ ದೂರು ದಾಖಲಿಸಿ ತನಿಖೆ ನಡೆಸಲು ಸಿಬಿಐಗೆ ಸೂಚನೆ ನೀಡಿತ್ತು.

ಬಂಧಿತನನ್ನು ಒಡಿಸ್ಸಾ ಮೂಲದ ಕೌಶಿಕ್ ಸತ್ಯಪಾಲ್ ಎಂದು ಗುರುತಿಸಲಾಗಿದೆ. ಅಂತರ್ಜಾಲ ಮತ್ತು ಸಾಮಾಜಿಕ ತಾಣಗಳಿಗೆ ಅಶ್ಲೀಲ ಮತ್ತು ಅತ್ಯಾಚಾರದ ವಿಡಿಯೋಗಳನ್ನು ಈತ ಅಪ್‌ಲೋಡ್ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.[ಫೇಸ್ ಬುಕ್ ಸಂಸ್ಥಾಪಕನಿಗೆ ಕೇರಳೀಯರ ಮನವಿ]

Cyber Crime

ಸಿಬಿಐ ಅಧಿಕಾರಿಗಳು ಗುರುವಾರ ಸಂಜೆ ಬೆಂಗಳೂರಿನಲ್ಲಿ ಈತನನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತನಿಂದ 500ಕ್ಕೂ ಹೆಚ್ಚು ವಿಡಿಯೋ ಎಂಎಂಎಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಶುಕ್ರವಾರ ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸಿ ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆಯುವ ಸಾಧ್ಯತೆ ಇದೆ. [ಸೈಬರ್ ಅಪರಾಧಿ ಹಿಡಿಯಲು ಬಂದಿದೆ ಹೊಸ ತಂತ್ರಾಂಶ]

ಸ್ವಯಂ ಪ್ರೇರಿತ ದೂರು : ಹೈದರಾಬಾದ್‍ನ ಸರ್ಕಾರೇತರ ಸ್ವಯಂ ಸೇವಾ ಸಂಸ್ಥಯೊಂದು ಪೆನ್‌ಡ್ರೈವ್ ಮತ್ತು ಪತ್ರವನ್ನು ಸುಪ್ರೀಂಕೋರ್ಟ್‍ನ ಮುಖ್ಯನ್ಯಾಯಮೂರ್ತಿ ಎಚ್.ಎಲ್.ದತ್ತು ಅವರಿಗೆ ಕೆಲವು ದಿನಗಳ ಹಿಂದೆ ಕಳುಹಿಸಿತ್ತು.

ಈ ಪತ್ರದ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳು ಸ್ವಯಂಪ್ರೇರಿತ ದೂರು ದಾಖಲಿಸಿ ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಿದ್ದರು. ತನಿಖೆ ಆರಂಭಿಸಿದ ಸಿಬಿಐ ಅಧಿಕಾರಿಗಳಿಗೆ ವೀಡಿಯೋ ಅಪ್‍ಲೋಡ್ ಆಗುತ್ತಿರುವುದು ಬೆಂಗಳೂರಿನಿಂದ ಎಂಬುದು ತಿಳಿದುಬಂದಿತ್ತು.

ಆಧುನಿಕ ತಂತ್ರಜ್ಞಾನದ ಸಹಾಯದಿಂದ ಸಿಬಿಐ ಅಧಿಕಾರಿಗಳ ತಂಡ ಪೆನ್‍ಡ್ರೈವ್‍ನಲ್ಲಿದ್ದ ಮೂರು ವಿಡಿಯೋಗಳನ್ನು ಅಪ್‍ಲೋಡ್ ಮಾಡಿರುವುದು ಕೌಶಿಕ್ ಎಂಬುದನ್ನು ಪತ್ತೆ ಹಚ್ಚಿದ್ದರು. ಇಂಟರ್‌ನೆಟ್ ಐಪಿ ಅಡ್ರೆಸ್ ಹಾಗೂ ಸರ್ವೀಸ್ ಪ್ರವೈಡರ್‌ಗಳು ನೀಡಿದ ಮಾಹಿತಿ ಅನ್ವಯ ಕೌಶಿಕ್‌ನನ್ನು ಪತ್ತೆ ಹಚ್ಚಲಾಯಿತು.

ಗುರುವಾರ ಬೆಂಗಳೂರಿನಲ್ಲಿರುವ ಕೌಶಿಕ್ ಮನೆ ಮೇಲೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ. ಅತ್ಯಾಧುನಿಕ ವೀಡಿಯೋ ಎಡಿಟಿಂಗ್ ತಂತ್ರಾಂಶ, ರಹಸ್ಯ ಕ್ಯಾಮೆರಾ, ಕಂಪ್ಯೂಟರ್‌ಗಳನ್ನು ದಾಳಿಯ ವೇಳೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

English summary
The Central Bureau of Investigation (CBI) has arrested one person from Bengaluru in connection with a case relating to uploading of alleged rape videos on the net/social networking sites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X