ಬುದ್ಧಿಮಾಂದ್ಯಳ ಮೇಲೆ ತಂದೆಯಿಂದಲೇ ಅತ್ಯಾಚಾರ

ಬೆಂಗಳೂರು, ಆ, 22 : ತನ್ನ ಬುದ್ಧಿಮಾಂದ್ಯ ಮಗಳ ಮೇಲೆ ಅತ್ಯಾಚಾರ ನಡೆಸಿದ ಪಾಪಿ ಪರಾರಿಯಾಗಿದ್ದಾನೆ. ಶ್ರೀರಾಮಪುರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಆರೋಪಿ ಷಣ್ಮುಗ ಪತ್ತೆಗೆ ಪೊಲೀಸರು ಬಲೆ ಬೀಡಿದ್ದಾರೆ.

ಮನೆಯಲ್ಲಿ ಯಾರೂ ಇಲ್ಲದೆ ವೇಳೆ ತನ್ನ ಬುದ್ಧಿಮಾಂದ್ಯ ಮಗಳನ್ನು ಆರೋಪಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಈ ವೇಳೆ ಮನೆಗೆ ಆಗಮಿಸಿದ ಬಾಲಕಿಯ ಅಜ್ಜಿ ಗಾಬರಿಯಿಂದ ಕೂಗಿಕೊಂಡಿದ್ದಾಳೆ. ತಕ್ಷಣ ಷಣ್ಮುಗ ಅಲ್ಲಿಂದ ಕಾಲ್ಕಿತ್ತಿದ್ದಾನೆ.

rape

ತಮಿಳುನಾಡು ಮೂಲದ ಷಣ್ಮುಗ ಶ್ರೀರಾಮಪುರದ ಕೈಮಗ್ಗವೊಂದರಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಹೆಂಡತಿಯನ್ನು ತಮಿಳುನಾಡಿಗೆ ಬಂದು ನೆಲೆಸುವಂತೆ ಒತ್ತಾಯಿಸುತ್ತಿದ್ದ. ಅಲ್ಲದೇ ಬುದ್ಧಿಮಾಂದ್ಯ ಮಗಳಿಗೂ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಿದ್ರೆ ಮಾತ್ರೆ ನೀಡಿ ಅತ್ಯಾಚಾರ: ಆರ್‌.ಟಿ. ನಗರದಲ್ಲಿ 12 ವರ್ಷದ ಬಾಲಕಿಗೆ ನಿದ್ರೆ ಮಾತ್ರೆ ನೀಡಿ ಚಿಕ್ಕಪ್ಪನೇ ಅತ್ಯಾಚಾರ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಚಾಮುಂಡಿ ನಗರದ ನಿವಾದಿ ಅಮ್ಜದ್‌ ಬಂಧಿತ ಆರೋಪಿ.

ಮನೆಯಲ್ಲಿ ಯಾರು ಇಲ್ಲದ ವೇಳೆ ಅಮ್ಜದ್‌ ತನ್ನ ಅಣ್ಣನ ಮಗಳ ಮೇಲೆ ಅತ್ಯಾಚಾರ ಎಸಗಿದ್ದ. ಬಾಲಕಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯ ಸಂಬಂಧಿಸಕರು ವೈದ್ಯಕೀಯ ತಪಾಸಣೆಗೆ ಕರೆದೊಯ್ದಾಗ ಅತ್ಯಾಚಾರ ನಡೆದಿರುವುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧಿತ ಅಮ್ಜದ್‌ ಕಾರ್ಪೆಂಟರ್‌ ಕೆಲಸ ಮಾಡಡುತ್ತಿದ್ದು, ಪಾಳಕರನ್ನು ಕಳೆದುಕೊಂಡಿದ್ದ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಗೆ ತನ್ನ ಮನೆಯಲ್ಲೇ ಆಶ್ರಯ ನೀಡಿದ್ದ. ಹೆಂಡತಿ ತವರು ಮನೆಗೆ ಹೋಗಿದ್ದ ವೇಳೆ ಆರೋಪಿ ಅಮ್ಜದ್‌ ಬಾಲಕಿಗೆ ನಿದ್ರೆ ಮಾತ್ರೆ ನೀಡಿ ಕೃತ್ಯವೆಸಗಿದ್ದಾನೆ. ಘಟನೆಯಿಂದ ಕಂಗಾಲಾದ ಬಾಲಕಿ ಅಜ್ಜಿ ಮನೆಗೆ ತೆರಳಿ ನಡೆದ ಸಂಗತಿ ವಿವರಿಸಿದ್ದಾಳೆ. ಪರೀಕ್ಷೆ ನಡೆಸಿದ ವೈದ್ಯರು ಅತ್ಯಾಚಾರ ನಡೆದಿರುವುದನ್ನು ದೃಢಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+