ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಯೋಗ ಅತ್ಯಗತ್ಯ: ಪ್ರೇಮಾ

By Mahesh
|
Google Oneindia Kannada News

ಬೆಂಗಳೂರು, ಜ. 18: ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಯೋಗ ಹಾಗೂ ಪ್ರಾಣಾಯಾಮದ ಅಭ್ಯಾಸ ಅತ್ಯಗತ್ಯ ಎಂದು ಕನ್ನಡ ಚಲನ ಚಿತ್ರ ನಟಿ ಪ್ರೇಮಾ ಅಭಿಪ್ರಾಯಪಟ್ಟರು.

ಮಮದೇವ ಅಕ್ಷರ ಪವರ್ ಯೋಗ ಕೇಂದ್ರದ ವಾರ್ಷಿಕೋತ್ಸವದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು, ನೂತನವಾಗಿ ಪ್ರಾರಂಭಿಸಲಾದ ಪ್ರಾಣಾಯಾಮ ತರಬೇತಿ ಕಾರ್ಯಕ್ರಮದಲ್ಲಿ ತಾವೂ ಕೂಡಾ ಪ್ರಾಣಾಯಾಮ ಮಾಡಿದರು.

ಯೋಗ ಭಾರತದ ಅತ್ಯಂತ ಪ್ರಾಚೀನ ವಿದ್ಯೆಗಳಲ್ಲೊಂದು. ಇದರ ಅಭ್ಯಾಸದಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

Mamadeva Akshara Power yoga centre Actress Prema Jayanagar branch

ಇದನ್ನು ಮನಗೊಂಡ ವಿಶ್ವವೇ ಈಗ ಇದಕ್ಕೆ ಮನ್ನಣೆ ನೀಡಿದೆ. ಆದರೆ, ಭಾರತೀಯರು ಇನ್ನೂ ಇದನ್ನು ತಮ್ಮ ಜೀವನ ಕ್ರಮದಲ್ಲಿ ಸಂಪೂರ್ಣವಾಗಿ ಅಳವಡಿಸಿಕೊಂಡಿಲ್ಲದಿರುವುದು ವಿಷಾದನೀಯ. ಯೋಗ ಹಾಗೂ ಪ್ರಾಣಾಯಾಮವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹಳ ಅಗತ್ಯವಾಗಿದ್ದು, ಹೆಚ್ಚು ಹೆಚ್ಚು ಜನರು ಈ ಬಗ್ಗೆ ಗಮನ ಹರಿಸಬೇಕು ಎಂದು ಕರೆ ನೀಡಿದರು.
Mamadeva Akshara Power yoga centre Actress Prema Jayanagar branch

ನಟ ವಿಷ್ಣುವರ್ಧನ್ ಅವರ ಬಳುವಳಿಯಂತೆ ನಾನೂ ಯೋಗದ ಆರಾಧಕಿ, ಹಲವರು ವರ್ಷಗಳಿಂದ ಯೋಗಭ್ಯಾಸ ಮಾಡುತ್ತಿದ್ದೆನೆ ಎಂದರು. ಹಾಗೆಯೇ, ಯೋಗದ ಒಂದು ಆಸನವನ್ನೂ ಪ್ರದರ್ಶಿಸಿದರು.

ಮಮದೇವ ಅಕ್ಷರ ಪವರ್ ಯೋಗದ ಮಾಲೀಕರಾದ ಡಾ ಆರ್ ವಿ ಮಮತಾರಾಜ್ ಮಾತನಾಡಿ, ಕಳೆದೊಂದು ವರ್ಷದಿಂದ ಈ ಕೇಂದ್ರದಲ್ಲಿ ಸಾವಿರಾರು ಜನರಿಗೆ ಯೋಗ ತರಬೇತಿಯನ್ನು ನೀಡುತ್ತಾ ಬಂದಿದ್ದೇವೆ.

Mamadeva Akshara Power yoga centre Actress Prema Jayanagar branch

ಯೋಗದ ಬಗ್ಗೆ ಇತ್ತೀಚೆಗೆ ಜನರಲ್ಲಿ ಆಸಕ್ತಿ ಹೆಚ್ಚಾಗುತ್ತಿದ್ದು, ನಮ್ಮ ಕೇಂದ್ರಕ್ಕೆ ಭೇಟಿ ನೀಡುವ ಜನರ ಸಂಖ್ಯೆ ಕೂಡಾ ಹೆಚ್ಚಾಗುತ್ತಿದೆ. ಜನರ ಬೇಡಿಕೆಯಂತೆ ಪ್ರಾಣಾಯಾಮದ ತರಬೇತಿಯನ್ನು ಪ್ರಾರಂಭಿಸುತ್ತಿದ್ದೇವೆ ಎಂದರು.

ನಟ ಧರ್ಮ ಕೀರ್ತಿರಾಜ್, ನಟಿ ಶ್ರೀ ಮಾಯಾ, ಬಿಬಿಎಂಪಿ ಸದಸ್ಯ ಆರ್ ವಿ ಯುವರಾಜ್ ಎಲ್ಲರೂ ಪ್ರಾಣಾಯಾಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೆಳೆದರು. ಯೋಗ ಹಾಗೂ ಪ್ರಾಣಾಯಾಮದ ಹಲವಾರು ಆಸನಗಳನ್ನು ಕಲಿತುಕೊಳ್ಳುವ ಆಸಕ್ತಿಯನ್ನು ತೋರಿಸಿದರು.

English summary
Mamadeva Akshara Power yoga centre inaugured today(Jan.18). Famous sandalwood Actors participated in Yoga & Pranayama Session organised on the eve of First year celebration of the Jayanagar branch. Actress Prema, Sree Maya & Actor Dhamra Keerthiraj were actively participated in the session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X