2018ರಿಂದ ಮಲ್ಲಿಕಾರ್ಜುನ್‌ ನಾಪತ್ತೆ: ನಟ ದರ್ಶನ್ ಗ್ಯಾಂಗ್‌ ಕೈವಾಡ?-ಮಾಹಿತಿ, ವಿವರ

Actor Darshan Case: ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆಯುತ್ತಲೇ ಇದೆ. ಅಲ್ಲದೆ, ನಟ ದರ್ಶನ್‌ ಒಂದೊಂದೇ ಮುಖವಾಡಗಳು ಬಯಲಾಗುತ್ತಲೇ ಇವೆ. ಹಳೆಯ ಪ್ರಕರಣಗಳು ಕೂಡ ಇದೀಗ ಬಯಲಿಗೆ ಬರುತ್ತಿದ್ದು, 2018ರಲ್ಲಿ ನಾಪತ್ತೆಯಾಗಿದ್ದ ನಟ ದರ್ಶನ್‌ ಮ್ಯಾನೇಜರ್‌ ಕೇಸ್‌ ಬಗ್ಗೆ ಇದೀಗ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ.

ನಟ ದರ್ಶನ್ ಅವರು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪೋಲೀಸ್ ಕಸ್ಟಡಿಯಲ್ಲಿ ವಿಚಾರಣೆಗೊಳಪಟ್ಟಿದ್ದಾರೆ. ಒಟ್ಟು ದರ್ಶನ್‌ & ಪವಿತ್ರಾ ಗೌಡ ಸೇರಿ 13 ಜನ ಸದ್ಯ ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆಗೊಳಪಟ್ಟಿದ್ದಾರೆ.

Mallikarjun missing from 2018 Actor Darshan gang involved

ಇದರ ನಡುವೆಯೂ ಇದೀಗ ದರ್ಶನ್ ಹಳೆಯ ಮ್ಯಾನೇಜರ್‌ ಮಲ್ಲಿಕಾರ್ಜುನ್ ನಾಪತ್ತೆ ಪ್ರಕರಣದ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದೆ. ದರ್ಶನ್ ಮ್ಯಾನೇಜರ್ ಆಗಿದ್ದ ಮಲ್ಲಿಕಾರ್ಜುನ್ ಸಂಕನಗೌಡರ್ ಅವರು 2018ರಿಂದಲೂ ನಾಪತ್ತೆಯಾಗಿದ್ದು, ಈ ಬಗ್ಗೆ ಶಂಕೆಗಳು ವ್ಯಕ್ತವಾಗಿವೆ.

ದರ್ಶನ್ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ನಾಪತ್ತೆ ಪ್ರಕರಣ ಇದೀಗ ಮತ್ತೆ ಮುನ್ನಲೆಗೆ ಬಂದಿದೆ. 2011ರಿಂದ 2018ರವರೆಗೂ ದರ್ಶನ್ ಮ್ಯಾನೇಜರ್ ಆಗಿದ್ದವರು. ಅದರೆ, 2018ರಿಂದ ದಿಢೀರ್‌ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಏಪ್ರಿಲ್‌ನಲ್ಲಿ ಮಲ್ಲಿಕಾರ್ಜುನ್‌ ಬಗ್ಗೆ ಮಾಹಿತಿ ನೀಡಿ, ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಲು ಕೋರ್ಟ್ ಸೂಚಿಸಿತ್ತು. ಆದರೂ ಈ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ.

ಮಲ್ಲಿಕಾರ್ಜುನ್‌ ಅವರು, ಅರ್ಜುನ್ ಸರ್ಜಾ ನಿರ್ಮಾಣದ ಪ್ರೇಮಬರಹ ಚಿತ್ರದ ವಿತರಣೆಯಲ್ಲಿ ವಂಚನೆ ಆರೋಪ ಎದುರಿಸಿದ್ದರು. ದರ್ಶನ್ ಮ್ಯಾನೇಜರ್ 1 ಕೋಟಿ ರೂಪಾಯಿ ವಂಚಿಸಿದ ಬಗ್ಗೆ ಅರ್ಜುನ್ ಸರ್ಜಾ ದೂರು ನೀಡಿದ್ದು, ಈ ಪ್ರಕರಣದ ಬಳಿಕ ಮಲ್ಲಿಕಾರ್ಜುನ್ ಮೇಲೆ ನಟ ದರ್ಶನ್ ಕೋಪಿತಗೊಂಡಿದ್ದರು. ಬಳಿಕ 2011ರಿಂದಲೂ ದರ್ಶನ್ ಮ್ಯಾನೇಜರ್ ಮಲ್ಲಿಕಾರ್ಜುನ್ ಸಂಕನಗೌಡರ್ ನಾಪತ್ತೆ ಆಗಿದ್ದರು.

ದರ್ಶನ್‌ಗೆ ಸೇರಿದ 10 ಕೋಟಿ ರೂಪಾಯಿ ಹಣ ವಂಚನೆ ಮಾಡಿದ್ದಾಗಿ ಮಲ್ಲಿಕಾರ್ಜುನ್ ಮೇಲೆ ಆರೋಪ ಬಂದಿತ್ತು. ನಾಪತ್ತೆಯಾಗುವ ಮುನ್ನ ಮಲ್ಲಿಕಾರ್ಜುನ್ ತಮ್ಮ ಪತ್ನಿಗೆ ಪತ್ರವೊಂದನ್ನು ಬರೆದಿದ್ದರು ಎನ್ನಲಾಗಿದ್ದು, ಇದೀಗ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಬಳಿಕ ಮಲ್ಲಿಕಾರ್ಜುನ್ ಈ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ. ನಟ ದರ್ಶನ್‌ ಗ್ಯಾಂಗ್‌ ಮೇಲೆಯೂ ಶಂಕೆ ವ್ಯಕ್ತವಾಗುತ್ತಿದೆ.

ಇನ್ನು ನಟ ದರ್ಶನ್ ಅವರ ಹಳೆಯ ಮ್ಯಾನೇಜರ್ ಮಲ್ಲಿಕಾರ್ಜುನ್ ಸಂಕನಗೌಡರ್ ಬದುಕಿದ್ದಾರಾ ಅಥವಾ ಎಲ್ಲಿ ಹೋಗಿದ್ದಾರೆ ಎನ್ನುವ ಅನುಮಾನಗಳು ಎದ್ದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+