Rahul Gandhi: ಯಾರು ಬೇಕಾದ್ರು ಸಿಎಂ ಆಗಲಿ: ಖರ್ಗೆ ವಾರ್ನಿಂಗ್
ಕೋಲಾರ: 'ಮೊದಲಿಗೆ ಕಾಂಗ್ರೆಸ್ ಗೆಲ್ಲಲಿ, ಆಮೇಲೆ ಯಾರು ಸಿಎಂ ಆಗ್ತಾರೆ ಅನ್ನೋದನ್ನ ನಿರ್ಧರಿಸೋಣ' ಅಂತಾ ಹೇಳುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಸಿಎಂ ಖುರ್ಚಿ ಕಿತ್ತಾಟದ ಬಗ್ಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಕೋಲಾರ ಹೊರವಲಯದ ಟಮಕದಲ್ಲಿ ಆಯೋಜಿಸಿರುವ 'ಜೈ ಭಾರತ್' ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಂತರಿಕ ಕಚ್ಚಾಟದ ಬಗ್ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಒಗ್ಗಟ್ಟಿನಿಂದ ನಾವು ಈ ಚುನಾವಣೆ ಎದುರಿಸಬೇಕಿದೆ, ಒಟ್ಟಿನಿಂದ ಚುನಾವಣೆ ಎದುರಿಸಿ ಬಹುಮತ ಪಡೆದರೆ ಮಾತ್ರ ಅಧಿಕಾರಕ್ಕೆ ಬರಲು ಸಾಧ್ಯ. ಬಹುಮತ ಬಂದ ನಂತರ ಶಾಸಕರು ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನ ನಿರ್ಧಾರ ಮಾಡಲಿದ್ದಾರೆ. ಅದಕ್ಕೂ ಮೊದಲು ಸಿಎಂ ಸ್ಥಾನದ ಬಗ್ಗೆ ಚರ್ಚೆ ಮಾಡಬೇಡಿ. ಮೊದಲು ಗೆಲ್ಲುವುದನ್ನು ನೋಡಿ ಎಂದಿದ್ದಾರೆ ಖರ್ಗೆ. ಇದು ಕಾಂಗ್ರೆಸ್‌ನಲ್ಲಿ ಎದ್ದಿದ್ದ ಆಂತರಿಕ ಕಚ್ಚಾಟಕ್ಕೆ ಬ್ರೇಕ್ ಹಾಕುವ ಲಕ್ಷಣ ತೋರಿಸಿದೆ. ಬಹಿರಂಗವಾಗಿ ಎಐಸಿಸಿ ಅಧ್ಯಕ್ಷರು ನೀಡಿದ ಹೇಳಿಕೆ ಕೈ ನಾಯಕರಲ್ಲಿ ಸಂಚಲನ ಸೃಷ್ಟಿಸಿದೆ.

ಸಿದ್ದರಾಮಯ್ಯ ಎದುರಲ್ಲೇ ಖರ್ಗೆ ಖಡಕ್ ಹೇಳಿಕೆ
4 ಬಾರಿ ಮುಂದೂಡಿಕೆಯಾಗಿದ್ದ ಕಾಂಗ್ರೆಸ್‌ನ ಜೈ ಭಾರತ್ ಸಮಾವೇಶ ಇಂದು ಭರ್ಜರಿಯಾಗಿ ಆರಂಭವಾಗಿದೆ. ಸಮಾವೇಶದಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇದೇ ವೇದಿಕೆಯನ್ನು ಆಂತರಿಕ ಕಚ್ಚಾಟಕ್ಕೆ ಬ್ರೇಕ್ ಹಾಕಲು ಬಳಸಿಕೊಂಡ ಎಐಸಿಸಿ ಅಧ್ಯಕ್ಷ ಖರ್ಗೆ. ಮಾಜಿ ಸಿಎಂ ಸಿದ್ದರಾಮಯ್ಯ ಎದುರಲ್ಲೇ, ಸಿಎಂ ಖುರ್ಚಿಗೆ ಕಿತ್ತಾಟ ಬೇಡ ಎಂದಿದ್ದಾರೆ. ಈಗಾಗಲೇ ಕಾಂಗ್ರೆಸ್‌ನಲ್ಲಿ ಶುರು ಆಗಿರುವ ಮುಖ್ಯಮಂತ್ರಿ ಪಟ್ಟದ ಫೈಟ್ ಈ ಮೂಲಕ ಮತ್ತೊಂದು ಹಂತ ತಲುಪಿದಂತಾಗಿದೆ.
ಸಮಾವೇಶದಲ್ಲಿ ಕಾರ್ಯಕರ್ತರ ದಂಡು
ಅಂದಹಾಗೆ ಕಾಂಗ್ರೆಸ್ ಈ ಸಮಾವೇಶವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದೆ. ಇದೇ ಕಾರಣಕ್ಕೆ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದಾರೆ. ಹೀಗಾಗಿ 3 ಬೃಹತ್ ಜರ್ಮನ್ ಶೆಡ್, 60 ಸಾವಿರಕ್ಕೂ ಅಧಿಕ ಆಸನ ಹಾಗೂ ಎಲ್‌ಇಡಿ ಪರದೆ ಪರದೆಯ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಚುನಾವಣೆಗೆ ಇನ್ನೇನು ಕೆಲವೇ ದಿನ ಬಾಕಿ ಇರುವಂತೆ ಬಯಲುಸೀಮೆ ಭಾಗದಲ್ಲಿ ಭರ್ಜರಿ ಮತಬೇಟೆ ಆರಂಭಿಸಿದ್ದಾರೆ ಕಾಂಗ್ರೆಸ್ ಲೀಡರ್ಸ್.
ಭದ್ರತೆ ಪರಿಶೀಲನೆ ಮಾಡಿದ್ದ ಸಿಬ್ಬಂದಿ
ರಾಹುಲ್ ಗಾಂಧಿ ಆಗಮನದ ಹಿನ್ನೆಲೆಯಲ್ಲಿ ಸಾಕಷ್ಟು ಭದ್ರತೆ ವಹಿಸಲಾಗಿತ್ತು. ಅಷ್ಟಕ್ಕೂ ಎಐಸಿಸಿ ನಾಯಕ ರಾಹುಲ್ ಗಾಂಧಿ ಕಚೇರಿ ಸಿಬ್ಬಂದಿ 5 ದಿನದ ಹಿಂದೆ ಕೋಲಾರಕ್ಕೆ ಬಂದಿದ್ದು, ಭದ್ರತಾ ವ್ಯವಸ್ಥೆ ಪರಿಶೀಲಿಸಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಸಚಿವ ಸೀತಾರಾಮ್ ಸೇರಿದಂತೆ ಅನೇಕರು ನಿರಂತರವಾಗಿ ಪರಿಶೀಲನೆ ನಡೆಸುತ್ತಿದ್ದರು. ಸಮಾವೇಶ ದಿನಾಂಕ ಅಂತಿಮಗೊಂಡ ಬಳಿಕ 3 ಹೆಲಿಪ್ಯಾಡ್ ನಿರ್ಮಿಸಲಾಗಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಕಟೌಟ್ ಹಾಗೂ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಇಷ್ಟೆಲ್ಲಾ ಅದ್ಧೂರಿತನದ ನಡುವೆ ಭರ್ಜರಿಯಾಗಿ ಸಮಾವೇಶ ಆರಂಭವಾಗಿದೆ.

ಒಟ್ನಲ್ಲಿ ಕಾಂಗ್ರೆಸ್‌ನ ಮಹತ್ವದ ಸಮಾವೇಶದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಎಐಸಿಸಿ ಅಧ್ಯಕ್ಷರು, ಪರೋಕ್ಷವಾಗಿ ಕಾಂಗ್ರೆಸ್ ಆಂತರಿಕ ಕಚ್ಚಾಟಕ್ಕೂ ಬ್ರೇಕ್ ಹಾಕಿದ್ದಾರೆ. ಆದರೆ ಖರ್ಗೆ ಅವರು ನೀಡಿರುವ ಈ ಹೇಳಿಕೆಯಿಂದ ಕೈಪಡೆ ಸಿಎಂ ಆಕಾಂಕ್ಷಿಗಳು ಸೈಲೆಂಟ್ ಆಗ್ತಾರಾ, ಅಥವಾ ಮುಖ್ಯಮಂತ್ರಿ ಪಟ್ಟಕ್ಕಾಗಿ ಮುಂದೆಯೂ ಕಿತ್ತಾಟ ಮುಂದುವರಿಯುತ್ತಾ. ಇದು ಚುನಾವಣೆಯಲ್ಲಿ ಹೇಗೆಲ್ಲಾ ಪರಿಣಾಮ ಬೀರಬಹುದು ಅನ್ನೋದನ್ನ ಇನ್ನೂ 25 ದಿನ ಕಾದು ನೋಡಬೇಕಿದೆ.












Click it and Unblock the Notifications