ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲೆಗಳಲ್ಲಿ ಮದುಮಗಳು ನಾಟಕ ಪ್ರದರ್ಶನ ವಿಸ್ತರಣೆ

|
Google Oneindia Kannada News

ಬೆಂಗಳೂರು, ಜನವರಿ 30: ನಗರದ ಜ್ಞಾನಭಾರತಿಯಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ರಾಷ್ಟ್ರಕವಿ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ನಾಟಕ ಪ್ರದರ್ಶನವನ್ನು6 ದಿನಗಳ ಕಾಲ ವಿಸ್ತರಿಸಲಾಗಿದೆ.
ಫೆ2 ರಿಂದ 10 ರವರೆಗೂ ವಿಸ್ತರಿಸಲು ನಿರ್ಧರಿಸಿರುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಿಳಿಸಿದೆ.

ಕಳೆದ ಶುಕ್ರವಾರ ಸುಮಾರು ೧೫೦ಮಂದಿ ವಾಪಾಸ್ಸಾದರೆ, ಇನ್ನೂ ಕೆಲವರು ಟಿಕೇಟ್ ಹಣ ವಾಪಾಸ್ ಪಡೆದು ಹಿಂದಿರುಗಿದ್ದರು. ಒಟ್ಟಾರೆ ಪ್ರದರ್ಶನ ಹೆಚ್ಚಳಕ್ಕೆ ಪ್ರೇಕ್ಷಕರು ಸಾಕಷ್ಟು ಒತ್ತಡ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಫೆಬ್ರವರಿಯಲ್ಲಿ ನಾಟಕ ಪ್ರದರ್ಶನವನ್ನು ಮುಂದುವರೆಸಲು ಒತ್ತಡ ಹಾಕಿದ್ದರು.

ಪುಟ್ಟಪ್ಪನ ಮುದ್ದಿನ ಮಗಳು ಈ 'ಮಲೆಗಳಲ್ಲಿ ಮದುಮಗಳು'

Malegalalli Madumagalu six more days performance

ಜನವರಿ 31 ರಂದು ಪ್ರದರ್ಶನ ಕೊನೆಗೊಳ್ಳಬೇಕಿತ್ತು. ಆದರೆ ಫೆ.10 ರವರೆಗೂ ಪ್ರದರ್ಶನ ಮುಂದುವರೆಯಲಿದೆ. ಪ್ರದರ್ಶನಗಳ ಹೆಚ್ಚಳದಿಂದ ನಾಟಕ ಒಟ್ಟು 82 ಪ್ರದರ್ಶನಗಳನ್ನು ಕಾಣಲಿದೆ. ಬೇಡಿಕೆ ಇರುವ ಕಾರಣ ಇಲ್ಲಿಯೇ 90 ಪ್ರದರ್ಶನಗಳನ್ನು ಮುಗಿಸಿ ಹಿಂದಿರುಗವ ಬಗ್ಗೆ ಚಿಂತಿಸಿದ್ದು, ಈ ಕುರಿತು ಸಂಬಂಧಪಟ್ಟ ಇಲಾಖೆ ಹಿರಿಯ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿ ನಿರ್ಧಾರ ಕೈಗೊಳ್ಳಲಾಗಿದೆ.

English summary
Malegalalli Madumagalu Kuvempu's novel based drama performance in Kalagrama has been extended six more days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X