• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಬಿಎಂಪಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾರ್ಷಲ್‌ಗಳ ಖಾಯಂಗೆ ಒತ್ತಾಯ

|

ಬೆಂಗಳೂರು, ಫೆಬ್ರವರಿ 25: ಬಿಬಿಎಂಪಿಯ ವಿವಿಧ ಉದ್ದೇಶಗಳಿಗಾಗಿ ನೇಮಿಸಲಾಗಿರುವ ಮಾರ್ಷಲ್‌ಗಳನ್ನು ಖಾಯಂಗೊಳಿಸುವಂತೆ ಒತ್ತಾಯ ಕೇಳಿಬರುತ್ತಿದೆ.

ಹಸಿ ಕಸ ನಿರ್ವಹಣೆ ಉತ್ತೇಜನಕ್ಕೆ ತೆರಿಗೆ ವಿನಾಯ್ತಿಗಾಗಿ ಅಭಿಯಾನ

ಕೆರೆ, ಬಯಲು ಪ್ರದೇಶ ಹೀಗೆ ಎಲ್ಲೆಂದರಲ್ಲಿ ಕಸ ಹಾಕುವುದನ್ನು ನಿಯಂತ್ರಿಸಲು ಬಿಬಿಎಂಪಿ ಮಾರ್ಷಲ್‌ಗಳನ್ನು ನೇಮಿಸಿತ್ತು. ಅವರನ್ನು ಬಿಬಿಎಂಪಿಯ ಖಾಯಂ ನೌಕರರನ್ನಾಗಿ ನೇಮಕ ಮಾಡುವಂತೆ ಮನವಿ ಮಾಡುತ್ತಿದ್ದಾರೆ.

ಎಲ್ಲೆಂದರಲ್ಲಿ ಕಸ ಹಾಕೋರಿಗೆ ಪಾಠ ಕಲಿಸಲು ಈತ ಮಾಡಿದ ಉಪಾಯಕ್ಕೆ ಸಿಕ್ಕಿತು ಫಲ

ಫೆಬ್ರವರಿ ಆರಂಭದಲ್ಲಿ ಇನ್ನೂ ನಾಲ್ಕು ಮಾರ್ಷಲ್‌ಗಳನ್ನು ಕುಂದನಹಳ್ಳಿ ಕೆರೆಯ ಮೇಲ್ವಿಚಾರಣೆಗಾಗಿ ನೇಮಿಸಲಾಯಿತು. ಕೆರೆಯ ಸುತ್ತಮುತ್ತ ಐಟಿ ಕ್ಯಾಂಪಸ್, ಐಟಿ ತೆಕ್ ಪಾರ್ಕ್‌ಗಳಿರುವ ಕಾರಣ ಆ ಪ್ರದೇಶದಲ್ಲಿ ತ್ಯಾಜ್ಯ ಬಿಸಾಡುವುದು, ಕಸಕ್ಕೆ ಬೆಂಕಿ ಹಚ್ಚುವುದು ಇಂತಹ ಯಾವುದೇ ಕಾರ್ಯಗಳು ನಡೆಯದಂತೆ ನಿಗಾ ಇಡಲು ನಾಲ್ಕು ಮಾರ್ಷಲ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ.

ಬಿಬಿಎಂಪಿಯಲ್ಲಿ ಒಟ್ಟು 231 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಅದರಲ್ಲಿರುವ 198 ಮಾರ್ಷಲ್‌ಗಳನ್ನಾದರೂ ಖಾಯಂ ಮಾಡಿ ಎಂದು ಮನವಿ ಮಾಡಿದ್ದಾರೆ. ಹಾಗೆಯೇ ಮಾರ್ಷಲ್‌ಗಳಿಗಾಗಿ 10 ಕೋಟಿ ಮೀಸಲಿಡುವಂತೆ ಕೇಳಿಕೊಂಡಿದ್ದಾರೆ.

ಒಬ್ಬ ಮಾರ್ಷಲ್ ಸುಮಾರು 3-4 ಕಿ.ಮೀ ವ್ಯಾಪ್ತಿ ಪ್ರದೇಶವನ್ನು ನೋಡಿಕೊಳ್ಳುತ್ತಾರೆ. ದ್ವಿಚಕ್ರದಲ್ಲಿ ಓಡಾಡುತ್ತಾ ನಿಗಾ ಇಡುತ್ತಿದ್ದಾರೆ. ಯಾರಾದರೂ ತ್ಯಾಜ್ಯ ಬಿಸಾಡುವುದು ಕಂಡು ಬಂದರೆ ತಕ್ಷಣ ಅವರಿಗೆ ದಂಡ ವಿಧಿಸಲಾಗುತ್ತದೆ. ಸಣ್ಣ ಸಹಾಯವಾಣಿ ಕೇಂದ್ರಗಳನ್ನೂ ಕೂಡ ತೆರೆಯಲಾಗಿದ್ದು, ಸಾರ್ವಜನಿಕರು ಫೋಟೊಗಳನ್ನು ಕಳುಹಿಸಬಹುದಾಗಿದೆ.

English summary
The BBMP had earlier added a weapon to its arsenal marshals, in order to crack down on citizens dumping waste on sly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X