ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ; ರೊಚ್ಚಿಗೆದ್ದ ವಿದ್ಯಾರ್ಥಿನಿಯರು!

|
Google Oneindia Kannada News

ಬೆಂಗಳೂರು, ಜುಲೈ25: ಬೆಂಗಳೂರು ರಾಜ್ಯದ ರಾಜಧಾನಿ. ಸರ್ಕಾರದ ಕಣ್ಣನ್ನು ತೆರೆಸಲು ಸಂಘ ಸಂಸ್ಥೆಗಳು, ರೈತರು, ಆಶಾ ಕಾರ್ಯಕರ್ತರು, ಅಂಗನವಾಡಿ ಸಹಾಯಕಿಯರು, ರೈತರು, ಸೇರಿದಂತೆ ಹಲವರು ನಗರದಲ್ಲಿ ಪ್ರತಿಭಟನೆಯನ್ನು ಮಾಡುತ್ತಾರೆ. ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಬೇಕೆಂದರೆ ಇರುವ ಪ್ರಮುಖ ಸ್ಥಳ ಫ್ರೀಡಂ ಪಾರ್ಕ್. ಆದರೆ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆಗೆ ಅವಕಾಶವನ್ನು ನೀಡುವುದರಿಂದ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.

ಸಿಲಿಕಾನ್ ಸಿಟಿಯ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನಾಕಾರರ ಆಕ್ರೋಶ ಭರಿತ ಭಾಷಣಗಳು, ಮೈಕ್‌ಗಳ ಸೌಂಡ್‌ನಿಂದ ವಿದ್ಯಾಭ್ಯಾಸಕ್ಕೆ ಸಮಸ್ಯೆ ಎದುರಾಗುತ್ತಿದೆ ಎಂದು ಮಹಾರಾಣಿ ಕ್ಲಸ್ಟರ್ ಕಾಲೇಜಿನ ವಿದ್ಯಾರ್ಥಿನಿಯರು ಪ್ರತಿಭಟನೆಯನ್ನು ಮಾಡುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಬೆಂಗಳೂರು ರಸ್ತೆ, ಜಂಕ್ಷನ್‌ನಲ್ಲಿ ಸಂಚಾರ ಸಮಸ್ಯೆ ಕಡಿಮೆಯಾಗಿದೆ ಬೆಂಗಳೂರು ರಸ್ತೆ, ಜಂಕ್ಷನ್‌ನಲ್ಲಿ ಸಂಚಾರ ಸಮಸ್ಯೆ ಕಡಿಮೆಯಾಗಿದೆ

ದಿನಬೆಳಗಾದರೆ ಒಂದಲ್ಲ ಒಂದು ಪ್ರತಿಭಟನೆ ನಡೆಯುತ್ತಲೇ ಇರುತ್ತದೆ. ಫ್ರೀಡಂಪಾರ್ಕ್ ಬಳಿಯಿರುವ ಸ್ಥಳೀಯ ಮಹಾರಾಣಿ ಕಾಲೇಜು ವಿದ್ಯಾರ್ಥಿಗಳ ಸರ್ಕಾರ ಪ್ರತಿಭಟನೆಯನ್ನು ಬೇರೆಡೆಗೆ ಸ್ಥಳಾಂತರ ಮಾಡುವಂತೆ ಒತ್ತಾಯಿಸಿದ್ದಾರೆ. ಫ್ರೀಡಂಪಾರ್ಕ್‌ನಲ್ಲಿ ತಿಂಗಳುಗಳ ಕಾಲ ಪ್ರತಿಭಟನೆಗಳು ನಡೆಯುತ್ತದೆ. ಪ್ರತಿಭಟನೆಗಳು ನಡೆಯುವಾಗ ರಸ್ತೆ ಜಾಮ್ ಆಗುವುದರಿಂದಲೂ ತೊಂದರೆಯಾಗುತ್ತಿದೆ ಎಂಬ ವಿಚಾರವನ್ನು ವಿದ್ಯಾರ್ಥಿನಿಯರು ಹೇಳುತ್ತಿದ್ದಾರೆ.

Maharani College Students Protest aganest Freedom park protests

ಮೈಕ್ ಘೋಷಣೆಗಳಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಪರೀಕ್ಷೆ ಬರೆಯುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸೌಂಡ್ ಎಫೆಕ್ಟ್‌ನಿಂದ ಸಮಸ್ಯೆ ಎದುರಾಗುತ್ತಿದೆ. ಇದರಿಂದ ಪರೀಕ್ಷೆ ಬರೆಯಲು ಕಷ್ಟವಾಗುತ್ತಿದೆ. ಹಾಗಾಗಿ ಈ ಸಮಸ್ಯೆಗಳ ಬಗ್ಗೆ ಕೋರ್ಟ್ ಮೆಟ್ಟಿಲೇರಲು ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ.

ಪೊಲೀಸರು ಪ್ರತಿಭಟನೆಗೆ ಅನುಮತಿಯನ್ನು ನೀಡುವ ಸಮಯದಲ್ಲಿ ಕಾಲೇಜು ನಡೆಯುವ ದಿನಗಳಲ್ಲಿ ಅನುಮತಿಯನ್ನು ನೀಡಬಾರದು. ಧ್ವನಿವರ್ಧಕಗಳನ್ನು ಬಳಸುವ ಸಮಯದಲ್ಲಿ ಕಡಿಮೆ ಡೆಸಿಬಲ್ ಇರುವ ಮೈಕ್‌ಗಳಿಗೆ ಅವಕಾಶವನ್ನು ಮಾಡಿಕೊಡಬೇಕು. ಕಾಲೇಜಿನ ಸಮೀಪದಲ್ಲಿ ಯಾವುದೇ ಪ್ರತಿಭಟನಾಕಾರರ ಹೈಡ್ರಾಮ ನಡೆಯದಂತೆ ಗಮನಹರಿಸಬೇಕು. ಪರೀಕ್ಷೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ಅನಮತಿಯನ್ನು ನೀಡಬಾರದು ಎಂದು ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರು ಆಗ್ರಹಿಸುತ್ತಿದ್ದಾರೆ.

Recommended Video

ಒಕ್ಕಲಿಗ ಸ್ವಾಮೀಜಿ ಮತ್ತು ದೇವೇಗೌಡರ ಬಗ್ಗೆ ಜಮೀರ್ ಅಹಮದ್ ಹೇಳಿದ್ದೇನು? | OneIndia Kannada

English summary
The students of Maharani Cluster College have vented their anger by staging a protest saying that the sound of the microphones and angry speeches of the protestors in the Freedom Park of Bengaluru City is causing problems for education, Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X