Mahalakshmi Case: ಬೆಂಗಳೂರು ಮಹಾಲಕ್ಷ್ಮೀ ಕೊಲೆಯ ಹಿಂದಿದೆ ದೊಡ್ಡ ಕಥೆ!

ಬೆಂಗಳೂರು ಅಕ್ಟೋಬರ್ 5: ಬೆಂಗಳೂರಿನ ಮಹಾಲಕ್ಷ್ಮಿ ಕೊಲೆ ಪ್ರಕರಣ ರಾಜ್ಯದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ದೊಡ್ಡ ಸುದ್ದಿಯಾಗಿದೆ. ಮಹಾಲಕ್ಷ್ಮಿ ದೇಹ ಪತ್ತೆಯಾದ ದಿನದಿಂದಲೂ ಈಕೆಯ ಕೊಲೆ ಪ್ರಕರಣ ಭೇದಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಕೊಲೆ ಮಾಡಿದ ವ್ಯಕ್ತಿ ಪತ್ತೆ ಮಾಡುವಷ್ಟರಲ್ಲಿ ಆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಾಗಾದರೆ ಮಹಾಲಕ್ಷ್ಮಿ ಕೊಲೆ ಆಗಿದ್ದು ಯಾಕೆ? ಕೊಲೆ ಮಾಡಿದ ಆರೋಪಿಗೂ ಮಹಾಲಕ್ಷ್ಮಿಗೂ ಏನು ಸಂಬಂಧ? ಮಹಾಲಕ್ಷ್ಮಿ ಕೊಲೆಯ ಹಿಂದಿನ ರಹಸ್ಯವೇನು ಎಂದು ತಿಳಿಯೋಣ.

ಮಹಾಲಕ್ಷ್ಮಿ ಒಬ್ಬ ವಿವಾಹಿತೆ. ಈಕೆಗೆ ಮಗು ಕೂಡ ಇದೆ. ತನ್ನ ಮೊದಲ ಪತಿಯಯೊಂದಿಗೆ ಜಗಳವಾಡಿ ಬೆಂಗಳೂರಿಗೆ ಬಂದು ನೆಲೆಸಿದ್ದಳು. ಜೀವನ ನಡೆಸಲು ಬೆಂಗಳೂರಿನಲ್ಲೇ ಕೆಲಸಕ್ಕೆ ಸೇರಿದ ಮಹಾಲಕ್ಷ್ಮಿ ಎಂಟು ತಿಂಗಳಿನಿಂದ ಗಂಡನತ್ತ ಮುಖ ಮಾಡಿ ನೋಡಿರಲಿಲ್ಲ. ಈಕೆ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಮುಕ್ತಿರಂಜನ್ ಎಂಬಾತನ ಪರಿಚಯವಾಗಿತ್ತು. ಈತ ಕಂಪನಿಯಲ್ಲಿ ಫ್ಲೋರ್ ಮ್ಯಾನೇಜರ್ ಆಗಿದ್ದರು.

Mahalakshmi murder case There is a big story behind the murder of Bengaluru Mahalakshmi

ಮುಕ್ತಿರಂಜನ್ ಆಗಾಗ ಮಹಾಲಕ್ಷ್ಮಿಯನ್ನು ಮನೆಗೆ ಬಂದು ಡ್ರಾಪ್ ಮಾಡಿ ಹೋಗುತ್ತಿದ್ದರು. ಕಾಲಕ್ರಮೇಣ ಇವರ ನಡುವಿನ ಸ್ನೇಹ ಪ್ರೀತಿಯಾಗಿ ಬೆಳೆಯಿತು. ಇಬ್ಬರು ಜೊತೆಯಾಗಿ ಇರಲು ಬಯಸಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿದರು. ಮಹಾಲಕ್ಷ್ಮಿ ಕೂಡ ಮುಕ್ತಿರಂಜನ್‌ನನ್ನು ಮದುವೆಯಾಗಲು ಒಪ್ಪಿದಳು. ಆದರೆ ತನಗೆ ಈಗಾಗಲೆ ಮದುವೆಯಾಗಿರುವ ಬಗ್ಗೆ ಮಹಾಲಕ್ಷ್ಮಿ ಮುಕ್ತಿರಂಜನ್‌ ಬಳಿ ಹೇಳಿಕೊಂಡಿಲ್ಲ.

ಮುಕ್ತಿರಂಜನ್ ತಾನು ಮದುವೆಯಾಗುತ್ತಿರುವುದದಾಗಿ ತನ್ನ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಬೆಂಗಳೂರಿನಲ್ಲಿ ಇದ್ದ ತನ್ನ ಸಹೋದರ ಹಾಗೂ ಒಡಿಶಾದ ಗಂಜಂನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮತ್ತೋರ್ವ ಸಹೋದರನಿಗೆ ತಾನು ಮದುವೆ ಆಗುತ್ತಿರುವ ಬಗ್ಗೆ ಮುಕ್ತಿರಂಜನ್ ಹೇಳಿಕೊಂಡಿದ್ದರು.

Mahalakshmi murder case There is a big story behind the murder of Bengaluru Mahalakshmi

ಅದ್ಯಾಕೋ ಮುಕ್ತಿರಂಜನ್‌ಗೆ ಅನುಮಾನ ಬಂದು ಮಹಾಲಕ್ಷ್ಮಿ ಮೊಬೈಲ್ ಪರೀಕ್ಷಿಸಿದ್ದಾರೆ. ಆಗ ಮಹಾಲಕ್ಷ್ಮಿಗೆ ಮದುವೆಯಾಗಿ ಮಗು ಇರುವುದು ಗೊತ್ತಾಗಿದೆ. ಇದರಿಂದ ಮುಕ್ತಿರಂಜನ್ ಮಹಾಲಕ್ಷ್ಮಿಯಿಂದ ಅಂತರ ಕಾಯ್ದುಕೊಂಡಿದ್ದರು. ಜೊತೆಗೆ ಮಹಾಲಕ್ಷ್ಮಿ ಈಗಾಗಲೇ ಮದುವೆಯಾಗಿದ್ದಾಳೆ ಎನ್ನುವ ವಿಚಾರವನ್ನು ಮುಕ್ತಿರಂಜನ್ ತನ್ನ ಸಹೋದರ ಬಳಿ ಹೇಳಿಕೊಂಡಿದ್ದರು.

ಮುಕ್ತಿರಂಜನ್ ತಾನು ಕೆಲಸ ಮಾಡುವ ಮತ್ತೊಬ್ಬ ಯುವತಿಯೊಂದಿಗೆ ಸಲಿಗೆಯಿಂದ ಇರಲು ಶುರು ಮಾಡಿದ್ದಾರೆ. ಇದನ್ನು ಸಹಿಸದ ಮಹಾಲಕ್ಷ್ಮಿ ಯುವತಿಯೊಂದಿಗೆ ಜಗಳವಾಡಿದ್ದಾಳೆ. ಇದು ಮುಕ್ತಿರಂಜನ್‌ಗೆ ಗೊತ್ತಾಗಿ ಮಹಾಲಕ್ಷ್ಮಿಯೊಂದಿಗೆ ಜಗಳವಾಡಿದ್ದಾನೆ. ಈ ವೇಳೆ ಮುಕ್ತಿರಂಜನ್ ಮಹಾಲಕ್ಷ್ಮಿಗೆ ಮದುವೆಯಾಗಿರುವ ಬಗ್ಗೆ ಯಾಕೆ ಮುಚ್ಚಿಟ್ಟೆ ಎಂದು ಜಗಳವಾಡಿದ್ದಾನೆ. ಹೀಗೆ ಇಬ್ಬರು ಜಗಳವಾಡಿ ದೂರವಾಗಿದ್ದಾರೆ.

ಬಳಿಕ ಮಹಾಲಕ್ಷ್ಮಿ ಮುಕ್ತಿರಂಜನ್ ಇರೋ ಮನೆಗೆ ಹೋಗಿದ್ದಾಳೆ. ಎಷ್ಟೇ ಬಾಗಿಲು ಬಡಿದರೂ ಮುಕ್ತಿರಂಜನ್ ಕೋಪದಿಂದ ಬಾಗಿಲು ತೆಗೆದಿರಲಿಲ್ಲ. ಆದರೆ ಮಹಾಲಕ್ಷ್ಮಿ ಅತ್ತು ಕರೆದು ಮುಕ್ತಿರಂಜನ್‌ ಬಾಗಿಲು ತೆರೆಯುವಂತೆ ಮಾಡಿದ್ದಾಳೆ. ಇಬ್ಬರು ಎಲ್ಲವನ್ನೂ ಮರೆತು ಇರುವುದಾಗಿ ಒಪ್ಪಿ ಒಂದು ರಾತ್ರಿ ಕಳೆದಿದ್ದಾರೆ.

ಆದರೆ ರಾತ್ರಿ ಮತ್ತೆ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಮುಕ್ತಿರಂಜನ್‌ ಮೇಲೆ ಮಹಾಲಕ್ಷ್ಮಿ ಕೈ ಮಾಡಿದ್ದಾಳೆ. ಆಗ ಮುಕ್ತಿರಂಜನ್‌ ಕೂಡ ಮಹಾಲಕ್ಷ್ಮಿ ಮೇಲೆ ಕೈ ಮಾಡಿದ್ದಾನೆ. ಈ ವೇಳೆ ಮುಕ್ತಿ ಪ್ರಜ್ಞೆ ತಪ್ಪಿದ್ದಾಳೆ. ಬಳಿಕ ಆಕೆಯ ಮುಖಕ್ಕೆ ದಿಂಬು ಇಟ್ಟು ಉಸಿರುಗಟ್ಟಿಸಿ ಆಕೆಯನ್ನು ಕೊಲೆ ಮಾಡಿದ್ದಾನೆ ಮುಕ್ತಿರಂಜನ್.

ಬಳಿಕ ಆಕೆಯ ದೇಹದ ವಾಸನೆ ಬರಬಹುದು ಎನ್ನುವ ಕಾರಣಕ್ಕೆ ಹೊರಗಿನಿಂದ ಕತ್ತಿ ಖರೀದಿಸಿ ತಂದು, ಬಾತ್‌ ರೂಂನಲ್ಲಿ ಆಕೆಯ ದೇಹವನ್ನು 57 ತುಂಡಾಗಿಸಿ ಫ್ರೀಜ್‌ನಲ್ಲಿ ಇಟ್ಟಿದ್ದಾನೆ. ಬಳಿಕ ಬಾತ್‌ರೂಮ್‌ ಅನ್ನು ಡೆಟಲ್‌ನಿಂದ ಕ್ಲೀನ್ ಮಾಡಿದ್ದಾನೆ. ಅಲ್ಲಿಂದು ಸೀದಾ ಸಹೋದರನ ಬಳಿ ಹೋಗಿದ್ದಾನೆ. ತಾನು ಮಹಾಲಕ್ಷ್ಮಿಯನ್ನು ಕೊಲೆ ಮಾಡಿರುವುದಾಗಿ ಹೇಳಿದ್ದಾನೆ.

ಕೊಲೆ ಪ್ರಕರಣ ಬೆಳಕಿಗೆ ಬಂದ ಬಳಿಕ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆಗ ಮುಕ್ತಿರಂಜನ್ ಒಡಿಶಾದಲ್ಲಿರುವ ತನ್ನ ಇನ್ನೊಬ್ಬ ಸಹೋದರನ ಬಳಿ ಹೋಗಿದ್ದಾನೆ. ಅಲ್ಲಿಗೂ ಪೊಲೀಸರು ಹುಡುಕಿಕೊಂಡು ಬರುವ ಭಯ ಆವರಿಸಿದೆ. ಆಗ ಭದ್ರಕ್‌ಗೆ ಬಂದ ಮುಕ್ತಿರಂಜನ್‌ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+