ಇಂದಿನಿಂದ ಮಾಗಡಿ ರಸ್ತೆ-ಮೈಸೂರು ರಸ್ತೆ ಮೆಟ್ರೋ ಸಂಚಾರ
ಬೆಂಗಳೂರು, ನವೆಂಬರ್ 18 : ಮಾಗಡಿ ರಸ್ತೆ-ಮೈಸೂರು ರಸ್ತೆ ನಡುವಿನ ನಮ್ಮ ಮೆಟ್ರೋ ರೈಲು ಸಂಚಾರ ಬುಧವಾರ ಸಂಜೆಯಿಂದ ಅಧಿಕೃತವಾಗಿ ಆರಂಭವಾಗಲಿದೆ. 6.4 ಕಿ.ಮೀ. ಉದ್ದದ ರೀಚ್ -2 ನೇರಳೆ ಮಾರ್ಗವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಉದ್ಘಾಟಿಸಿದ್ದರು.
ಮಾಗಡಿ ರಸ್ತೆ-ಮೈಸೂರು ರಸ್ತೆ ನಡುವಿನ ಎಲ್ಲಾ 6 ನಿಲ್ದಾಣಗಳು ಪ್ರಯಾಣಿಕರನ್ನು ಸ್ವಾಗತಿಸಲು ಸಿದ್ಧವಾಗಿವೆ. ನವೆಂಬರ್ 18ರ ಬುಧವಾರ ಸಂಜೆ 4 ಗಂಟೆಯಿಂದ ಸಾರ್ವಜನಿಕ ಸಂಚಾರ ಆರಂಭವಾಗಲಿದೆ. ಇಂದು ಸಂಜೆ 4 ರಿಂದ 10 ಗಂಟೆಯ ತನಕ ಮೆಟ್ರೋ ರೈಲು ಸಂಚಾರ ನಡೆಸಲಿದೆ. [ಮಾಗಡಿ ರಸ್ತೆ-ಮೈಸೂರು ರಸ್ತೆ ಮಾರ್ಗದ ವಿಶೇಷತೆಗಳೇನು?]

ಗುರುವಾರದಿಂದ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯ ತನಕ ನಮ್ಮ ಮೆಟ್ರೋ ರೈಲು ಸಂಚಾರ ನಡೆಸಲಿದೆ. ಎಂಜಿ ರಸ್ತೆ-ಬೈಯಪ್ಪನಹಳ್ಳಿ, ಸಂಪಿಗೆ ರಸ್ತೆ-ನಾಗಸಂದ್ರ ಮಾರ್ಗಗಳ ನಂತರ ಮತ್ತೊಂದು ಮಾರ್ಗ ಜನರ ಸಂಚಾರಕ್ಕೆ ಇಂದು ಮುಕ್ತವಾಗುತ್ತಿದೆ. [ನಮ್ಮ ಮೆಟ್ರೋಕ್ಕೆ ಯಾವ ಹೆಸರಿಡಬೇಕು? ನೀವೇ ಹೇಳಿ]
6 ನಿಲ್ದಾಣಗಳು : ಮಾಗಡಿ ರಸ್ತೆ-ಮೈಸೂರು ರಸ್ತೆ ನೇರಳೆ ಮಾರ್ಗದಲ್ಲಿ ಮಾಗಡಿ ರಸ್ತೆ, ಹೊಸಹಳ್ಳಿ, ವಿಜಯನಗರ, ಅತ್ತಿಗುಪ್ಪೆ, ದೀಪಾಂಜಲಿ ನಗರ ಮತ್ತು ಮೈಸೂರು ರಸ್ತೆ ಸೇರಿ ಆರು ನಿಲ್ದಾಣಗಳಿವೆ. [ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿ ವಿವರಗಳು]
ಟಿಕೆಟ್ ದರ [ಮಾಗಡಿ ರಸ್ತೆ-ಮೈಸೂರು ರಸ್ತೆ ಮೆಟ್ರೋ ಉದ್ಘಾಟನೆ : ಚಿತ್ರಗಳು]
* ಮಾಗಡಿ ರಸ್ತೆ - ಹೊಸಹಳ್ಳಿ 10 ರೂ.
* ಮಾಗಡಿ ರಸ್ತೆ - ವಿಜಯನಗರ 13
* ಮಾಗಡಿ ರಸ್ತೆ -ಅತ್ತಿಗುಪ್ಪೆ 14
* ಮಾಗಡಿ ರಸ್ತೆ - ದೀಪಾಂಜಲಿ ನಗರ 16
* ಮಾಗಡಿ ರಸ್ತೆ - ಮೈಸೂರು ರಸ್ತೆ 17












Click it and Unblock the Notifications