• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಪಕ್ಷ ನಾಯಕ ಕೊನೆಗೂ ಫೈನಲ್: ಮಿಸ್ತ್ರಿ ನೀಡಿದ ಹೆಸರು ಯಾವುದು?

|

ಬೆಂಗಳೂರು, ಅಕ್ಟೋಬರ್ 8: ವಿಪಕ್ಷ ನಾಯಕನ ಸ್ಥಾನಕ್ಕೆ ಕೊನೆಗೂ ಹೆಸರು ಅಂತಿಮವಾಗಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಕಾಂಗ್ರೆಸ್ ಹೈಕಮಾಂಡ್‌ಗೆ ವರದಿ ಸಲ್ಲಿಸಲಿದ್ದಾರೆ.

ಎಐಸಿಸಿ ವೀಕ್ಷಕರಾಗಿ ಬಂದಿದ್ದ ಮಧುಸೂದನ್ ಮಿಸ್ತ್ರಿ ವರದಿ ಸಿದ್ಧಪಡಿಸಿದ್ದು, ಸಿದ್ದರಾಮಯ್ಯಗೆ ವಿಪಕ್ಷ ಸ್ಥಾನ ಸಿಗಲಿದ್ದು, ಸಿಎಲ್‍ಪಿ ಸ್ಥಾನ ತಪ್ಪಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಿದ್ದರಾಮಯ್ಯ ಸಿಎಲ್‌ಪಿ ಸ್ಥಾನವನ್ನೂ ಉಳಿಸಿಕೊಂಡು ವಿರೋಧ ಸ್ಥಾನವನ್ನೂ ಗಿಟ್ಟಿಸಿಕೊಳ್ಳಬಹುದು ಎಂಬ ಮಾತು ವ್ಯಕ್ತವಾಗಿತ್ತು.

ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಹಿರಿಯರ ನಾಯಕರ ಪ್ರತಿಭಟನೆ

ಎರಡೂ ಬಣದ ಕೆಲವು ನಾಯಕರುಗಳು ದೆಹಲಿಗೆ ತೆರಳಿದ್ದು, ಅಲ್ಲಿ ಹೈಕಮಾಂಡ್ ಅನ್ನು ಭೇಟಿ ಆಗುವ ಪ್ರಯತ್ನ ನಡೆಸಿದ್ದಾರೆ. ಕೆ.ಎಚ್.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್, ಎಚ್‌.ಕೆ.ಪಾಟೀಲ್ ಅವರುಗಳು ಸಿದ್ದರಾಮಯ್ಯ ವಿರೋಧಿ ಬಣದಲ್ಲಿದ್ದಾರೆ.

ಸಿಎಲ್‌ಪಿ ನಾಯಕರಾಗಿ ಎಚ್‌ಕೆ ಪಾಟೀಲ ಸಾಧ್ಯತೆ

ಸಿಎಲ್‌ಪಿ ನಾಯಕರಾಗಿ ಎಚ್‌ಕೆ ಪಾಟೀಲ ಸಾಧ್ಯತೆ

ಸಿಎಲ್‍ಪಿ ನಾಯಕರಾಗಿ ಉತ್ತರ ಕರ್ನಾಟಕ ಭಾಗದ ಹಿರಿಯ ನಾಯಕ ಎಚ್.ಕೆ ಪಾಟೀಲ್ ಅವರಿಗೆ ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಾಗಿದೆ. ಇದೇ 10ಕ್ಕೆ ಅಧಿವೇಶನ ಆರಂಭವಾಗಲಿದ್ದು, 9ರ ಸಂಜೆ ಪ್ರಕಟವಾಗಲಿದೆ ಎನ್ನಲಾಗುತ್ತಿದೆ.

ಕಾಂಗ್ರೆಸ್‌ಗೆ ಯಾವ ವ್ಯಕ್ತಿಯೂ ಅನಿವಾರ್ಯವಲ್ಲ

ಕಾಂಗ್ರೆಸ್‌ಗೆ ಯಾವ ವ್ಯಕ್ತಿಯೂ ಅನಿವಾರ್ಯವಲ್ಲ

ಇತ್ತ ಕಾಂಗ್ರೆಸ್ಸಿಗೆ ಯಾವ ವ್ಯಕ್ತಿಯೂ ಅನಿವಾರ್ಯವಲ್ಲ ಎಂದು ಸಿದ್ದರಾಮಯ್ಯಗೆ ಮಾಜಿ ಸಂಸದ ಮುನಿಯಪ್ಪ ತಿವಿದಿದ್ದಾರೆ. ಈ ಮಧ್ಯೆ, ಸಚಿವ ಈಶ್ವರಪ್ಪ ತಮ್ಮ ಅಳಿಯನಿಗಾಗಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಆಪ್ತ ಅಧಿಕಾರಿಯನ್ನು ಎತ್ತಂಗಡಿ ಮಾಡಿದ್ದಾರೆ. ಲೋಕೋಪಯೋಗಿ ಇಲಾಖೆಯ ಬೆಂಗಳೂರು ವಿಭಾಗದಲ್ಲಿದ್ದ ಎಂಟಿಬಿ ಆಪ್ತ, ಪದ್ಮನಾಭ್ ಜಾಗಕ್ಕೆ ನಗರಾಭಿವೃದ್ಧಿ ಇಲಾಖೆಯಲ್ಲಿ ಕಾರ್ಯಪಾಲಕ ಎಂಜಿನಿಯರ್ ಆಗಿದ್ದ ಅಳಿಯ ಕೆ.ಸಿ ಶ್ರೀನಿವಾಸ್ ಅವರನ್ನು ತಂದಿದ್ದಾರೆ.

ನಿರ್ಣಾಯಕ ಘಟ್ಟದಲ್ಲಿ ಪ್ರತಿಪಕ್ಷ ನಾಯಕನ ಸ್ಥಾನ: ಅಸಲಿಗೆ ಅಂದು ಕೆಪಿಸಿಸಿ ಕಚೇರಿಯಲ್ಲಿ ನಡೆದಿದ್ದೇನು!

ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ

ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ

ಸಿದ್ದರಾಮಯ್ಯ ಪರ ಮತ್ತು ವಿರೋಧ ಬಣಗಳ ನಡುವಿನ ಕಿತ್ತಾಟ ತಾರಕಕ್ಕೆ ಏರಿದೆ. ಸಿದ್ದರಾಮಯ್ಯ ವಿರೋಧಿ ಬಣ ನಿನ್ನೆ ಕೆಪಿಸಿಸಿ ಕಚೇರಿಯ ಎದುರು ಮೌನ ಪ್ರತಿಭಟನೆ ಮಾಡಿದೆ. ಕೆ.ಎಚ್.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್ ಇನ್ನೂ ಹಲವು ಮುಖಂಡರು 'ಕಾಂಗ್ರೆಸ್ ನವರಿಗೆ ಕಾಂಗ್ರೆಸ್ ಉಳಿಸೋ ಬುದ್ಧಿ ಕೊಡು ಭಗವಂತಾ' ಎಂಬ ಫ್ಲೆಕ್ಸ್ ಕಟ್ಟಿಕೊಂಡು ಕೆಪಿಸಿಸಿ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಿದ್ದಾರೆ. ವಿರೋಧ ಪಕ್ಷ ಸ್ಥಾನಕ್ಕೆ ಸದ್ಯಕ್ಕೆ ಕಿತ್ತಾಟ ಜೋರಾಗಿದ್ದು, ಪರಮೇಶ್ವರ್ ಅಥವಾ ಎಚ್‌.ಕೆ.ಪಾಟೀಲ್‌ ಅವರಿಗೆ ವಿರೋಧ ಪಕ್ಷ ಸ್ಥಾನ ನೀಡಬೇಕೆಂದು ಕೆಲವರು. ಸಿದ್ದರಾಮಯ್ಯ ಅವರಿಗೆ ನೀಡಬೇಕೆಂದು ಕೆಲವರು ಹೈಕಮಾಂಡ್ ಅನ್ನು ಒತ್ತಾಯಿಸಿದ್ದಾರೆ.

63 ಪ್ರಮುಖರ ಅಭಿಪ್ರಾಯ ಸಂಗ್ರಹ

63 ಪ್ರಮುಖರ ಅಭಿಪ್ರಾಯ ಸಂಗ್ರಹ

22 ಶಾಸಕರು, 28 ಮಾಜಿ ಸಂಸದರು, 6 ವಿಧಾನ ಪರಿಷತ್ ಸದಸ್ಯರು ಸೇರಿ 63 ಪ್ರಮುಖರ ಅಭಿಪ್ರಾಯ ಸಂಗ್ರಹಿಸಿದ ಅವರು ವಿಪಕ್ಷ ನಾಯಕ ಸ್ಥಾನ, ಶಾಸಕಾಂಗ ಪಕ್ಷದ ನಾಯಕ ಸ್ಥಾನ ಇನ್ನೂ ಕೆಲವು ಪ್ರಮುಖ ಸ್ಥಾನಗಳನ್ನು ಯಾರಿಗೆ ನೀಡಬೇಕು ಎಂಬ ಬಗ್ಗೆ ಎಂಬ ಬಗ್ಗೆ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Madhusudan Mistry Will Give Report To Congress High Command Today,Madhusudan Mistry arrived in Bengaluru to seek opinions of leaders on who should be appointed leader of the opposition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more