ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಸವೇಶ್ವರನಗರದಲ್ಲಿ ಮಾದರಿ ಮಾದಯ್ಯನ ಕಾಣಿರಿ, ಉಘೇ ಎನ್ನಿ!

|
Google Oneindia Kannada News

ಬೆಂಗಳೂರು, ಮಾರ್ಚ್ 21: ಕರ್ನಾಟಕದ ಜನಪದ ಇತಿಹಾಸದ ಅಂತರಂಗದ ಅದ್ಭುತ ಅಧ್ಯಾಯಗಳಲ್ಲಿ ಒಂದಾಗಿರುವ ಮಾದೇಶ್ವರನ ಪುಣ್ಯ ಕಥೆಯ ಸಮಕಾಲೀನ ಅರ್ಥದ ನಾಟಕ ಮಾದರಿ ಮಾದಯ್ಯ. ಮಾದಯ್ಯ ಅವರನ್ನು ಕುರಿತ ನಾಟಕ ಮಹಾ ಶಿವರಾತ್ರಿ ಅಂಗವಾಗಿ ಕೆಎಚ್ ಕಲಾಸೌಧದಲ್ಲಿ ಮಾರ್ಚ್ 24ರಂದು ಪ್ರದರ್ಶನಗೊಳ್ಳುತ್ತಿದೆ.

ಹುಟ್ಟು ಬಾಲ್ಯದ ನೆನಪಿನಲ್ಲಿ ತಪ್ಪು ಪ್ರಗತಿಯ ಹಾದಿಯಲ್ಲಿ ಅಮಲೇರಿದ ಬಾಲಕನೊಬ್ಬ ನಡೆಸುತ್ತಿರುವ ಬಹುರಾಷ್ಟ್ರೀಯ ಕಂಪನಿಯ ಕಾರಿನಂತೆ ಕುರುಡು ವೇಗದಲ್ಲಿ ಮುನ್ನುಗ್ಗುತ್ತಿರುವ ನಮ್ಮ ಜಗತ್ತಿನ ಕೆಳಸ್ತರದ ಕಂಸಾಳೆಯವರ ಸಾಮೂಹಿಕ ನೆನಪಿನಲ್ಲಿ ಮಾದೇಶ್ವರನ ಹೆಸರು, ಅವನ ಏಳು ಮಲೆಗಳ ಚಿತ್ರ ಹೊರಡಿಸುವ ಭಾವನೆಗಳೇ ಬೇರೆ. ಅವನು ಒಬ್ಬ ಸಾಂಸ್ಕೃತಿ ಪುರುಷ. ಕಸಿದುಕೊಳ್ಳಲ್ಪಟ್ಟಿದ್ದ ಬೆಳಕನ್ನು ಮರಳಿಸಿದವ. ನರಮನುಷ್ಯರಾದಿಯಾಗಿ ಎಲ್ಲಾ ಜೀವ - ಜಡಗಳನ್ನೂ ಕಲ್ಪನೆಯ ಆಚೆಕಡೆ ಸೀಮೆಗೆ ಕೊಂಡೊಯ್ಯುವವ ಮನವತ್ವ ದೈವತ್ವವನ್ನು ಮೀರಿದ ದೈವೀಕ ಮಾನವತೆಯ ಹರಿಕಾರ, ಅವನೊಬ್ಬ ಕಠೋರ ವಾಸ್ತವಗಳಿಗಿಂತ ಕಠೋರವಾದ ಆದರ್ಶ.

ಟಿಸಿಎಸ್ ಟೆಕ್ಕಿಗಳ ಅಭಿನಯದ ಅವತಾರ್ಸ್ ನಾಟಕಗಳ ಸಂಗಮಟಿಸಿಎಸ್ ಟೆಕ್ಕಿಗಳ ಅಭಿನಯದ ಅವತಾರ್ಸ್ ನಾಟಕಗಳ ಸಂಗಮ

ಮಲೆ ಮಾದೇಶ್ವರ ಪುರಾಣದ ಹೃದಯ, ಶ್ರವಣ ದೊರೆ ಸಂಹಾರದ ಸಾಲು. ಇದು ಮೇಲುನೋಟಕ್ಕೆ ಅದ್ಭುತ ಪವಾಡದ ಕತೆ. ಮಾದೇಶ್ವರ ನಿಸರ್ಗದ ಶಕ್ತಿಗಳನ್ನು ತನ್ನ ಅಡಿಯಾಳುಗಳನ್ನಾಗಿಸಿಕೊಂಡು ಶ್ರವಣನನ್ನು ನಾಶ ಮಾಡುವ ಕತೆ. ಈ ನಾಟಕವನ್ನು ಕನ್ನಡ ರಂಗಭೂಮಿಯಲ್ಲಿ ಕಳೆದ 17 ವರ್ಷಗಳಿಂದ ಸಕ್ರಿಯರಾಗಿರುವ ಸಂಪತ್ ಕುಮಾರ್ ರವರು ನಮ್ಮ ತಂಡಕ್ಕೆ ನಿರ್ದೇಶನವನ್ನು ಮಾಡಿದ್ದಾರೆ.

ನಾಟಕ ಪವಾಡದ ಸರಣಿಯನ್ನು ಯಥಾವತ್ತಾಗಿ ನಿರೂಪಿಸಿಲ್ಲ

ನಾಟಕ ಪವಾಡದ ಸರಣಿಯನ್ನು ಯಥಾವತ್ತಾಗಿ ನಿರೂಪಿಸಿಲ್ಲ

ಇಡೀ ನಾಟಕ ಪವಾಡದ ಸರಣಿಯನ್ನು ಯಥಾವತ್ತಾಗಿ ನಿರೂಪಿಸದೆ, ಒಂದು ರೀತಿಯ ಆಟದ ಮೂಲಕ, ಆಚರಣೆಯ ಮೂಲಕ ಕಟ್ಟಿಕೊಡುವುದರಿಂದ ಇಲ್ಲಿನ ಪವಾಡಗಳು ಕಾರಣೀಕಗಳಾಗುತ್ತವೆ. ಮಾದರಿ ಏಳು ಬೇಲಿಯಾಚೆ ಕೀಳಾಗಿ ಹುಟ್ಟಿದವನು. ಅವನ ವಿರೋಧಿ ಎಲ್ಲ ದೇವಮಾನವರನ್ನು ದಮನ ಮಾಡುತ್ತಿರುವ ಶ್ರವಣ. ಅವನು ನೆಲದೇವತೆಯನ್ನು ಕೆಡಿಸಲು ಹೊರಡುವನು. ಯುದ್ಧ ಶಾಂತಿ ಎರಡನ್ನೂ ತನ್ನ ದಬ್ಬಾಳಿಕೆ ಅಸ್ತ್ರವನ್ನಾಗಿಸಿಕೊಂಡವನು. ಇಂತಹವನನ್ನು ಮಾದರಿ ಮುಗಿಸುವುದು ತುಳಿತಕ್ಕೊಳಗಾದ ಎಲ್ಲಾ ಜನಗಳ ರಕ್ತ, ಬೆವರುಗಳ ಸಾಕಾರ ರೂಪವಾಗಿರುವ ಉರಿಚಮ್ಮಾಳಿಗೆಯಿಂದ. ಮೇಲುನೋಟಕ್ಕೆ ಧಾರ್ಮಿಕ ಭ್ರಮೆ ಹುಟ್ಟಿಸಿದರು ಆಂತರ್ಯದಲ್ಲಿ ಧಾರ್ಮಿಕ ಸಂಸ್ಥೆ ಮತ್ತು ಸಿದ್ಧಾಂತಗಳ ಪ್ರಬಲ ಟೀಕೆಯಾಗಿರುವ ಈ ನಾಟಕ ತನ್ನ ರಾಜಕೀಯ ಹಾಗೂ ಸಾಂಸ್ಕೃತಿಕ ಅರ್ಥ ಸಾಧ್ಯತೆಗಳಿಂದ ಇಂದಿನ ಕನ್ನಡಿಯಾಗಿದೆ.

ನಾಟಕ ತಂಡದ ಪರಿಚಯ

ನಾಟಕ ತಂಡದ ಪರಿಚಯ

ನಾಟಕ ತಂಡ ನಾಟಕ - ಮಾದಾರಿ ಮಾದಯ್ಯ ದಿನಾಂಕ - 24 ಮಾರ್ಚ್ 2019
ರಚನೆ - ಹೆಚ್ ಎಸ್ ಶಿವಪ್ರಕಾಶ್ ಭಾನುವಾರ ಸಂಜೆ 7:00ಕ್ಕೆ
ನಿರ್ದೇಶನ - ಸಂಪತ್ ಕುಮಾರ್
ಸ್ಥಳ : ಕೆಇಎ ಪ್ರಭಾತ್ ರಂಗಮಂದಿರ, ಬಸವೇಶ್ವರಿನಗರ
ನಿರ್ವಹಣೆ - ನಂದೀಶ್ ದೇವ್
ಬೆಳಕು - ಮಂಜು ನಾರಾಯಣ್
ಟಿಕೆಟ್ ದರ - 150/
ಪ್ರಸಾದನ - ಮೋಹನ್ ಕುಮಾರ್
ರಂಗ ಸಜ್ಜಿಕೆ - ಶ್ರೀಧರ ಮೂರ್ತಿ
ರಂಗ ಪರಿಕರ - ಪ್ರಶಾಂತ್ ಹೆಬ್ಬಸೂರು
ಸಂಗೀತ - ಚಂದ್ರಶೇಖರ ಆಚಾರ್

ಮಹಾ ಶಿವರಾತ್ರಿ ವಿಶೇಷ: ಮಾದರಿ ಮಾದಯ್ಯ ನಾಟಕ ನೋಡಿಮಹಾ ಶಿವರಾತ್ರಿ ವಿಶೇಷ: ಮಾದರಿ ಮಾದಯ್ಯ ನಾಟಕ ನೋಡಿ

ನಿರ್ದೇಶಕ ಸಂಪತ್ ಕುಮಾರ್

ನಿರ್ದೇಶಕ ಸಂಪತ್ ಕುಮಾರ್

17 ವರ್ಷಗಳಿಂದ ಸಕ್ರಿಯರಾಗಿರುವ ಸಂಪತ್ ಕುಮಾರ್ ಈ ನಾಟಕವನ್ನು ಕನ್ನಡ ರಂಗಭೂಮಿಯಲ್ಲಿ ಕಳೆದ 17 ವರ್ಷಗಳಿಂದ ಸಕ್ರಿಯರಾಗಿರುವ ಸಂಪತ್ ಕುಮಾರ್ ರವರು ನಮ್ಮ ತಂಡಕ್ಕೆ ನಿರ್ದೇಶನವನ್ನು ಮಾಡಿದ್ದಾರೆ. ಅಭಿನಯ ತರಂಗದ ವಿದ್ಯಾರ್ಥಿಯಾಗಿದ್ದ ಇವರು ಪ್ರಸ್ತುತ ಸಿನಿಮಾ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ಕಿರಗೂರಿನ ಗಯ್ಯಾಳಿಗಳು, ಪಟಾಕಿ, ಕೆ ಜಿ ಎಫ್ ಮತ್ತು ಇನ್ನೂ ಅನೇಕ ಕನ್ನಡ ಚಿತ್ರಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಅಶ್ವಘೋಷ ಥಿಯೇಟರ್ ಟ್ರಸ್ಟ್

ಅಶ್ವಘೋಷ ಥಿಯೇಟರ್ ಟ್ರಸ್ಟ್

ಅಶ್ವಘೋಷ ಥಿಯೇಟರ್ ಟ್ರಸ್ಟ್ 12 ಜನವರಿ 2018ರಂದು ನೊಂದಾಯಿಸಿ ಮಾರ್ಚ್ 11ರಂದು ಕಾರ್ಯಾರಂಭ ಮಾಡಲು ಅಡಿ ಇಟ್ಟಿತು. ಒಂದು ವರ್ಷದಲ್ಲಿ ಬೀದಿ ಬಿಂಬ ರಂಗದ ತುಂಬ, ಪುರಹರ, ನನ್ನ ಕಥೆ, ಮತ್ತು ಈಗ ಮಾದರಿ ಮಾದಯ್ಯ ನಾಟಕಗಳನ್ನು ಪ್ರಸ್ತುತ ಪಡಿಸಿದೆ. ಪುರಹರ ನಾಟಕಕ್ಕೆ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ 5 ವಿಭಾಗಗಳಲ್ಲಿ ಪ್ರಶಸ್ತಿ ಲಭಿಸಿದ್ದು. ಬೀದಿ ಬಿಂಬ ರಂಗದ ತುಂಬಾ ಮತ್ತು ನನ್ನ ಕಥೆ (ಏಕವ್ಯಕ್ತಿ ಪ್ರದರ್ಶನ) ನಾಟಕಗಳು ಪ್ರಯೋಗಾತ್ಮಕ ಮತ್ತು ಸಮಾಜದ ಕನ್ನಡಿಗಳಾಗಿವೆ. ಅಷ್ಟೆ ಅಲ್ಲದೆ ಇತರ ಅತ್ಯುತ್ತಮ ನಾಟಕಗಳನ್ನು ಆಹ್ವಾನಿಸಿ ಆ ತಂಡಗಳಿಗೂ ಬೆಂಗಳೂರಿನಲ್ಲಿ ನಾಟಕ ಮಾಡಲು ಪ್ರೋತ್ಸಾಹ ನೀಡುತ್ತಾ ಬಂದಿದೆ. ಅದರಲ್ಲಿ ಹಾವೇರಿಯ 'ವಾಲಿ ವಧೆ', ನೀನಾಸಂನ 'ಕುರುಕ್ಷೇತ್ರ' ಮತ್ತು ಮನೋರಂಗದ 'ಕರ್ಣ ರಸಾಯನ' ನಾಟಕಗಳು ಸೇರಿವೆ. ಕನ್ನಡ ಪರವಾಗಿ ಏನಿವಾಗ', ಪಾರ್ಶ್ವವಾಯು ಮತ್ತು ಮೂರ್ಛೆ ರೋಗದ ಅರಿವು ಮೂಡಿಸುವ ಹಲವು ಬೀದಿನಾಟಕ ಪ್ರದರ್ಶನಗಳನ್ನು ತಂಡ ಪ್ರದರ್ಶಿಸಿದೆ

English summary
Maadari Maadayya Play is directed by Mr. Sampath Kumar will be staged at KEA Prabhath Ranga Mandira Basaveshwara Nagar, Bengaluru on March 24, 2019. One of the great contribution to kannada Jaanapada is the story of Lord Mahadeshwara, which created a history in the folk lore and in contemporary to that is this play " Maadaari Madayya ".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X