ಬೆಂಗಳೂರು : ದೇಗುಲದಲ್ಲಿ ಸ್ಫೋಟಿಸಿದ್ದು ಸಿಲಿಂಡರ್

ಕಾವೇರಿನಗರದಲ್ಲಿನ ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಭಾನುವಾರ ರಾತ್ರಿ ಗರ್ಭಗುಡಿವೊಳಗೆ ನಿಗೂಢ ಸ್ಫೋಟ ಸಂಭವಿಸಿತ್ತು. ಸ್ಫೋಟದ ತೀವ್ರತೆಗೆ ಗರ್ಭಗುಡಿಯ ಬಾಗಿಯಲು ಮುರಿದಿದ್ದು, ಗೋಡೆಗಳು ಬಿರುಕು ಬಿಟ್ಟಿದ್ದವು. ಸ್ಫೋಟದ ತನಿಖೆ ನಡೆಸುತ್ತಿದ್ದ ಪೊಲೀಸರು ಸೋಮವಾರ ಘಟನೆಗೆ ನಿಖರವಾರ ಕಾರಣ ಪತ್ತೆ ಹಚ್ಚಿದ್ದಾರೆ. (ದುರ್ಗಾಪರಮೇಶ್ವರಿ ದೇಗುಲದಲ್ಲಿ ಸ್ಫೋಟ)
ಸೋಮವಾರ ಬೆಳಗ್ಗೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಾಲಯದ ಅರ್ಚಕ ಮಹೇಶ್ ಭಟ್‌ರನ್ನು ಪೊಲೀಸರು ವಿಚಾರಣೆ ನಡೆಸಿದರು. ಈ ವೇಳೆ ಅರ್ಚಕರು ರಾತ್ರಿ ನೈವೇದ್ಯ ತಯಾರಿಸಿದ ಬಳಿಕ ಸಿಲಿಂಡರ್ ಆಫ್ ಮಾಡಿರಲಿಲ್ಲ. ಆದ್ದರಿಂದ ಗ್ಯಾಸ್ ಸೋರಿಕೆಯಾಗುತ್ತಿತ್ತು ಎಂದು ತಿಳಿದು ಬಂದಿದೆ.
ಸಿಲಿಂಡರ್ ನಿಂದ ಅನಿಲ ಸೋರಿಕೆ ಆದಾಗ ಗರ್ಭಗುಡಿಯಲ್ಲಿ ದೀಪ ಉರಿಯುತ್ತಿತ್ತು. ಇದದಿಂದ ಸಿಲಿಂಡರ್ ಸ್ಫೋಟಗೊಂಡು ಈ ಅವಘಡ ಸಂಭವಿಸಿದೆ ಎಂದು ದಕ್ಷಿಣ ವಲಯದ ಡಿಸಿಪಿ ರೇವಣ್ಣ ಹೇಳಿದ್ದಾರೆ. ಗರ್ಭಗುಡಿಯಲ್ಲಿ ಶೇಖರಣೆಯಾಗಿದ್ದ ಅಗರಬತ್ತಿ ಹಾಗೂ ಕರ್ಪೂರ ರಾಶಿ ಮೇಲೆ ದೀಪ ಬಿದ್ದು ಬೆಂಕಿ ಹೊತ್ತಿಕೊಂಡಿದೆ. ಗರ್ಭಗುಡಿಯ ತುಂಬಾ ಹೊಗೆ ಆವರಿಸಿಕೊಂಡು. ಈ ಸಂದರ್ಭದಲ್ಲಿ ಉತ್ಪತ್ತಿಯಾದ ಮಿಥೇನ್‌ನಿಂದ ಸ್ಫೋಟ ಸಂಭವಿಸಿದೆ ಎಂದು ಮೊದಲು ಶಂಕಿಸಲಾಗಿತ್ತು.
ಪೊಲೀಸರ ಹೇಳಿಕೆಯಿಂದ ಭಕ್ತರಲ್ಲಿ ಉಂಟಾಗಿದ್ದ ಆತಂಕ ನಿವಾರಣೆಯಾಗಿದೆ. ಭಾನುವಾರ ರಾತ್ರಿ 9 ಗಂಟೆಗೆ ಅರ್ಚಕರು ಮಹಾಮಂಗಳಾರತಿ ಮುಗಿಸಿ, ಮನಗೆ ಮರಳಿದ ಕೆಲವೇ ಹೊತ್ತಿನಲ್ಲಿ ಗರ್ಭಗುಡಿಯಲ್ಲಿ ಈ ಲಘು ಸ್ಫೋಟ ಸಂಭವಿಸಿತ್ತು. ಸ್ಫೋಟ ಶಬ್ದ ಕೇಳಿ ಆತಂಕಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.


Click it and Unblock the Notifications
