ಮಲ್ಲೇಶ್ವರ ಪಾರ್ಕ್‌ನಲ್ಲಿ ಮೈಮರೆತ ಪ್ರೇಮಿಗಳು, ವಿಡಿಯೋ ವೈರಲ್
ಬೆಂಗಳೂರಿನಲ್ಲಿ ಇತ್ತೀಚೆಗೆ ಸಾರ್ವಜನಿಕ ಸ್ಥಳಗಳಲ್ಲೇ ಪ್ರೇಮಿಗಳು ಅಸಭ್ಯವಾಗಿ ವರ್ತಿಸುವ ಘಟನೆಗಳು ನಡೆಯುತ್ತಿವೆ. ನಗರದ ಕೇಂದ್ರಭಾಗವಾದ ಮಲ್ಲೇಶ್ವರದಲ್ಲೂಇಂತಹ ಘಟನೆಯೊಂದು ನಡೆದಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿನ ಪಾರ್ಕ್‌ನಲ್ಲಿ ಪ್ರೇಮಿಗಳಿಬ್ಬರು ಹಾಡಹಗಲೇ ಮೈಮರೆತಿದ್ದಾರೆ. ಈ ವೇಳೆ ಪಾರ್ಕ್‌ನಲ್ಲಿ ಸಾರ್ವಜನಿಕರು ಕೂಡ ಅಕ್ಕಪಕ್ಕದಲ್ಲೇ ಇದ್ದು, ಪ್ರೇಮಿಗಳ ವರ್ತನೆಯಿಂದ ಮುಜುಗರಕ್ಕೀಡಾಗಿದ್ದಾರೆ.
ಮಲ್ಲೇಶ್ವರಂನ ಪಾರ್ಕ್‌ನಲ್ಲಿ ಪ್ರೇಮಿಗಳು ಈ ರೀತಿ ದುರ್ವರ್ತನೆ ತೋರಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದ್ದು, ಇದಕ್ಕೆಲ್ಲ ಹೇಗೆ ಅವಕಾಶ ಕೊಡಲಾಗುತ್ತಿದೆ? ಎಂದು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಮಲ್ಲೇಶ್ವರಂ ಉದ್ಯಾನವನದ ಬೆಂಚ್‌ನಲ್ಲಿ ಕುಳಿತು ಪ್ರೇಮಿಗಳು ಸಾರ್ವಜನಿಕವಾಗಿ ಚುಂಬಿಸಿಕೊಂಡು ಮೈಮರೆತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸ್ಥಳೀಯರು ವಿದ್ಯಾರ್ಥಿ ಸಮುದಾಯ, ಮಹಿಳೆಯರು, ಮಕ್ಕಳನ್ನು ಒಳಗೊಂಡಂತಹ ಉದ್ಯಾನವನಗಳಲ್ಲಿ ಇಂತಹ ಕೆಲವು ವರ್ತನೆಗಳನ್ನು ಈ ವಿಡಿಯೋ ನೋಡಿದವರು ಖಂಡಿಸಿದ್ದಾರೆ. ಉದ್ಯಾನವನದಲ್ಲಿ ಮಕ್ಕಳು ಆಟವಾಡುತ್ತಿದ್ದಾಗ ಈ ರೀತಿಯ ವಿಷಯವನ್ನು ನೋಡುವುದು ಸರಿಯಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಇದಲ್ಲದೇ, ವಿಡಿಯೋದಲ್ಲಿ ಕಾಣುವ ಪ್ರೇಮಿಗಳಿಬ್ಬರೂ ಯಾರ ಭಯವೂ ಇಲ್ಲದೆ ಮೈಮರೆತಿದ್ದಾರೆ. ಇದರಿಂದ ಇತರರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ? ಎಂದು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಪಾರ್ಕ್ ತಮ್ಮ ಪ್ರೀತಿ ಪ್ರದರ್ಶಿಸುವ ಜಾಗವೇ? ಎಂದು ಖಂಡಿಸಿದ್ದಾರೆ. ಕೆಲವರು ಇದನ್ನು ರೊಮ್ಯಾಂಟಿಕ್ ಕ್ಷಣವೆಂದು ಪರಿಗಣಿಸಿದ್ದಾರೆ. ಉದ್ಯಾನವನಗಳನ್ನು ಕುಟುಂಬಕ್ಕಾಗಿ ಸುರಕ್ಷಿತ ಸ್ಥಳವಾಗಿ ಉಳಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಉದ್ಯಾನವನಗಳಲ್ಲಿ ಸಾರ್ವಜನಿಕರಿಗೆ ಮುಕ್ತವಾದ ಪ್ರವೇಶವಿದೆ. ಹಾಗೆಂದ ಮಾತ್ರಕ್ಕೆ ಈ ರೀತಿ ಮನಬಂದಂತೆ ವರ್ತಿಸುವುದು ಸರಿಯಲ್ಲ. ಪಾರ್ಕ್‌ಗಳಲ್ಲಿ ಭದ್ರತಾ ಸಿಬ್ಬಂದಿ ಇದಕ್ಕೆಲ್ಲ ಅವಕಾಶ ಕೊಡಬಾರದು ಎಂದು ಆಗ್ರಹಿಸುತ್ತಿದ್ದಾರೆ.
ಇಂತಹ ಘಟನೆಗಳು ಸಾರ್ವಜನಿಕ ಸ್ಥಳಗಳಲ್ಲಿ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಜವಾಬ್ದಾರಿಯ ನಡುವೆ ಸೂಕ್ಷ್ಮವಾದ ವಿಚಾರ ಕುರಿತಂತೆ ದೊಡ್ಡ ಚರ್ಚೆಗೆ ಕಾರಣವಾಗುತ್ತಿವೆ. ಸಾರ್ವಜನಿಕ ಸ್ಥಳಗಳಲ್ಲಿ ನೀತಿ, ಗೌಪ್ಯತೆ ಮತ್ತು ಸಮುದಾಯ ಮಹತ್ವಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರದಲ್ಲಿ ನಿರಂತರವಾಗಿ ಅನೇಕ ಘಟನೆಗಳು ನಡೆಯುತ್ತಿವೆ. ಇದರಿಂದ ಸ್ಥಳೀಯರು ಮಕ್ಕಳ ಮೇಲೆ ಪರಿಣಾಮ ಏನಾಗುತ್ತದೆ ಎಂಬ ಬಗ್ಗೆ ಚಿಂತೆ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕ ಮೌಲ್ಯಗಳು ಮತ್ತು ವೈಯಕ್ತಿಕ ಹಕ್ಕಿನ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಪೊಲೀಸ್ ಇಲಾಖೆಯು ಈ ಘಟನೆಯನ್ನು ಗಮನದಲ್ಲಿಟ್ಟುಕೊಂಡು, ಅಗತ್ಯವಾದ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಈ ಘಟನೆಗಳಿಂದ ಮಕ್ಕಳು ಹಾಗೂ ಯುವಸಮುದಾಯ ದಾರಿ ತಪ್ಪುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮಲ್ಲೇಶ್ವರದ ಪಾರ್ಕ್‌ನಲ್ಲಿ ಜನ ವಾಕಿಂಗ್, ಜಾಗಿಂಗ್‌ಗೆ ಬರುತ್ತಾರೆ. ಹೆಚ್ಚಿನವರು ಹಿರಿಯ ನಾಗರಿಕರೇ ಇರುತ್ತಾರೆ. ಸಣ್ಣ ಮಕ್ಕಳು ಕೂಡ ಆಟವಾಡಲು ಪಾರ್ಕ್‌ಗೆ ಬಂದಿರುತ್ತಾರೆ. ಅವರ ಮುಂದೆ ಈ ರೀತಿ ಅಸಹ್ಯವಾಗಿ ವರ್ತಿಸುವುದು ಸರಿಯಲ್ಲ. ಇದನ್ನು ನೋಡಿ ಮಕ್ಕಳು ಕೂಡ ಹಾಳಾಗುತ್ತಾರೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ. ಪಾರ್ಕ್‌ಗಳಲ್ಲಿಯೂ ಪೊಲೀಸರು ಆಗಾಗ ಬೀಟ್‌ಗೆ ಬರಬೇಕು. ಇದರಿಂದ ಇಂತವರಿಗೆ ಕೊಂಚವಾದರೂ ಭಯ ಇರುತ್ತೆ. ಇಲ್ಲದಿದ್ದರೆ ಸಾರ್ವಜನಿಕ ಸ್ಥಳಗಳಲ್ಲಿ ಜನ ತಲೆ ಎತ್ತಿ ನಡೆದಾಡಲು ಆಗುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.












Click it and Unblock the Notifications