• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಣ್ಣನಿಂದ ಅತ್ಯಾಚಾರ, ತಮ್ಮನಿಂದ ಮತಾಂತರ

|

ಬೆಂಗಳೂರು, ಜನವರಿ 11: ಪ್ರೀತಿಸುವುದಾಗಿ ನಂಬಿಸಿ ಅನ್ಯ ಧರ್ಮದ ಇಬ್ಬರು ಸಹೋದರರು ಒಂದೇ ಹುಡುಗಿಯ ಮೇಲೆ ಅತ್ಯಾಚಾರ ಮಾಡಿದ ಆರೋಪ ಕೇಳಿ ಬಂದಿದೆ. ಅಲ್ಲದೇ ಮದುವೆಯಾಗುವುದಾಗಿ ಹೇಳಿ ಯುವತಿಯ ತಂದೆಯಿಂದ ಹಣ ಪಡೆದ ಕಿರಾತಕರು ಮತಾಂತರ ಮಾಡಿ ಕೈಕೊಟ್ಟಿರುವ ಆರೋಪ ಎದುರಿಸುತ್ತಿದ್ದಾರೆ. ಇಬ್ಬರ ಸಹೋದರರ ವಿರುದ್ಧ ಯುವತಿ ದೂರು ನೀಡಿದ್ದು, ಶಬ್ಬೀರ್ ಎಂಬಾತನನ್ನು ಚನ್ನಮ್ಮನಕೆರೆ ಅಚ್ಚಕಟ್ಟು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಲು ಎರಡು ದಿನ ಪೊಲೀಸರ ವಶಕ್ಕೆ ಪಡೆಯಲಾಗಿದೆ.

ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಹೋಟೆಲ್ ಹೊಂದಿರುವ ಶಬ್ಬೀರ್ ಅಹಮದ್ ಮತ್ತು ಮಹಮದ್ ರಿಲ್ವಾನ್ ಅತ್ಯಾಚಾರ ಆರೋಪ ಎದುರುಸುತ್ತಿರುವರು. ಇವರ ವಿರುದ್ಧ ಸಂತ್ರಸ್ತ ಯುವತಿ ಚನ್ನಮ್ಮನಕೆರೆ ಅಚ್ಚಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಣ್ಣ ತನಮ್ಮನಿಂದ ಮೋಸ ಹೋಗಿರುವ ಸಂತ್ರಸ್ತ ಯುವತಿ ಜೀವನ ಬೀದಿಗೆ ಬಿದ್ದಂತಾಗಿದೆ.

ಅಣ್ಣನಿಂದ ಅತ್ಯಾಚಾರ

ಅಣ್ಣನಿಂದ ಅತ್ಯಾಚಾರ

ಬಸವನಗುಡಿಯ ಹೋಟೆಲ್ ನಲ್ಲಿ ಪರಿಚಾರಕಿಯಾಗಿ ಕೆಲಸ ಮಾಡುತ್ತಿದ್ದ ಪ್ರೇಮಾಗೆ ( ಹೆಸರು ಬದಲಿಸಲಾಗಿದೆ) ಶಬೀರ್ ಅಮಹದ್ ಎಂಬಾಂತ 2018 ರಲ್ಲಿ ಪರಿಚಯವಾಗಿದ್ದ. ಬ್ರಿಗೇಡ್ ರಸ್ತೆಯಲ್ಲಿರುವ ಬ್ರಿಗೇಡ್ ರಾಯಲ್ ಹೋಟಲ್ ಮಾಲೀಕ ಎಂದು ಹೇಳಿ ಸ್ಪಾದಲ್ಲಿ ಬಿಡಿಸಿ ಪ್ರೇಮಾಗೆ ಹೋಟೆಲ್ ಪರಿಚಾರಕಿ ಕೆಲಸ ಕೊಡಿಸಿದ್ದಾನೆ. ಕೆಲಸದ ವಿಚಾರವಾಗಿ ಮಾತನಾಡಬೇಕು ಎಂದು ಹೇಳಿ ಬ್ರಿಗೇಡ್ ರಸ್ತೆಯಲ್ಲಿರುವ ಒಯೋ ಟಾಪ್ ಹೌಸ್ ಗೆ ಕರೆದುಕೊಂಡುಹೋಗಿ ಅತ್ಯಾಚಾರ ಎಸಗಿದ್ದಾನೆ. ಯಾರಿಗಾದರೂ ಹೇಳಿದರೆ ನಿನ್ನನ್ನು ಕೆಲಸದಿಂದ ತೆಗೆದು ಹಾಕುವುದಾಗಿ ಹೆದರಿಸಿ ನಾಲ್ಕು ತಿಂಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ತಮ್ಮನ ಎಂಟ್ರಿ

ತಮ್ಮನ ಎಂಟ್ರಿ

ಇಷ್ಟಾಗಿಯೂ ಅದೇ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಪ್ರೇಮಾಳ ಜೀವನದಲ್ಲಿ ಶಬೀರ್ ತಮ್ಮ ಮೊಹಮದ್ ರಿಲ್ವಾನ್ ಎಂಟ್ರಿಯಾಗಿದ್ದಾನೆ. ನಮ್ಮ ಅಣ್ಣ ನಿಮಗೆ ಅನ್ಯಾಯ ಮಾಡಿದ್ದಾನೆ. ಆದರೆ ಆತ ಇನ್ನು ಮುಂದೆ ನಿಮ್ಮ ತಂಟೆಗೆ ಬರುವುದಿಲ್ಲ ಎಂದು ಪ್ರೇಮಾಳ ನಂಬಿಕೆ ಗಳಿಸಿದ್ದಾನೆ. ಪ್ರೇಮಾಳನ್ನು ಪ್ರೀತಿ ಮಾಡುತ್ತಿರುವುದಾಗಿ ನಂಬಿಸಿದ್ದಾನೆ. ಯುವತಿ ಮನೆಗೆ ಹೋಗಿ ಅವರ ತಂದೆ ತಾಯಿಯ ಜತೆ ಮಾತನಾಡಿ ಮದುವೆ ಪ್ರಸ್ತಾಪವಿಟ್ಟಿದ್ದಾನೆ. ಪೋಷಕರಿಗೆ ಅನ್ಯ ಧರ್ಮದ ಮದುವೆ ಬಗ್ಗೆ ಇಷ್ಟವಿಲ್ಲದಿದ್ದರೂ ಯುವತಿಯ ಬಲವಂತಕ್ಕೆ ಮಣಿದು ಒಪ್ಪಿಗೆ ನೀಡಿದ್ದರು. ಇಬ್ಬರ ನಿಶ್ಚಿತಾರ್ಥ ಕಳೆದ ನವೆಂಬರ್ ನಲ್ಲಿ ಮುಗಿಸಿ 21 ಜನವರಿ 2021 ರಂದು ಲಕ್ಷ್ಮೀ ವರಹ ದೇಗುಲದಲ್ಲಿ ಇಬ್ಬರ ಮದುವೆಯಾಗಬೇಕಿತ್ತು. ಲಗ್ನ ಪತ್ರಿಕೆಯನ್ನು ಕೂಡ ಯುವತಿ ಕುಟುಂಬ ಮುದ್ರಿಸಿ ಇನ್ನೇನು ಹಂಚಿಕೆ ಮಾಡಲು ಮುಂದಾಗಿತ್ತು. ಮದುವೆ ಖರ್ಚಿಗೆಂದು ಸಂತ್ರಸ್ತ ಯುವತಿಯ ತಂದೆಯಿಂದ ಒಂದೂವರೆ ಲಕ್ಷ ರೂಪಾಯಿ ಹಣವನ್ನು ಕೂಡ ರಿಲ್ವಾನ್ ಪಡೆದಿದ್ದಾನೆ.

ಮತಾಂತರಕ್ಕೆ ಯತ್ನ

ಮತಾಂತರಕ್ಕೆ ಯತ್ನ

ನಿನ್ನನ್ನು ದುಬೈಗೆ ಕರೆದುಕೊಂಡು ಹೋಗುತ್ತೇನೆ. ಅಲ್ಲಿ ನೀನು ಇನ್ನೂ ಒಳ್ಳೆಯ ಕೆಲಸ ಕೊಡಿಸುತ್ತೇನೆ ಎಂದು ಹೇಳಿದ್ದೇನೆ. ಪಾಸ್ ಪೋರ್ಟ್ ಮಾಡಲಿಕ್ಕೆ ದಾಖಲೆಗಳು ಬೇಕು ಎಂದು ಹೇಳಿ ಅವುಗಳ ಮೇಲೆ ನನ್ನ ಸಹಿ ಪಡೆದುಕೊಂಡು, ನಿನ್ನನ್ನು ನಾನು ಮದುವೆಯಾಗಬೇಕಾದರೆ, ನೀನು ಮತಾಂತರ ಆಗಬೇಕು ಎಂದು ಬಲವಂತ ಮಾಡಿ ಮತಾಂತರ ಮಾಡಿದ್ದಾಗಿ ಸಂತ್ರಸ್ತ ಯುವತಿ ಆರೋಪಿಸಿದ್ದಾಳೆ. ಹೀಗೆ ಪ್ರೀತಿಯ ನಾಟಕವಾಗಿ ಯುವತಿಯ ಮೇಲೆ ಸಹೋದರನೂ ಅತ್ಯಾಚಾರ ಮಾಡಿ ಕೊನೆಗೆ ಮದುವೆಯಾಗದೇ ಮೋಸ ಮಾಡಿದ್ದಾನೆ. ಮೊಬೈಲ್ ಸ್ವಿಚ್‌ ಆಫ್ ಮಾಡಿಕೊಂಡು ತಲೆ ಮರೆಸಿಕೊಂಡು ತಿರುಗುತ್ತಿರುವುದಾಗಿ ಸಂತ್ರಸ್ತ ಯುವತಿ ದೂರಿದ್ದಾಳೆ.

  ಕೊನೆಗೂ BJP cabinet ವಿಸ್ತರಣೆ ಒಳ್ಳೆ ಕಾಲ ಬಂತು!! | Oneindia Kannada
  ರಿಲ್ವಾನ್ ಗೆ ಮದುವೆ

  ರಿಲ್ವಾನ್ ಗೆ ಮದುವೆ

  ರಿಲ್ವಾನ್ ಗೆ ಮೊದಲೇ ಮದುವೆಯಾಗಿದ್ದು, ಪ್ರೇಮಾಳನ್ನು ಮದುವೆ ಆಗುವ ನಾಟಕವಾಗಿ ಮತಾಂತರಗೊಳಿಸಿ ಅನ್ಯಾಯ ಮಾರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಇಬ್ಬರು ಸಹೋದರರು ತನ್ನ ಹೋಟೆಲ್ ನ ಹೆಸರು ಹೇಳಿ ಅನೇಕ ಯುವತಿಯರಿಗೆ ಇದೇ ರೀತಿ ಮೋಸ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸ್ಪಾ ಮತ್ತು ಮಾಡಲೆಂಗ್ ಕ್ಷೇತ್ರದ ಯುವತಿಯರನ್ನು ಬುಟ್ಟಿಗೆ ಹಾಕಿಕೊಂಡು ಸಾಕಷ್ಟು ಮಂದಿಗೆ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬಹುತೇಕರು ಅವರ ವಿರುದ್ಧ ದೂರು ನೀಡಿಲ್ಲ ಎಂದು ಹೋಟಲ್ ಬಗ್ಗೆ ತಿಳಿದವರೊಬ್ಬರು ಮಾಹಿತಿ ನೀಡಿದ್ದಾರೆ.

  English summary
  Two brothers have raped and converted a young woman, and one accused has been arrested by Channammana kere achukattu police.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X