Namma Metro Purple Line: ಈ ಮಾರ್ಗದ ಮೆಟ್ರೋದಿಂದಲೇ ಬಿಎಂಆರ್‌ಸಿಎಲ್ ನಷ್ಟ ಇಳಿಕೆ
Namma Metro Purple Line: ನಮ್ಮ ಮೆಟ್ರೋ ರೈಲು ಬೆಂಗಳೂರಿಗರ ಜೀನವಾಡಿ ಸಾರಿಗಗಳಲ್ಲಿ ಒಂದಾಗಿದೆ. ಇನ್ನು 2021-2022ನೇ ಸಾಲಿನಲ್ಲಿ ಬಿಎಂಆರ್‌ಸಿಎಲ್ ತುಂಬಾ ನಷ್ಟದಲ್ಲಿದ್ದು, ಈ ನಷ್ಟದ ಪ್ರಮಾಣ 2023-2024ರಲ್ಲಿ ಇಳಿಕೆಯಾಗಿದ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ. ಹಾಗಾದರೆ, ಎಷ್ಟು ಕಡಿಮೆಯಾಗಿತ್ತು ಹಾಗೂ ಈ ನಷ್ಟ ಯಾವ ಮಾರ್ಗದಿಂದ ಕಡಿಮೆಯಾಗಿದೆ ಎನ್ನುವ ಮಾಹಿತಿಯನ್ನು ಅಂಕಿಅಂಶಗಳ ಸಹಿತ ಇಲ್ಲಿ ನೀಡಲಾಗಿದೆ ಗಮನಿಸಿ.
ಬೆಂಗಳೂರಿನ ಬಹುತೇಕ ಮಂದಿ ಟ್ರಾಫಿಕ್ ಜಂಜಾಟದಿಂದ ತಪ್ಪಿಸಿಕೊಳ್ಳಲು ಮೆಟ್ರೋ ಸಾರಿಗೆಯನ್ನೇ ಅವಲಂಬನೆ ಮಾಡಿದ್ದಾರೆ. ಪ್ರತಿನಿತ್ಯ ಲಕ್ಷಾಂತರ ಮಂದಿ ಈ ಸಾರಿಗೆ ಪ್ರಯಾಣ ಮಾಡುತ್ತಾರೆ. ಇನ್ನು ಕೋವಿಡ್ ಸಮಯದಲ್ಲಿ ನಮ್ಮ ಮೆಟ್ರೋ ಆದಾಯದಲ್ಲಿ ಕುಸಿತ ಕಂಡಿತ್ತು. ಯಾಕೆಂದರೆ ಮಹಾಮಾರಿಯಿಂದ ರಕ್ಷಿಸಿಕೊಳ್ಳಲು ಜನರು ಬೆಂಗಳೂರನ್ನೇ ತೊರೆದು ತಮ್ಮ ಊರಿನ ಕಡೆಗೆ ಪ್ರಯಾಣ ಬೆಳೆಸಿದ್ದರು.

ಈ ವೇಳೆ ಸಂಪೂರ್ಣ ಬೆಂಗಳೂರೇ ಖಾಲಿಯಾಗಿದ್ದು, ಮೆಟ್ರೋ ಅಲ್ಲದೆ ಇತರೇ ಸಾರಗೆಗಗಳಿಗೂ ಕೂಡ ಹೊಡೆತ ಬಿದ್ದಿತ್ತು. ಆದರೆ ಬಳಿಕ ನಿಧಾನಕ್ಕೆ ಇದು ಸುಧಾರಣೆಗೆ ಬಂದಿತ್ತು. ಹಾಗೆಯೇ ನಮ್ಮ ಮೆಟ್ರೋಗೂ ಆದಾಯದಲ್ಲೂ ನಿಧಾನಗತಿಯಲ್ಲಿ ಚೇತರಿಕೆಯಾಗುತ್ತಾ ಹೋಯಿತು ಎಂದು ಹೇಳಲಾಗುತ್ತಿದೆ.
2021-22ರಲ್ಲಿ 476 ಕೋಟಿ ರೂಪಾಯಿ ಇದ್ದ ಬಿಎಂಆರ್‌ಸಿಎಲ್ ನಷ್ಟದ ಪ್ರಮಾಣ 2023-24ರಲ್ಲಿ 341 ಕೋಟಿ ರೂಪಾಯಿಗೆ ಇಳಿಕೆಯಾಗಿದೆ. ಕಳೆದ 3 ವರ್ಷಗಳಿಂದ ಬಿಎಂಆರ್‌ಸಿಎಲ್ ನಷ್ಟವು ಇಳಿಮುಖ ಆಗುತ್ತಿದ್ದು, ಈ ಬೆಳವಣಿಗೆಯು ನಮ್ಮ ಮೆಟ್ರೊದ ಪರಿಣಾಮಕಾರಿ ಕಾರ್ಯ ನಿರ್ವಹಣೆಗೆ ಸಾಕ್ಷಿಯಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬೆಳಗಾವಿ ವಿಧಾನ ಮಂಡಲ ಅಧಿವೇಶನದ ವೇಳೆ ವಿಧಾನ ಪರಿಷತ್‌ನಲ್ಲಿ ಸದಸ್ಯೆ ಉಮಾಶ್ರೀ ಅವರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ನಮ್ಮ ಮೆಟ್ರೊ 68 ನಿಲ್ದಾಣಗಳನ್ನು ಒಳಗೊಂಡಂತೆ ಪ್ರತಿನಿತ್ಯ 7.9 ಲಕ್ಷ ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿದೆ. ಬಿಎಂಆರ್‌ಸಿಎಲ್‌ಗೆ ಕಳೆದ 3 ವರ್ಷಗಳಲ್ಲಿ ಒಟ್ಟಾರೆ 1,280 ಕೋಟಿ ರೂಪಾಯಿ ನಷ್ಟ ಆಗಿದೆ ಎಂದು ಹೇಳಿದರು.
ನೌಕರರ ವೇತನ, ವಿದ್ಯುತ್ ಬಿಲ್, ಸಾಲ ಮರುಪಾವತಿ, ನಿರ್ವಹಣೆ ಹಾಗೂ ಇತರೆ ಖರ್ಚುಗಳನ್ನು ಒಳಗೊಂಡಂತೆ ಬಿಎಂಆರ್‌ಸಿಎಲ್‌ಗೆ ಪ್ರತಿ ವರ್ಷ 1,212 ಕೋಟಿ ರೂಪಾಯಿ ವೆಚ್ಚ ತಗಲುತ್ತಿದೆ. ಆದರೆ, ವಾರ್ಷಿಕ 990 ಕೋಟಿ ರೂಪಾಯಿ ಮಾತ್ರ ಆದಾಯ ಉಳಿಯುತ್ತಿದೆ. 76 ಕಿಲೋ ಮೀಟರ್ ರೈಲು ಮಾರ್ಗ ಹೊಂದಿರುವ ನೇರಳೆ ಮಾರ್ಗದಲ್ಲಿ ಸಂಪೂರ್ಣ ಕಾರ್ಯಾಚರಣೆ ಆರಂಭವಾದ ನಂತರ ಹೆಚ್ಚಿನ ಪ್ರೋತ್ಸಾಹ ಸಿಕ್ಕಿದೆ. ಈ ಮಾರ್ಗದಲ್ಲಿ ಪ್ರತಿದಿನ 9.2 ಲಕ್ಷಕ್ಕಿಂತ ಹೆಚ್ಚು ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರೆ ಎಂದು ಮೂಲಗಳಿಂದ ತಿಳದುಬಂದಿದೆ.
ಇನ್ನು ನೂತನ ಮೆಟ್ರೊ ಮಾರ್ಗ ಆರಂಭ ಆದ ಬಳಿಕ ಪ್ರಯಾಣಿಕರ ಸಂಖ್ಯೆ ಮತ್ತು ಆದಾಯದ ಪ್ರಮಾಣವು ಏರಿಕೆಯಾಗುತ್ತಲೇ ಇದೆ. ವಾರದ ದಿನಗಳಲ್ಲಿ ಟಿಕೆಟ್‌ನ ಆದಾಯ ದಿನಕ್ಕೆ 2 ಕೋಟಿ ರೂಪಾಯಿ ಮೀರಿದೆ. ಈ ಆರ್ಥಿಕ ವರ್ಷದಲ್ಲಿಆದಾಯದಲ್ಲಿ ಹೆಚ್ಚಿನ ಪ್ರಗತಿ ಆಗಿದೆ ಎಂದು ತಿಳಿದುಬಂದಿದೆ.
ಆದಾಯದ ಮೂಲಗಳನ್ನು ಹೆಚ್ಚಿಸುವ ಉದ್ದೇಶದಿಂದ ಬಿಎಂಆರ್‌ಸಿಎಲ್ ಸಹ ವಿದೇಶದ ಮೆಟ್ರೊ ರೀತಿಯಲ್ಲೇ ಬೋಗಿಗಳಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ಕೊಟ್ಟಿದೆ. ಅಲ್ಲದೆ, ಮೆಟ್ರೊ ನಿಲ್ದಾಣಗಳ ಒಳ ಮತ್ತು ಹೊರವಲಯದ ಖಾಲಿ ಜಾಗಗಳನ್ನು ತಿಂಡಿ ತಿನಿಸುಗಳ ಮಳಿಗೆಗಳನ್ನು ಬಾಡಿಗೆಗೆ ನೀಡಿದ್ದು, ಇದರಿಂದಲೂ ಆದಾಯ ಬರುತ್ತಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೇ ನೀಡಿದೆ ಡಿ.ಕೆ.ಶಿವಕುಮಾರ್ ಅವರು, ನಾಡಪ್ರಭು ಕೆಂಪೇಗೌಡ ನಿಲ್ದಾಣ, ಯಶವಂತಪುರ, ಚಿಕ್ಕಪೇಟೆ ಮತ್ತು ನಾಗಸಂದ್ರ ನಿಲ್ದಾಣಗಳಲ್ಲಿ ಈಗಾಗಲೇ ಶಿಶುಪಾಲನಾ ಕೇಂದ್ರಗಳನ್ನು ತೆರೆಯಲಾಗಿದೆ. ಎಲ್ಲಾನಿಲ್ದಾಣಗಳಲ್ಲೂ ಶಿಶುಪಾಲನಾ ಕೇಂದ್ರಗಳ ಆರಂಭಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಇನ್ನು ಮುಂದುವರೆದು ಮಾತನಾಡಿದ ಉಮಾಶ್ರೀ ಅವರು, ಪ್ರತಿ ಮೆಟ್ರೊ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ, ಹೊರಗುತ್ತಿಗೆ ನೌಕರರು ಮತ್ತು ಬಿಎಂಆರ್‌ಸಿಎಲ್‌ನ ಸಿಬ್ಬಂದಿಗಳು ಮೂರು ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿಲ್ದಾಣದ ಟಿಕೆಟ್ ಕೌಂಟರ್‌ಗಳಿಗೆ ಹೊರ ರಾಜ್ಯದ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಇದರ ಬದಲು ರಾಜ್ಯದವರನ್ನೇ ನೇಮಕ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.












Click it and Unblock the Notifications