ಹಂತಕರನ್ನು ಸಿನಿಮಾ ಸ್ಟೈಲ್‌ನಲ್ಲಿ ಸೆರೆ ಹಿಡಿದ ಪೊಲೀಸರು: ಪ್ಲಾನ್ ಹೇಗಿತ್ತು?
ಬೆಂಗಳೂರು, ನವೆಂಬರ್ 29: ಡಿಸಿಪಿ ಅಣ್ಣಾಮಲೈ ತಂಡವು ಹಂತಕರನ್ನು ಸಿನಿಮೀಯ ರೀತಿಯಲ್ಲಿ ಸೆರೆ ಹಿಡಿದಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಲಾರಿ ಚಾಲಕನನ್ನು ಭೀಕರವಾಗಿ ಕೊಲೆ ಮಾಡಿ ಹಣ ದರೋಡೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತೌಹೀದ್ ಅಲಿಯಾಸ್ ವರ್ದಾ, ಮುದಸ್ಸಿರ್ ಮತ್ತು ಸಲ್ಮಾನ್ ಬಂಧಿತ ಆರೋಪಿಗಳು. ನ.3ರಂದು ರಾತ್ರಿ ತಲಘಟ್ಟಪುರದ 80 ಫೀಟ್ ರಸ್ತೆ ಬಳಿ ನಿಲ್ಲಿಸಿದ್ದ ಲಾರಿಯಲ್ಲಿ ಚಾಲಕ ಭಾಸ್ಕರ್ (44) ಹತ್ಯೆಯಾಗಿದ್ದರು.
ಈ ಕುರಿತು ತಲಘಟ್ಟಪುರದಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಬೇಧಿಸಲು ಪೊಲೀಸರು ಲಾರಿ ಚಾಲಕರ ವೇಷತೊಟ್ಟು ರಸ್ತೆಗಿಳಿದಿದ್ದರು.

ಎಸಿಪಿ ಮಹದೇವ್ ನೇತೃತ್ವದಲ್ಲಿ ಇಬ್ಬರು ಇನ್ಸ್‍ಪೆಕ್ಟರ್‍ಗಳು, ಸಿಬ್ಬಂದಿ ಆರೋಪಿಗಳ ಪತ್ತೆಗೆ ಎರಡು ಲಾರಿಗಳನ್ನು ಪಡೆದು ರಾತ್ರಿ ವೇಳೆ ನಿರ್ದಿಷ್ಟ ಸ್ಥಳದಲ್ಲಿ ನಿಲ್ಲಿಸಿದ್ದರು.
ಆದರೆ, ಇವರನ್ನು ಲಾರಿ ಚಾಲಕರೆಂದೇ ತಿಳಿದ ಆರೋಪಿಗಳು ದರೋಡೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಬೀಸಿದ ಬಲೆಗೆ ಆರೋಪಿಗಳು ಬಿದ್ದಿದ್ದಾರೆ.ಮೂವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಲಾರಿ ಚಾಲಕ ಭಾಸ್ಕರ್ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.












Click it and Unblock the Notifications