ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಸೆಂಟ್ರಲ್: ಐದಕ್ಕೇರಿದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿ

|
Google Oneindia Kannada News

ಪುಲ್ವಾಮಾ ಘಟನೆಯ ನಂತರ, ಲೋಕಸಮರಕ್ಕೆ ತಾಲೀಮು ಮತ್ತೆ ನಿಧಾನಗತಿಯಲ್ಲಿ ಆರಂಭವಾಗಿದೆ. ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಎರಡು ಚುನಾವಣೆಯಲ್ಲಿ ಸತತವಾಗಿ ಬಿಜೆಪಿ ಅಭ್ಯರ್ಥಿ ವಿರುದ್ದ ಸೋಲು ಅನುಭವಿಸಿರುವ ಕಾಂಗ್ರೆಸ್, ಈ ಬಾರಿ ಗೆಲ್ಲಲೇಬೇಕೆನ್ನುವ ಕಾರ್ಯತಂತ್ರ ರೂಪಿಸುತ್ತಿದೆ.

ಆದರೆ, ಪಕ್ಷದ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಏರುತ್ತಿರುವುದು ಕಾಂಗ್ರೆಸ್ ರಾಜ್ಯ ಮುಖಂಡರಿಗೆ ಮತ್ತು ಹೈಕಮಾಂಡಿಗೆ ತಲೆನೋವಾಗಿ ಪರಿಣಮಿಸುತ್ತಿದೆ. ಯಾಕೆಂದರೆ, ಟಿಕೆಟ್ ಬಯಸುತ್ತಿರುವವರು ಪಕ್ಷದ ನಿಷ್ಟಾವಂತ ನಾಯಕರು.

ಬೆಂಗಳೂರು ಸೆಂಟ್ರಲ್ ಕಾಂಗ್ರೆಸ್‌ ಟಿಕೆಟ್‌ಗೆ ಹೊಸ ಆಕಾಂಕ್ಷಿ!ಬೆಂಗಳೂರು ಸೆಂಟ್ರಲ್ ಕಾಂಗ್ರೆಸ್‌ ಟಿಕೆಟ್‌ಗೆ ಹೊಸ ಆಕಾಂಕ್ಷಿ!

ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂಟು ಅಸೆಂಬ್ಲಿ ಕ್ಷೇತ್ರಗಳಲ್ಲಿ ಐದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿರುವುದು, ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭ ತಂದುಕೊಡಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ ರಾಜ್ಯ ಮುಖಂಡರು.

ಬೆಂಗಳೂರು ಸೆಂಟ್ರಲ್ ಟಿಕೆಟ್‌ಗೆ ನಾಲ್ಕು ಕಾಂಗ್ರೆಸ್‌ ನಾಯಕರ ಪೈಪೋಟಿ!ಬೆಂಗಳೂರು ಸೆಂಟ್ರಲ್ ಟಿಕೆಟ್‌ಗೆ ನಾಲ್ಕು ಕಾಂಗ್ರೆಸ್‌ ನಾಯಕರ ಪೈಪೋಟಿ!

ಸದಾ ಸುದ್ದಿಯಲ್ಲಿರುವ ಪ್ರಕಾಶ್ ರೈ ಕೂಡಾ ಈಗಾಗಲೇ ಬೆಂಗಳೂರು ಕೇಂದ್ರದಿಂದ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಇದು, ಕಾಂಗ್ರೆಸ್ ಅಥವಾ ಬಿಜೆಪಿ, ಯಾವ ಪಕ್ಷದ ಮತಬ್ಯಾಂಕ್ ಅನ್ನು ಬ್ರೇಕ್ ಮಾಡಲಿದೆ ಎನ್ನುವುದು ಕುತೂಹಲದ ಸಂಗತಿ. ಸದ್ಯ ರೇಸಿನಲ್ಲಿರುವ ಐವರು ಕಾಂಗ್ರೆಸ್ ಧುರೀಣರು, ಮುಂದೆ ಓದಿ..

ಶಿವಾಜಿನಗರ ಕ್ಷೇತ್ರದ ಶಾಸಕ ರೋಷನ್ ಬೇಗ್, ಟಿಕೆಟ್ ಆಕಾಂಕ್ಷಿ

ಶಿವಾಜಿನಗರ ಕ್ಷೇತ್ರದ ಶಾಸಕ ರೋಷನ್ ಬೇಗ್, ಟಿಕೆಟ್ ಆಕಾಂಕ್ಷಿ

ಶಿವಾಜಿನಗರ ಕ್ಷೇತ್ರದ ಶಾಸಕ ರೋಷನ್ ಬೇಗ್, ಟಿಕೆಟ್ ಆಕಾಂಕ್ಷಿಗಳಲ್ಲೊಬ್ಬರು. ಸಿದ್ದರಾಮಯ್ಯನವರ ಆಪ್ತವರ್ಗದಲ್ಲಿ ಕಾಣಿಸಿಕೊಳ್ಳುವ ಬೇಗ್, ಸಚಿವ ಸ್ಥಾನವಂತೂ ನೀಡಲಿಲ್ಲ, ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡಿ ಎಂದು ಹೈಕಮಾಂಡ್ ಹಿಂದೆ ಬಿದ್ದಿದ್ದಾರೆ. ದೆಹಲಿಯಲ್ಲೂ ಉತ್ತಮ ಪ್ರಭಾವವನ್ನು ಹೊಂದಿರುವ ರೋಷನ್ ಬೇಗ್ ಅವರಿಗೆ ಟಿಕೆಟ್ ನೀಡಲು ರಾಜ್ಯ ಕಾಂಗ್ರೆಸ್ಸಿನ ಕೆಲವು ಮುಖಂಡರಿಗೆ ಆಸಕ್ತಿಯಿಲ್ಲ ಎನ್ನುವ ಮಾತಿದೆ.

ಕಾಂಗ್ರೆಸ್ಸಿನ ಪ್ರಭಾವಿ ಮುಖಂಡ ಬಿ ಕೆ ಹರಿಪ್ರಸಾದ್ ಅವರ ಹೆಸರೂ ಕೇಳಿಬರುತ್ತಿದೆ

ಕಾಂಗ್ರೆಸ್ಸಿನ ಪ್ರಭಾವಿ ಮುಖಂಡ ಬಿ ಕೆ ಹರಿಪ್ರಸಾದ್ ಅವರ ಹೆಸರೂ ಕೇಳಿಬರುತ್ತಿದೆ

ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ಸಿನ ಪ್ರಭಾವಿ ಮುಖಂಡ ಬಿ ಕೆ ಹರಿಪ್ರಸಾದ್ ಅವರ ಹೆಸರೂ ಕೇಳಿಬರುತ್ತಿದೆ. ಕ್ರೈಸ್ತ, ಮುಸ್ಲಿಂ ಮತ್ತು ಹಿಂದುಳಿದ ವರ್ಗಗಳ ಮತ ನಿರ್ಣಾಯಕವಾಗಿರುವ ಈ ಕ್ಷೇತ್ರದಲ್ಲಿ ಹರಿಪ್ರಸಾದ್ ಅವರನ್ನು ಕಣಕ್ಕಿಳಿಸುವುದು ಸೂಕ್ತ ಎನ್ನುವುದು ರಾಜ್ಯ ಕೆಲವು ಮುಖಂಡರ ಅಭಿಪ್ರಾಯ ಎನ್ನಲಾಗುತ್ತಿದೆ.

ಬೆಂಗಳೂರು ಸೆಂಟ್ರಲ್ ಟಿಕೆಟ್‌ಗೆ ನಾಲ್ಕು ಕಾಂಗ್ರೆಸ್‌ ನಾಯಕರ ಪೈಪೋಟಿ! ಬೆಂಗಳೂರು ಸೆಂಟ್ರಲ್ ಟಿಕೆಟ್‌ಗೆ ನಾಲ್ಕು ಕಾಂಗ್ರೆಸ್‌ ನಾಯಕರ ಪೈಪೋಟಿ!

ನಿವೃತ್ತ ಪೊಲೀಸ್ ಅಧಿಕಾರಿ ಸಾಂಗ್ಲಿಯಾನ ಕೂಡಾ ಪ್ರಯತ್ನಿಸುತ್ತಿದ್ದಾರೆ

ನಿವೃತ್ತ ಪೊಲೀಸ್ ಅಧಿಕಾರಿ ಸಾಂಗ್ಲಿಯಾನ ಕೂಡಾ ಪ್ರಯತ್ನಿಸುತ್ತಿದ್ದಾರೆ

ಬೆಂಗಳೂರು ಸೆಂಟ್ರಲ್ ವ್ಯಾಪ್ತಿಯಲ್ಲಿ ಬರುವ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿರುವುದು ಮತ್ತು ತಮಿಳು ಮತ್ತು ಕ್ರೈಸ್ತ ಮತದಾರರೂ ಇರುವುದರಿಂದ, ನನಗೇ ಟಿಕೆಟ್ ನೀಡಬೇಕೆಂದು ನಿವೃತ್ತ ಪೊಲೀಸ್ ಅಧಿಕಾರಿ ಎಚ್ ಟಿ ಸಾಂಗ್ಲಿಯಾನ ಕೂಡಾ ಪ್ರಯತ್ನಿಸುತ್ತಿದ್ದಾರೆ. ಆದರೆ, 2009ರ ಚುನಾವಣೆಯಲ್ಲಿ ಸಾಂಗ್ಲಿಯಾನ ಈ ಕ್ಷೇತ್ರದಿಂದ ಪರಾಭವಗೊಂಡಿದ್ದರಿಂದ, ಈಬಾರಿ ಇವರಿಗೆ ಟಿಕೆಟ್ ನೀಡಲಿದೆಯೇ ಎನ್ನುವುದು ಕಾದು ನೋಡಬೇಕಿದೆ.

ಸಲೀಂ ಅಹಮದ್ ಅವರ ಹೆಸರೂ ಕೇಳಿಬರುತ್ತಿದೆ

ಸಲೀಂ ಅಹಮದ್ ಅವರ ಹೆಸರೂ ಕೇಳಿಬರುತ್ತಿದೆ

ಟಿಕೆಟ್ ರೇಸಿನಲ್ಲಿರುವವರ ಪಟ್ಟಿಯಲ್ಲಿ ಕಾಂಗ್ರೆಸ್ಸಿನ ಮತ್ತೋರ್ವ ಮುಖಂಡ ಸಲೀಂ ಅಹಮದ್ ಅವರ ಹೆಸರೂ ಕೇಳಿಬರುತ್ತಿದೆ. ಕಳೆದ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಲೀಂ ಅಹಮದ್, ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ವಿರುದ್ದ 87,571 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಈ ಹಿಂದೆ ಕೇಂದ್ರ ಸಚಿವರಾಗಿಯೂ ಕೆಲಸ ನಿರ್ವಹಿಸಿದ ಅನುಭವವಿರುವ ಸಲೀಂ ಅಹಮದ್, ಈ ಬಾರಿ ಬೆಂಗಳೂರು ಕೇಂದ್ರದ ಟಿಕೆಟಿಗೆ ಪೈಪೋಟಿ ನಡೆಸುತ್ತಿದ್ದಾರೆ.

ಮೋದಿ ಏನು ನನ್ನ ದೊಡ್ಡಪ್ಪನ ಮಗನಾ? : ಪ್ರಕಾಶ್ ರಾಜ್ ಸಂದರ್ಶನ ಮೋದಿ ಏನು ನನ್ನ ದೊಡ್ಡಪ್ಪನ ಮಗನಾ? : ಪ್ರಕಾಶ್ ರಾಜ್ ಸಂದರ್ಶನ

ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ರಿಜ್ವಾನ್ ಅರ್ಷದ್

ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ರಿಜ್ವಾನ್ ಅರ್ಷದ್

ರಿಜ್ವಾನ್ ಅರ್ಷದ್ ಕೂಡಾ ಟಿಕೆಟಿಗಾಗಿ ಪೈಪೋಟಿ ನಡೆಸುತ್ತಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿಯೂ ಅವರು ಅಭ್ಯರ್ಥಿಯಾಗಿ, ಪಿ ಸಿ ಮೋಹನ್ ವಿರುದ್ದ ಸೋಲು ಅನುಭವಿಸಿದ್ದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೃಷ್ಣ ಭೈರೇಗೌಡ ಇವರು ರಿಜ್ವಾನ್ ಗೆ ಟಿಕೆಟ್ ನೀಡಲು ಬಯಸಿದ್ದಾರೆ ಎನ್ನುವ ಮಾಹಿತಿಯಿದೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರವೆಂಬ ವೈವಿಧ್ಯ, ವೈಶಿಷ್ಟ್ಯಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರವೆಂಬ ವೈವಿಧ್ಯ, ವೈಶಿಷ್ಟ್ಯ

English summary
Loksabha elections 2019: Five Congress leaders trying for ticket from Bengaluru Central including Rizwan Arshad, BK Hari Prasad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X