ಜ.28ರಂದು 3 ನಾಟಕಗಳ ರಸದೌತಣ ನೀಡಲಿದೆ 'ಲೋಕಚರಿತ'

ಹತ್ತು ಹಲವು ಸಾಹಿತ್ಯಿಕ ಕಾರ್ಯಕ್ರಮಗಳ ಮೂಲಕ ಹೆಸರು ಗಳಿಸಿದ 'ಲೋಕಚರಿತ'ದ 'ಕಥನ ಕುತೂಹಲ'ದ ಮೊದಲ ಕಂತು ಸಹೃದಯರನ್ನು ತಣಿಸಲು ಸಜ್ಜಾಗಿದೆ.

ಇದೇ ಜನವರಿ 28, ಭಾನುವಾರದಂದು ಬೆಂಗಳೂರಿನ ಹನುಮಂತನಗರದ ಪ್ರಭಾತ್ ಕೆ.ಎಚ್.ಸೌಧದಲ್ಲಿ ಸಂಜೆ 7 ಗೆ ನಡೆಯಲಿದೆ. ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಡೇರ್ ಡೆವಿಲ್ ಉಸ್ತಫಾ, ನಟರಾಜ ಹುಳಿಯಾರ್ ಅವರ ದಾದಾ ಕ ಫಾಡ್, ಮೌನೇಶ ಬಡಿಗೇರ ಅವರ ಶಫಿ ಎಲೆಕ್ಟ್ರಿಕಲ್ಸ್ ನಾಟಕಗಳು ನಾಟಕ ಪ್ರಿಯರಿಗೆ ರಸದೌತಣ ನೀಡಲಿವೆ.

'ಲೋಕಚರಿತ'ವು 2013ರಲ್ಲಿ ಆರಂಭಗೊಂಡ - ಸಾಹಿತ್ಯ, ನಾಟಕ, ಚಿತ್ರ-ಶಿಲ್ಪ, ನೃತ್ಯ, ಸಂಗೀತ, ಚಲನಚಿತ್ರ ಮುಂತಾದ ಕ್ಷೇತ್ರದಲ್ಲಿ ತೊಡಗಿಕೊಂಡವರ ಒಂದು ಸಾಂಸ್ಕೃತಿಕ ಬಳಗ. ಪ್ರತಿ ತಿಂಗಳ ಎರಡನೇ ಭಾನುವಾರದಂದು 'ಲೋಕಚರಿತ ಮಿತ್ರಕೂಟ'ದಲ್ಲಿ ಸಂವಾದ, ಮಾತುಕತೆ, ಚರ್ಚೆ ನಡೆಯುತ್ತದೆ.

ಈವರೆಗೆ - ವಿವೇಕ ಶಾನಭಾಗ, ಕೆ.ವಿ. ಅಕ್ಷರ, ನಾಗೇಶ ಹೆಗಡೆ, ಎಂ.ಎಸ್.ಶ್ರೀರಾಮ್, ಜಿ.ಎಸ್. ಭಾಸ್ಕರ್, ರಾಧಾಕೃಷ್ಣನ್ ನಯ್ಯರ್, ಬಿ.ಆರ್. ವಿಶ್ವನಾಥ್, ಚಿದಂಬರರಾವ್ ಜಂಬೆ, ಉಷಾ ಪಿ. ರೈ, ಜನಾರ್ಧನರೆಡ್ಡಿ, ವೀರನಾರಾಯಣ, ಕಲಾಗಂಗೋತ್ರಿ ಮಂಜು, ಸ್ವರೂಪ್ ಶರ್ಮನ್, ನಟರಾಜ ಹುಳಿಯಾರ್, ಮುಕುಂದರಾವ್, ಜೆ. ಶ್ರೀನಿವಾಸಮೂರ್ತಿ, ಜಯಂತ ಕಾಯ್ಕಿಣಿ, ರಘುನಂದನ, ಪ್ರತಿಭಾ ನಂದಕುಮಾರ್, ಚಿರಂಜೀವ ಸಿಂಗ್, ಎಂ.ಎಸ್, ಆಶಾದೇವಿ, ಸುಂದರ್ ಸಾರುಕ್ಕೈ, ಬಿ.ವಿ. ರಾಜಾರಾಮ್, ಕೆ.ಎಸ್. ನಾಗರತ್ನಮ್ಮ, ಮಲ್ಲಿಕಾರ್ಜುನ ಕಟಗೋಳ ಮುಂತಾದವರೆಲ್ಲಾ ಅತಿಥಿಗಳಾಗಿ ಆಗಮಿಸಿ ತಮ್ಮ ಅನುಭವಗಳನ್ನು ಈ ಬಳಗದೊಡನೆ ಹಂಚಿಕೊಂಡಿದ್ದಾರೆ.

ಲೋಕಚರಿತದಲ್ಲಿ ಭಾಗವಹಿಸುವವರಿಗಾಗಿ ಇರುವ, ಪುಸ್ತಕಗಳನ್ನು ಕೊಡು-ಕೊಳುವ, ಆ ಮೂಲಕ ಅವರನ್ನು ಓದುವ ಹವ್ಯಾಸಕ್ಕೆ ತೊಡಗಿಸುವ ಸರಿಹೊತ್ತಿಗೆ ಎಂಬ ಯೋಜನೆಯನ್ನು ಲೋಕಚರಿತ ರೂಪಿಸಿದೆ.

ಲೋಕಚರಿತ ಕಾರ್ಯಾಗಾರ

ಲೋಕಚರಿತ ಕಾರ್ಯಾಗಾರ

ಲೋಕಚರಿತವು ಈ ವರೆಗೆ ಛಾಯಾಗ್ರಹಣ, ಮೂಕಾಭಿನಯ, ಚಲನಚಿತ್ರ, ಪ್ರಸಾಧನ, ಸಂಗೀತ ಕುರಿತಾದ ಶಿಬಿರಗಳನ್ನು ಯೋಜಿಸಿದೆ. ಇವು ಎರಡನೇ ಭಾನುವಾರದ ಮಿತ್ರಕೂಟಕ್ಕೆ ಹೊರತಾಗಿ ಆಯೋಜಿಸಿರುವ ಎರಡೆರಡು ದಿನದ ಕಾರ್ಯಾಗಾರಗಳು. ಇದಲ್ಲದೇ ನಮ್ಮ ಬಳಗವು ಮಕ್ಕಳಿಗೆ ಸಂಗೀತ, ನೃತ್ಯ ಮತ್ತು ಮೂಕಾಭಿನಯ ಕಾರ್ಯಾಗಾರಗಳನ್ನು ಕನಕಪುರ ಬಳಿಯಅಕ್ಷರಮನೆ' ಮತ್ತು ಚಾಮರಾಜನಗರದ ದೀನಬಂಧು' ಆಶ್ರಮಗಳಲ್ಲಿ ನಡೆಸಿದೆ. ಗೀತಚರಿತ: ರಂಗಸಂಗೀತದ ಮೂಲಕ 'ರಂಗ ಇತಿಹಾಸವನ್ನು' ವ್ಯಾಖ್ಯಾನಿಸುವ ಒಂದು ವಿಶಿಷ್ಟ ಪ್ರಯೋಗ ಇದು. ಇದರ ಹಲವು ಪ್ರದರ್ಶನಗಳು ನಡೆದಿದ್ದು, 'ಸಖ್ಯದಆಖ್ಯಾನ' ಎನ್ನುವುದು ಶೃಂಗಾರ ರಸಭರಿತ ಗೀತೆಗಳ ಇತ್ತೀಚಿನ ಪ್ರದರ್ಶನ.

ಕಥನಕುತೂಹಲ

ಕಥನಕುತೂಹಲ

ಪ್ರಸ್ತುತ ಲೋಕಚರಿತ ತಂಡವು ಕನ್ನಡದ ಪ್ರಮುಖ ಕಥೆಗಳನ್ನು ರಂಗ ಪ್ರಸ್ತುತಿಯ ರೂಪಕ್ಕೆ ತರುವ ಯೋಜನೆಯನ್ನು ಕಳೆದ ಮೂರ್ನಾಲ್ಕು ತಿಂಗಳಿಂದ ನಡೆಸುತ್ತಿದೆ. ಕನ್ನಡದ ಹಲವಾರು ಕತೆಗಳನ್ನು ನಮ್ಮ ತಂಡದ ಸಮುದಾಯದೊಟ್ಟಿಗೆ ಓದಿ, ಅವುಗಳಲ್ಲಿ ಕೆಲವನ್ನು ಆಯ್ದು ರಂಗಪ್ರಸ್ತುತಿ'ಯ ರೂಪಕ್ಕೆ ತರುವ ಪ್ರಯತ್ನವನ್ನು ಮಾಡುತ್ತಿದೆ. ಇದರ ಮೊದಲ ಗುಚ್ಛವೇ ಈ 'ಕಥನ ಕುತೂಹಲ - 1'

ನಿರ್ದೇಶಕರ ಟಿಪ್ಪಣಿಗಳು

ನಿರ್ದೇಶಕರ ಟಿಪ್ಪಣಿಗಳು

ಕುಮಾರರಾಜು ನಿರ್ದೇಶಿಸಿದ ಪೂರ್ಣಚಂದ್ರ ತೇಜಸ್ವಿಯವರ ಡೇರ್ ಡೆವಿಲ್ ಮುಸ್ತಾಫಾ', ಗಿರಿಧರ್ ಎಸ್. ನಿರ್ದೇಶಿಸಿದ ಎನ್.ನಟರಾಜ್ ಹುಳಿಯಾರ್ ಅವರ ದಾದಾ ಕ ಪಹಾಡ್, ನವೀನ್ ಆರ್. ಎನ್. ನಿರ್ದೇಶನದ ಮೌನೇಶ ಬಡಿಗೇರ ಅವರ ಶಫಿ ಎಲೆಕ್ಟ್ರಿಕಲ್ಸ್ ನಾಟಕಗಳು ಪ್ರದರ್ಶನಗೊಳ್ಳಲಿವೆ. ರಂಗದ ಹಿಂದೆ: ಲೋಕಚರಿತ ಬಳಗ

ನಟನೆ-ಸಂಗೀತ

ನಟನೆ-ಸಂಗೀತ

ಅಭಿಜಿತ್ ಕಶ್ಯಪ್, ಅಜಿತ್ ಜಿ., ಕಾರ್ತಿಕೇಶ್ವರ ಎನ್.ಎಚ್., ಚೆನ್ನಕೇಶವ ಎನ್., ಚೈತ್ರ ಶೆಟ್ಟಿ, ಜ್ಞಾನೇಂದ್ರ, ಡಯಾನಾ ಮಿರಾಂದ, ಪೃಥ್ವಿ ಕೆ.ಜಿ., ಪ್ರಶಾಂತ, ಯೋಗೀಶ್ ಜಿ., ವೆಂಕಟೇಶ್ ಎನ್., ಶಾಂತಲಾ ಎಸ್. ರಾವ್, ಶ್ರಾವ್ಯ ಎಸ್., ಶ್ರೀವಲ್ಲಭ ಎಸ್., ಶೃಂಗಾರ್ ಎಚ್.ಎಸ್., ಸಹನಾ ಎಂ.ಎಸ್., ಸಿಂಧು ಹೆರೂರ್. ಸಂಗೀತ: ಗಣೇಶ ಭಾರಾದ್ವಾಜ, ಶ್ರೀವತ್ಸ ಅಯ್ಯರ್, ಮಧುರ ಚನ್ನಿಗ ಸುಬ್ಬಣ್ಣ, ಗಿರಿಜಾ ಸಿದ್ದಿ, ಪಂಕಜಾ ಕೆ., ಗೀತಾ ಸಿದ್ದಿ, ವಿಷ್ಣು ಸಾಯಿ, ಪ್ರಸನ್ನಕುಮಾರ್ ಎಂ.ಎಸ್., ಪರ್ಣಿಕಾ ಹೆಬ್ಬಾರ್, ಪಲ್ಲವಿ, ಪ್ರಾರ್ಥನಾ, ಸಿಂಚನಾ. ಪ್ರವೇಶ ಶುಲ್ಕ 100 rs.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+