ಫೇಸ್ಬುಕ್: ಮೋದಿ ಪ್ರಶಂಸಕರ ಸಂಖ್ಯೆ ಕೋಟಿ ದಾಟಿದೆ

Lok Sabha polls 2014- Narendra Modi Facebook fans number crosses 1 crore
ಬೆಂಗಳೂರು, ಫೆ.11- ಬಿಜೆಪಿ ಪ್ರಧಾನಿ ಆಕಾಂಕ್ಷಿ ನರೇಂದ್ರ ಮೋದಿ ಅವರು ದೆಹಲಿಯತ್ತ ನಾಗಾಲೋಟದಲ್ಲಿರುವಾಗ ಫೇಸ್ ಬುಕ್ ಸಾಮಾಜಿಕ ಜಾಲತಾಣದಲ್ಲಿ ಮೋದಿ ಪ್ರಶಂಸಕರ (fans) ಸಂಖ್ಯೆ ಕೋಟಿ ದಾಟಿದೆ.

ಇದೇ ಮಾಸಾಂತ್ಯ ಅಮೆರಿಕದ ರಾಯಭಾರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಅಹಮದಾಬಾದಿಗೆ ಬರುತ್ತಿದ್ದಾರೆ ಎಂಬ ಸುದ್ದಿಯ ಜತೆಗೆ ಮೋದಿ ಅಭಿಮಾನಿಗಳಿಗೆ ಈ ಸುದ್ದಿಯೂ ಮತ್ತಷ್ಟು ಸಂತಸವನ್ನು ತಂದಿದೆ.
( ನರೇಂದ್ರ ಮೋದಿ ಭೇಟಿಗೆ ಮುಂದಾದ ಅಮೆರಿಕ )

ಭೌಗೋಳಿಕ ವರ್ಗೀಕರಣದ ಮೇಲೆ ಹೇಳುವುದಾದರೆ ಮೋದಿ ಪ್ರಶಂಸಕರ (fans) ಪೈಕಿ ಶೇ. 90ರಷ್ಟು ಮಂದಿ ಭಾರತದವರೇ ಆಗಿದ್ದಾರೆ. ಕಳೆದ ಆರು ತಿಂಗಳಲ್ಲಿ ಅಂದರೆ ಮೋದಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಮೋದಿ ಪ್ರಶಂಸಕರ ಸಂಖ್ಯೆ ಐದು ಪಟ್ಟು ಹೆಚ್ಚಿದೆ. ಫೆಬ್ರವರಿ 10 ರಂದು ಮೋದಿ ಪ್ರಶಂಸಕರು 97 ಲಕ್ಷ ಇದ್ದರು. ಇಂದಿಗೆ (ಫೆಬ್ರವರಿ 11) ಅವರ ಸಂಖ್ಯೆ 1,03 ಲಕ್ಷಕ್ಕೆ ತಲುಪಿದೆ.

facebookನಲ್ಲಿ ಮೋದಿ ಅಭಿಮಾನಿಗಳ ಸಂಖ್ಯೆ ದಿನಾ 5,78,895 ಮಂದಿ ಮತ್ತು ವಾರಕ್ಕೆ 8,59,791 ಮತ್ತು ತಿಂಗಳಿಗೆ 2,371,100 ಮಂದಿ ಹೆಚ್ಚಾಗುತ್ತಿದ್ದಾರೆ. ( Narendra Modi facebook )

ಕುತೂಹಲದ ಸಂಗತಿಯೆಂದರೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಬಗ್ಗೆ ಮಾತನಾಡುವವರ ಸಂಖ್ಯೆ (facebookನಲ್ಲಿ) ಜನವರಿ 28ರಿಂದ (14 ಲಕ್ಷ ಇದ್ದವರು) ಫೆಬ್ರವರಿ 11ರ (10 ಲಕ್ಷಕ್ಕೆ) ನಡುವೆ ಗಣನೀಯವಾಗಿ ತಗ್ಗಿದೆ. ಆದರೆ ಈ ಸಂದರ್ಭದಲ್ಲಿ ಮತ್ತೊಬ್ಬ ಸಂಭಾವ್ಯ ಪ್ರಧಾನಿ ಅಭ್ಯರ್ಥಿ, ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು Times Nowಗೆ ಸಂದರ್ಶನ ನೀಡಿದ್ದು, ಜನ ಅದರ ಬಗ್ಗೆಯೇ ಹೆಚ್ಚಾಗಿ ಮಾತನಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+