ಚುನಾವಣೆ ಪ್ರಭಾವ ದರ ಏರಿಕೆಗೆ ಹಿಂಜರಿದ ಸಿಎಂ ಸಿದ್ದು

Lok Sabha polls effect Bescom and BWSSB power and water tariff hike stalled
ಬೆಂಗಳೂರು, ನ.21: ಒಂದು ಕಡೆಯಿಂದ ರಾಜ್ಯದ ಜನತೆಗೆ ಸಕಲ ಭಾಗ್ಯಗಳನ್ನು ಕಲ್ಪಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರಕಾರವು ಈಗ ವಿದ್ಯುತ್ ಮತ್ತು ನೀರಿನ ದರಗಳನ್ನು ಹೆಚ್ಚಿಸದೆ ಗ್ರಾಹಕರ ಮೇಲೆ ಬೀಳಬಹುದಾಗಿದ್ದ ದೊಡ್ಡ ಹೊರೆಯನ್ನು ತಾತ್ಕಾಲಿಕವಾಗಿ ಮುಂದೂಡಿದೆ. ಇದರಿಂದ ಬೆಂಗಳೂರಿಗರು ಅಂದರೆ ಮತದಾರ ಪ್ರಭುಗಳು ಸದ್ಯಕ್ಕೆ ನಿಟ್ಟುಸಿರುಬಿಡಬಹುದು.

ಅಂದರೆ ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆಗಳನ್ನಿಟ್ಟುಕೊಂಡು ಈಗ ಬೆಲೆ ಏರಿಕೆಗೆ ಕೈಹಾಕಿದರೆ ಅದು ನಮ್ಮ 'ಕೈ'ಯನ್ನೇ ಸಡುಬಲ್ಲದು ಎಂಬುದನ್ನು ಗ್ರಹಿಸಿರುವ ಕಾಂಗ್ರೆಸ್ ಪಕ್ಷ, ದರ ಏರಿಕೆ ಮಾಡುವುದು ಬೇಡವೆಂದು ತನ್ನ ಸರಕಾರಕ್ಕೆ ಸಂದೇಶ ರವಾನಿಸಿದೆ.

ಮತದಾರರನ್ನು ಸಂತೃಪ್ತಿಗೊಳಿಸುವ ಆಲೋಚನೆಯಲ್ಲಿ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ದರ ಏರಿಕೆಗೆ ಕೆಂಪು ಬಾವುಟ ತೋರಿಸಿದ್ದಾರೆ.

ಹಾಗಾಗಿ Bescom ಮತ್ತು BWSSBನಿಂದ ವಿದ್ಯುತ್ ಮತ್ತು ನೀರಿನ ದರ ಏರಿಸಬೇಕು ಎಂಬ ಪ್ರಸ್ತಾಪವಿದ್ದರೂ ಅದಕ್ಕೆ ತಡೆಯೊಡ್ಡಿದೆ. ಇತ್ತೀಚೆಗೆ ಬಿಬಿಎಂಪಿ ಸಹ ಪಾರ್ಕಿಂಗ್ ಶುಲ್ಕ ವಿಧಿಸುವ ಸಾಹಸ ಮಾಡಿಲ್ಲ ಎಂಬುದು ಗಮನಾರ್ಹ. ನೀರಿನ ಬಿಲ್ ದರ ನಿರ್ದಿಷ್ಟ ವರ್ಗದ ಗ್ರಾಹಕರಿಗೆ ಶೇ. 50ರಷ್ಟು ಹೆಚ್ಚಾಗಬೇಕಿತ್ತು. ಮತ್ತು ಉಳಿದ ಇತರೆ ಗ್ರಾಹಕರಿಗೂ ದರ ಏರಿಕೆ ವಿಧಿಸಬೇಕು ಎಂದು BWSSB ಪ್ರಸ್ತಾವನೆ ಸಲ್ಲಿಸಿತ್ತು.

ಕಳೆದ 6 ವರ್ಷಗಳಿಂದ ನಾವು ನೀರಿನ ಬಿಲ್ ಹೆಚ್ಚಿಸಿಲ್ಲ. ಇದರಿಂದ ಮಂಡಳಿಯು ಅನೇಕ ಅಭಿವೃದ್ಧಿಗಳನ್ನು ಸ್ಥಗಿತಗೊಳಿಸಿದೆ. ಸರಕಾರ ನಮ್ಮ ಪ್ರಸ್ತಾವನೆಗೆ ಮಣೆ ಹಾಕುತ್ತದೆ ಎಂದು BWSSB ಅಧ್ಯಕ್ಷ ಎಂಎಸ್ ರವಿಶಂಕರ್ ಆಶಿಸಿದ್ದಾರೆ.

ಇದೇ ವೇಳೆ, ರಾಜ್ಯದ ಎಲ್ಲ ಐದೂ ವಿದ್ಯುತ್ ಸರಬರಾಜು ಕಂಪನಿಗಳೂ (Escoms) ಯುನಿಟ್ ಗೆ ಸರಾಸರಿ ಒಂದು ರೂಪಾಯಿಯಾದರೂ ಹೆಚ್ಚಿಸಿ. 1,700 ಕೋಟಿ ರೂ ಕೊರತೆ ಅನುಭವಿಸುತ್ತಿದ್ದೇವೆ ಎಂದು Karnataka Electricity Regulatory Commission (KERC)ಗೆ ಮೊರೆಹೋಗಿವೆ. ಆದರೆ ಸರಕಾರ ಅದಕ್ಕೂ ಅಸ್ತು ಎಂದಿಲ್ಲ. ಕೈಗಾರಿಕೆ ಮತ್ತು ವಾಣಿಜ್ಯ ಒಕ್ಕೂಟಗಳೂ Escomಗಳ ಬೇಡಿಕೆಯ ವಿರುದ್ಧ ಕಿಡಿಕಾರಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+