Get Updates
Get notified of breaking news, exclusive insights, and must-see stories!

Lok Sabha Election 2024: ಬಿಜೆಪಿ ಪ್ರತಿಷ್ಠಿತ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ವರ್ಕ್‌ ಆಗುತ್ತಾ ʼಕೈʼ ಚಳಕ?

ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಇತ್ತ ಆಡಳಿತರೂಢ ಕಾಂಗ್ರೆಸ್‌ ಗೆ ಠಕ್ಕರ್‌ ಕೊಡಲು ಕಮಲ-ದಳ ನಾಯಕರು ಮೈತ್ರಿಯಾಗಿದ್ದು, ಬೆಂಗಳೂರು ವ್ಯಾಪ್ತಿಯಲ್ಲಿ ಬಿಜೆಪಿ ಪ್ರತಿಷ್ಠಿತ ಕ್ಷೇತ್ರ ಎಂದರೇ ಅದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ. ಬಿಜೆಪಿ ಹಾಲಿ ಸಂಸದ ತೇಜಸ್ವಿ ಸೂರ್ಯ ಮತ್ತೊಮ್ಮೆ ಜಯ ದಾಖಲಿಸಲು ಕಸರತ್ತು ಆರಂಭಿಸಿದ್ರೆ, ಇತ್ತ ಕಾಂಗ್ರೆಸ್ ನಿಂದ ಸಚಿವ ರಾಮಲಿಂಗಾ ರೆಡ್ಡಿಯ ಅವರ ಪುತ್ರಿ ಸೌಮ್ಯ ರೆಡ್ಡಿ ಅವರಿಗೆ ಟಿಕೆಟ್‌ ನೀಡಿದೆ. ಹಾಗಾದ್ರೆ ಈ ಬಾರಿ ಬಿಜೆಪಿ ಪ್ರತಿಷ್ಟಿತ ಕ್ಷೇತ್ರವಾದ ಬೆಂಗಳೂರು ದಕ್ಷಿಣ ಕ್ಷೇತ್ರದ ರಣಕಣ ಹೇಗಿರಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಹೌದು, ಕಳೆದ 32 ವರ್ಷಗಳಿಂದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ದಿಗ್ವಜಯವನ್ನೇ ಸಾಧಿಸುತ್ತಾ ಬಂದಿದ್ದು, ಈ ಬಾರಿಯೂ ಮತ್ತೊಮ್ಮೆ ಗೆಲ್ಲುವ ನಿರೀಕ್ಷೆ ಇದೆ. ಈಗಾಗಲೇ ಬೆಂಗಳೂರು ದಕ್ಷಿಣದಿಂದ ಹಾಲಿ ಸಂಸದರಾದ ತೇಜಸ್ವಿ ಸೂರ್ಯ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದ್ದು, ಚುನಾವಣಾ ತಯಾರಿಯೂ ಜೋರಾಗಿಯೇ ನಡೆಯುತ್ತಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ದಿವಗಂತ ಅನಂತ್ ಕುಮಾರ್ ಅವರು ಕ್ಷೇತ್ರದಲ್ಲಿ ಮೂರು ದಶಕಗಳ ಕಾಲ ಹಿಡಿತವನ್ನು ಹೊಂದಿದ್ದರು. ಅವರ ಜನಪ್ರಿಯತೆ ಹಾಗೂ ಮೋದಿ ಅವರ ನಾಮಬಲದ ಮೇಲೆ ಕಳೆದ ಎರಡು ಬಾರಿಯೂ ಈ ಕ್ಷೇತ್ರದಲ್ಲಿ ಕಮಲ ಅರಳಿದ್ದು, ಈ ಬಾರಿಯೂ ಗೆಲ್ಲುವಿಗಾಗಿ ಕೈ ಕಮಲ ಪೈಪೋಟಿ ನಡೆಸುತ್ತಿದೆ.

Lok Sabha Election 2024 Bengaluru south Lok Sabha Constituency Round Up

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಂಟು ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಗೋವಿಂದರಾಜ ನಗರ, ವಿಜಯನಗರ, ಬಿಟಿಎಂ ಲೇ ಔಟ್ ನಲ್ಲಿ ಕಾಂಗ್ರೆಸ್ ಮತ್ತು ಚಿಕ್ಕಪೇಟೆ, ಬಸವನಗುಡಿ, ಪದ್ಮನಾಭನಗರ, ಜಯನಗರ, ಬೊಮ್ಮನಹಳ್ಳಿಯಲ್ಲಿ ಬಿಜೆಪಿ ಗೆಲ್ಲುವು ಸಾಧಿಸಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 3,31,192 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿತ್ತು. ಬಿಜೆಪಿ ಪಡೆದ ಮತಗಳು ಹಿಂದಿನ ಚುನಾವಣೆಗಿಂತ ಶೇ.5.32 ಹೆಚ್ಚಾಗಿತ್ತು. ತೇಜಸ್ವಿಸೂರ್ಯ 7,39,229, ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಬಿ.ಕೆ.ಹರಿಪ್ರಸಾದ್ 4,08,037 ಮತ ಪಡೆದಿದ್ದರು. ಈ ಬಾರಿ ಮೈತ್ರಿ ಬದಲಾಗಿದ್ದು, ಬಿಜೆಪಿ ಶಕ್ತಿ ವೃದ್ಧಿಸಿದೆ. ಇತ್ತ ಬಿಜೆಪಿಯಿಂದ ತೇಜಸ್ವಿ ಸೂರ್ಯ ಕಣದಲ್ಲಿದ್ದರೇ ಕಾಂಗ್ರೆಸ್‌ ನಿಂದ ಸಚಿವ ರಾಮಲಿಂಗಾ ರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ ಅವರ ಅಭ್ಯರ್ಥಿಯಾಗಿದ್ದಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬ್ರಾಹ್ಮಣ (3,50,000),ಒಕ್ಕಲಿಗ ( 5,00,000), ಎಸ್ ಸಿ, ಎಸ್ ಟಿ (6,00,000), ಮುಸ್ಲಿಂ (3,00,000),ಕ್ರಿಶ್ಚಿಯನ್ (2,00,000), ಇತರೆ 2 ಲಕ್ಷ ಮತದಾರರಿದ್ದಾರೆ. ಈ ಅಂಕಿ ಅಂಶಗಳನ್ನು ನೋಡಿದರೆ ಬಿಜೆಪಿಯೇತರ ಅಭ್ಯರ್ಥಿ ಗೆಲುವು ಸಾಧಿಸಬೇಕಿತ್ತಲ್ಲವೇ ಎಂದು ಮೇಲ್ನೋಟಕ್ಕೆ ಅನ್ನಿಸಬಹುದು. ಆದರೆ, ಈ ಕ್ಷೇತ್ರ ಬಿಜೆಪಿಯ ಹಿಡಿತದಲ್ಲಿದ್ದು, ಈ ಕ್ಷೇತ್ರದಿಂದ ಯಾರೇ ಅಭ್ಯರ್ಥಿ ಆದರೂ ಗೆಲ್ಲುವು ಬಿಜೆಪಿಗೆ ಗೆಲುವು ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗಿದೆ. ನಗರ ಕೇಂದ್ರಿತ ಮತದಾರರು ಬಿಜೆಪಿ ಜೊತೆ ಗಟ್ಟಿಯಾಗಿ ನಿಂತಿದ್ದಾರೆ. ಆಗಲೇ ಹೇಳಿದಂತೆ ಬಿಜೆಪಿ ಬೇರುಗಳು ಬಲವಾಗಿವೆ. ಹಿಂದುತ್ವ, ರಾಮ ಮಂದಿರದಂತಹ ಭಾವನಾತ್ಮಕ ವಿಷಯಗಳು ಬಿಜೆಪಿ ಬೆನ್ನಿಗಿವೆ.

Lok Sabha Election 2024 Bengaluru south Lok Sabha Constituency Round Up

ಬೆಂಗಳೂರಿನ ಉಸ್ತುವಾರಿಯೂ ಆಗಿರುವ ಡಿಕೆ ಶಿವಕುಮಾರ್ ಅವರ ತಂತ್ರಗಾರಿಗೆ ಈ ಬಾರಿ ಮುಸ್ಲಿಂ ಮತ್ತು ಒಕ್ಕಲಿಗ ಮತ ಬ್ಯಾಂಕ್ ವಿಭಜನೆ ಆಗುವ ಸಾಧ್ಯತೆ ಇದೆ. ಮುಂದಿನ ಬಿಬಿಎಂಪಿ ಚುನಾವಣೆಯ ದೃಷ್ಟಿಯಿಂದಾಗಿ ಕನಕಪುರ ಬಂಡೆ ಡಿ ಕೆ ಶಿವಕುಮಾರ್‌ ಅವರು ಬೆಂಗಳೂರು ವ್ಯಾಪ್ತಿಯಲ್ಲಿ ಎರಡು ಲೋಕಸಭಾ ಕ್ಷೇತ್ರಗಳನ್ನ ಗೆಲ್ಲುವ ನಿಟ್ಟಿನಲ್ಲಿ ಮಾಸ್ಟರ್‌ ಪ್ಲಾನ್‌ ನಡೆಸಿದ್ದಾರೆ. ಈಗಾಗಲೇ ಬಿಜೆಪಿ ನಾಯಕಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಎಷ್ಟೋ ಬಾರಿ ಆಹ್ವಾನ ನೀಡಿದ್ದರು ಅವರು ಬಿಜೆಪಿ ಪಕ್ಷದಿಂದ ಹೊರ ಬರುವ ಯಾವುದೇ ಲಕ್ಷಣಗಳು ಕಾಣಲಿಲ್ಲ. ಹೀಗಾಗಿ ಯಾವೆಲ್ಲಾ ತಂತ್ರಗಳನ್ನು ಪ್ರಯೋಗ ಮಾಡಬೇಕೋ ಆ ತಂತ್ರಗಾರಿಕೆಯನ್ನ ಕನಕಪುರ ಬಂಡೆ ನಡೆಸುತ್ತಿದಾರೆ. ಇತ್ತ ವಿಧಾನಸಭಾ ಚುನಾವಣೆಯಲ್ಲಿ ಕೈ ಹಿಡಿದ ಗ್ಯಾರಂಟಿ ಅಸ್ತ್ರ. ಈ ಲೋಕಸಮರದಲ್ಲೂ ಹೆಚ್ಚು ಸದ್ದು ಮಾಡಲಿವೆ.

ಒಟ್ನಲಿ, ಸಮರ್ಥ ಅಭ್ಯರ್ಥಿಯನ್ನ ಕಣಕ್ಕಿಳಿಸುವ ಮೂಲಕ ಅಲ್ಪಸಂಖ್ಯಾತ ಮತಗಳನ್ನು ಕ್ರೋಢೀಕರಿಸಿಕೊಂಡು ಬಿಜೆಪಿಯನ್ನು ಮಣಿಸಬಹುದು ಎಂಬ ಹೊಸ ಲೆಕ್ಕಾಚಾರವನ್ನ ಕಾಂಗ್ರೆಸ್‌ ಹಾಕಿಕೊಂಡಿದ್ದು, ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯರೆಡ್ಡಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಇತ್ತ ಬಿಜೆಪಿ ಪ್ರತಿಷ್ಟಿತ ಕೋಟೆಯಾದ ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಖಚಿತವಾಗಿದ್ದು, ಬಿಜೆಪಿ ಗೆಲುವಿನ ಸಾಧ್ಯತೆಗಳು ಹೆಚ್ಚು. ಆದರೂ ಮತದಾರನ ಮನದಿಂಗಿತ ಹೇಗೆ ಇರುತ್ತೆ ಎಂದು ಹೇಳಲಾಗದು.

2019 ರಲ್ಲಿ ಪ್ರಮುಖ ಅಭ್ಯರ್ಥಿಗಳು ಪಡೆದ ಮತಗಳು

ತೇಜಸ್ವಿಸೂರ್ಯ 7,39,229,
ಬಿ.ಕೆ.ಹರಿಪ್ರಸಾದ್ 4,08,037

ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರಗಳು

1. ವಿಜಯನಗರ - ಕಾಂಗ್ರೆಸ್‌
2. ಜಯನಗರ - ಬಿಜೆಪಿ
3. ಪದ್ಮನಾಭ ನಗರ - ಬಿಜೆಪಿ
4. ಬಿಟಿಎಂ ಲೇಔಟ್ - ಕಾಂಗ್ರೆಸ್
5. ಬಸವನಗುಡಿ - ಬಿಜೆಪಿ
6. ಬೊಮ್ಮನಹಳ್ಳಿ - ಬಿಜೆಪಿ
7. ಚಿಕ್ಕಪೇಟೆ - ಬಿಜೆಪಿ
8. ಗೋವಿಂದರಾಜನಗರ - ಕಾಂಗ್ರೆಸ್‌

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+