Get Updates
Get notified of breaking news, exclusive insights, and must-see stories!

ಮತ್ತೆ ನೆನಪಾಯಿತು ಮಲ್ಯರ ಕುಣಿಗಲ್ ಕುದುರೆ ಫಾರ್ಮ್, ಷೇರು ಖರೀದಿಸಿದರೆ ಜೋಕೆ

ಬೆಂಗಳೂರು, ಅಕ್ಟೋಬರ್ 25: ಉದ್ದೇಶಿತ ಸುಸ್ತಿದಾರ- ದೇಶ ಬಿಟ್ಟು ಹೋಗಿರುವ ಉದ್ಯಮಿ ವಿಜಯ್ ಮಲ್ಯಗೆ ಸೇರಿದ 41 ಲಕ್ಷಕ್ಕೂ ಹೆಚ್ಚು ಷೇರುಗಳನ್ನು ಸಾಲ ವಸೂಲಾತಿ ಟ್ರಿಬ್ಯುನಲ್ ಅಕ್ಟೋಬರ್ 30ರಂದು ಇ ಹರಾಜು ಮೂಲಕ ಮಾರಾಟಕ್ಕೆ ಇಟ್ಟಿದೆ. ಆದರೆ ಇದನ್ನು ಸಾರ್ವಜನಿಕರು ಖರೀದಿಸದಂತೆ ಆದಾಯ ತೆರಿಗೆ ಇಲಾಖೆ ಗುರುವಾರ ಎಚ್ಚರಿಕೆ ನೀಡಿದೆ.

"ಮಲ್ಯರ ಷೇರು ಹೊಂದಿರುವ ಅವರ ಸಹವರ್ತಿ ಕಂಪನಿ ಯುನೈಟೆಡ್ ರೇಸಿಂಗ್ ಅಂಡ್ ಬ್ಲಡ್ ಸ್ಟಾಕ್ ಬ್ರೀಡರ್ಸ್ ಲಿಮಿಟೆಡ್ (URBBL)ನಿಂದ ಇ ಹರಾಜಿನಲ್ಲಿ ಷೇರು ಖರೀದಿಸಿದರೆ ಅದಕ್ಕೆ ಆಯಾ ವ್ಯಕ್ತಿಗಳೇ ಜವಾಬ್ದಾರರು. ತೆರಿಗೆ ತಪ್ಪಿಸಿದ ಅಥವಾ ತೆರಿಗೆ ವಂಚನೆ ಪ್ರಕರಣದಲ್ಲಿ ಆ ಷೇರುಗಳು ನಮ್ಮ ಸುಪರ್ದಿಯಲ್ಲೇ ಇವೆ" ಎಂದು ಆದಾಯ ತೆರಿಗೆ ಅಧಿಕಾರಿ ಎನ್.ರಾಟಿ ತಿಳಿಸಿದ್ದಾರೆ.

ಇನ್ನು ಸಾಲ ವಸೂಲಾತಿ ಟ್ರಿಬ್ಯುನಲ್ ನಿಂದ ಅಕ್ಟೋಬರ್ 30ಕ್ಕೆ URBBL ಷೇರುಗಳನ್ನು ಇ ಆಕ್ಷನ್ ಮೂಲಕ ಮಾರಾಟಕ್ಕೆ ಇಡಲಾಗಿದೆ. ಹದಿನೇಳು ಬ್ಯಾಂಕ್ ಗಳ ಒಕ್ಕೂಟದಿಂದ 2008ರಿಂದ 2012ರ ಮಧ್ಯೆ, ಸದ್ಯಕ್ಕೆ ಕಾರ್ಯ ನಿರ್ವಹಿಸದ ಕಿಂಗ್ ಫಿಷರ್ ಏರ್ ಲೈನ್ಸ್ ಗಾಗಿ ಮಲ್ಯ ಸಾಲ ಪಡೆದಿದ್ದರು. ಅದನ್ನು ವಸೂಲಿ ಮಾಡುವ ಸಲುವಾಗಿ ಈ ಹರಾಜು ಆಯೋಜಿಸಲಾಗಿದೆ.

Liquor baron Vijay Mallyas shares in stud farm put on sale, tax officials warn people

ಈ ಷೇರುಗಳ ಮಾರಾಟ ಅಥವಾ ವರ್ಗಾವಣೆ ಸೆಕ್ಷನ್ 281 ಆದಾಯ ತೆರಿಗೆ ಕಾಯ್ದೆ 1961ರ ಪ್ರಕಾರ ನ್ಯಾಯಸಮ್ಮತವಲ್ಲ. ಯಾವುದೇ ವ್ಯಕ್ತಿ ಇಂಥ ಷೇರುಗಳನ್ನು ಖರೀದಿ ಮಾಡಿದರೆ ಅದಕ್ಕೆ ಸ್ವತಃ ಜವಾಬ್ದಾರರು ಎಂದು ರಾಟಿ ಹೇಳಿದ್ದಾರೆ.

ವಿಜಯ್ ಮಲ್ಯ 1988ರಲ್ಲಿ URBBL ಹೆಸರಿನಲ್ಲಿ ಲಿಸ್ಟ್ ಆಗದ ಕಂಪನಿಯೊಂದನ್ನು ಆರಂಭಿಸಿದ್ದರು. ಕುದುರೆ ರೇಸಿನ ಬಗ್ಗೆ ಅವರಿಗಿರುವ ಆಸಕ್ತಿ ಹಾಗೂ ಕುದುರೆ ತಳಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಅವರಿಗಿರುವ ಆಸಕ್ತಿಯನ್ನು ಒಂದು ಕಡೆ ಕ್ರೋಡೀಕರಿಸಲು ಈ ಕಂಪನಿ ಮಾಡಿಕೊಂಡಿದ್ದರು.

1992ರಲ್ಲಿ ಐತಿಹಾಸಿಕವಾದ ಕುಣಿಗಲ್ ಕುದುರೆ ಫಾರ್ಮ್ ಅನ್ನು ವಿಜಯ್ ಮಲ್ಯ ಖರೀದಿಸಿದ್ದರು. ಉತ್ತಮ ದರ್ಜೆಯ ಕುದುರೆ ತಳಿಗಳನ್ನು ಬೆಳೆಸಲು ತುಮಕೂರು ಜಿಲ್ಲೆಯ ಕುಣಿಗಲ್ ನಲ್ಲಿ ಜಾಗ ಖರೀದಿಸಿದ್ದರು. ಈ ಸ್ಥಳ ಬೆಂಗಳೂರಿನಿಂದ 70 ಕಿ.ಮೀ. ದೂರದಲ್ಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+