ಮೇ 21ಕ್ಕೆ ಅತೃಪ್ತ ಕಾಂಗ್ರೆಸ್ ಶಾಸಕರ ಸಭೆ ? ಸಿದ್ದರಾಮಯ್ಯ ಬೆಂಬಲವಿದೆಯೇ?

ಬೆಂಗಳೂರು, ಮೇ 14: ಇಷ್ಟು ದಿನ ಕಾಂಗ್ರೆಸ್‌ನ ಅತೃಪ್ತ ಶಾಸಕರು ಗುಟ್ಟಾಗಿ ಸಭೆ ನಡೆಸುತ್ತಿದ್ದರು. ಕಾಂಗ್ರೆಸ್‌ನ ಶಾಸಕರು ಗುಟ್ಟಾಗಿಯೇ ಅವರನ್ನು ಬೇಟಿಯಾಗಿ ಸಮಾಧಾನಪಡಿಸುತ್ತಿದ್ದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಆದರೆ ಇದೀಗ ಕಾಂಗ್ರೆಸ್ ಶಾಸಕರು ಬಹಿರಂಗವಾಗಿ ಬಂಡಾಯ ಏಳುವ ಎಲ್ಲಾ ಸಾಧ್ಯತೆಗಳು ಗೋಚರಿಸಿದ್ದು, ಮೇ 21ಕ್ಕೆ ಸಮಾನ ಅತೃಪ್ತ ಕಾಂಗ್ರೆಸ್ ಶಾಸಕರ ಸಭೆ ನಡೆಯುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕುಂದಗೋಳ ಚಿಂಚೋಳಿ ಉಪ ಚುನಾವಣೆ ಮೇ 19ಕ್ಕೆ ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್ ಶಾಸಕರು ಸರ್ಕಾರದ ವಿರುದ್ಧ ಅದರಲ್ಲೂ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಬಹಿರಂಗ ಬಂಡಾಯಕ್ಕೆ ಮುಂದಾಗುತ್ತಾರೆ ಎಂಬ ನಿರೀಕ್ಷೆ ರಾಜಕೀಯ ವಲಯದಲ್ಲಿತ್ತು. ಅದಕ್ಕೆ ಪುಷ್ಟಿ ಎಂಬಂತೆ ಸಭೆ ನಡೆಸುವ ಕುರಿತು ಬಿಡಿಎ ಅಧ್ಯಕ್ಷ ಎಸ್‌ಟಿ ಸೋಮಶೇಖರ್ ಸುಳಿವು ನೀಡಿದ್ದಾರೆ.

ಬಿಡಿಎ ಸೇರಿದಂತೆ ಕಾಂಗ್ರೆಸ್ ಶಾಸಕರು ಅಧ್ಯಕ್ಷ ರಾಗಿರುವ ನಿಗಮ -ಮಂಡಳಿಗಳನ್ನು ಅಧಿಕಾರಿಗಳ ಮೂಲಕ ನಿಯಂತ್ರಿಸುವ ತಂತ್ರಗಾರಿಕೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅನುಸರಿಸುತ್ತಿದ್ದಾರೆ ಎಂಬ ಮುನಿಸು ಕಾಂಗ್ರೆಸ್‌ನ ಶಾಸಕರಿಗಿದೆ. ಈ ಗ್ಗೆ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ಶಾಸಕರು ತಮ್ಮ ಧ್ವನಿಯೆತ್ತಲು ಆರಂಭಿಸಿದ್ದಾರೆ.

ಸಿದ್ದರಾಮಯ್ಯ ಮಧ್ಯ ಪ್ರವೇಶದಿಂದ ಸುಮ್ಮನಾಗಿದ್ದರು

ಸಿದ್ದರಾಮಯ್ಯ ಮಧ್ಯ ಪ್ರವೇಶದಿಂದ ಸುಮ್ಮನಾಗಿದ್ದರು

ಈ ಮೊದಲೇ ಬಂಡಾಯ ಏಳಲು ಹೊರಟ ಕಾಂಗ್ರೆಸ್‌ನ ಅತೃಪ್ತ ಶಾಸಕರು ಸಿದ್ದರಾಮಯ್ಯ ಮಧ್ಯಪ್ರವೇಶದಿಂದ ಸುಮ್ಮನಾಗಿದ್ದರು. ವಿಧಾನಸಭೆ ಉಪ ಚುನಾವಣೆ ಮೇಲೆ ಪರಿಣಾಮ ಬೀರುವ ಕಾರಣದಿಂದ ಇಂತಹ ನಡವಳಿಕೆ ತೋರದಂತೆ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕರಿಗೆ ಕಡಿವಾಣ ಹಾಕಿದ್ದರು.

19ರಂದು ಮತದಾನ ಮುಗಿಯುತ್ತಿದ್ದಂತೆ ರಾಜಕೀಯ ವಿಪ್ಲವ

19ರಂದು ಮತದಾನ ಮುಗಿಯುತ್ತಿದ್ದಂತೆ ರಾಜಕೀಯ ವಿಪ್ಲವ

ಚಿಂಚೋಳಿ, ಕುಂದಗೋಳದಲ್ಲಿ ಮೇ 19ರಂದು ಉಪ ಚುನಾವಣೆ ಮುಗಿಯುತ್ತಿದ್ದಂತೆ ರಾಜಕೀಯ ವಿಪ್ಲವ ಆರಂಭವಾಗುತ್ತದೆ ಎಂಬ ನಿರೀಕ್ಷೆ ಇದೆ. ಇಂದು ಹುಬ್ಬಳ್ಳಿ ಹೋಟೆಲ್ ಒಂದರಲ್ಲಿ ಮುಖ್ಯಮಮತ್ರಿ ಎಚ್‌ಡಿ ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರು ಸೇರಿ ಬಂಡಾಯ ಶಮನ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಕಾಂಗ್ರೆಸ್ ಶಾಸಕ ಸಭೆ, ಸೋಮಶೇಖರ್ ಪೂರಕ ಹೇಳಿಕೆ

ಕಾಂಗ್ರೆಸ್ ಶಾಸಕ ಸಭೆ, ಸೋಮಶೇಖರ್ ಪೂರಕ ಹೇಳಿಕೆ

ಇದಕ್ಕೆ ಪೂರಕವೆಂಬಂತೆ ಶಾಸಕ ಎಸ್‌ಟಿ ಸೋಮಶೇಖರ್ ಸೋಮವಾರ ಹೇಳಿಕೆ ನೀಡಿದ್ದು, ಕಾರಣಾಂತರಗಳಿಂದ ಕಳೆದ ಬಾರಿ ನಿಗದಿಯಾಗಿದ್ದ ಸಭೆ ನಡೆಸಲು ಸಾಧ್ಯವಾಗಿರಲಿಲ್ಲ. ಪ್ರಸ್ತುತ ವಿಧಾನಸಭೆ ಉಪ ಚುನಾವಣೆ ಬಳಿಕ ಅಂದರೆ ಮೇ 21ರಂದು ಸಮಾನ ಮನಸ್ಕ ಶಾಸಕರು ಸಭೆ ನಡೆಸುವ ಉದ್ದೇಶವಿದೆ. ಈ ವೇಳೆ ನಮ್ಮ ನಿಗಮ-ಮಂಡಳಿ ಆಗುತ್ತಿರುವ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

ನಿಗಮ-ಮಂಡಳಿಗಳಲ್ಲಿ ಕೆಲಸ ಆಗುತ್ತಿಲ್ಲ

ನಿಗಮ-ಮಂಡಳಿಗಳಲ್ಲಿ ಕೆಲಸ ಆಗುತ್ತಿಲ್ಲ

ಇದೇ ವೇಳೆ ಸರ್ಕಾರದ ಬಗ್ಗೆ ಯಾವುದೇ ಅಸಮಾಧಾನವೂ ಇಲ್ಲ, ಆದರೆ ನಮ್ಮ ನಿಗಮ-ಮಂಡಳಿಗಳಲ್ಲಿ ಕೆಲಸಗಳು ಆಗುತ್ತಿಲ್ಲ, ಈ ಬಗ್ಗೆ ಸಮಸ್ಯೆ ಎದುರಿಸುತ್ತಿರುವ ನಿಗಮ-ಮಂಡಳಿ ಅಧ್ಯಕ್ಷರು ಒಟ್ಟಾಗಿ ಸಭೆ ಮಾಡಲಿದ್ದೇವೆ, ಲಿಖಿತವಾಗಿ ಸಿಎಂಗೆ ಮನವಿ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+