ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಬೆಂಗಳೂರಲ್ಲಿ ಮುಂದಿನ 2 ದಿನ ಮಳೆ: ಚಳಿ ಹೆಚ್ಚಾಗಲು ಕಾರಣವೇನು?

|
Google Oneindia Kannada News

ಬೆಂಗಳೂರು, ಸೆಪ್ಟಂಬರ್ 13: ನಗರದಲ್ಲಿ ಮಂಗಳವಾರ ಸಂಜೆ ನಂತರ ಹಗುರ ಮಳೆ ಸುರಿಯಿತು. ಇಡಿ ದಿವಸ ಚಳಿ ಹಾಗೂ ಮೋಡ ಕವಿದ ವಾತಾವರಣ ಕಂಡು ಬಂದಿದ್ದು, ಸಂಜೆ ವೇಳೆಗೆ ಹಲವು ಬಡಾವಣೆಗಳಲ್ಲಿ ಸಾಮಾನ್ಯವಾಗಿ ಮಳೆ ದಾಖಲಾಯಿತು.

ನಗರದಲ್ಲಿ ಕಳೆದೊಂದು ವಾರದಿಂದ ಮಳೆ ಸಂಪೂರ್ಣವಾಗಿ ಇಳಿಕೆ ಆಗಿತ್ತು. ಮಂಗಳವಾರ ಸಂಜೆ ದಿಢೀರನೆ ಆರಂಭವಾದ ಮಳೆ ಸಾರ್ವಜನಿಕರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ ಕಿರಿ ನೀಡಿತು. ಜಿಟಿ ಜಿಟಿ ಸುರಿದ ಮಳೆಯಿಂದ ರಸ್ತೆ ಮೇಲೆ ನೀರು ನಿಂತದ್ದು ಕಂಡು ಬಂತು.

ಹೆಬ್ಬಾಳ, ಜಯನಗರ, ಚಾಮರಾಜಪೇಟೆ, ವಿಜಯನಗರ, ಶೇಷಾದ್ರಿಪುರ, ಚೆನ್ನಸಂದ್ರ, ಹುಳಿಮಾವು, ರಾಮಹಲ್ ಗುಟ್ಟಹಳ್ಳಿ, ಯಲಹಂಕ ಸೇರಿದಂತೆ ಹಲವೆಡೆ ತುಂತುರು ರೂಪದಲ್ಲಿ ಮಳೆ ದಾಖಲಾಯಿತು. ಕೆಲವು ಪ್ರದೇಶಗಳಲ್ಲಿ ತಡರಾತ್ರಿವರೆಗೂ ತುಂತುತು ಮಳೆ ಮುಂದುವರಿಯಲಿದೆ.

Light rain in Bangalore for next 2 days, What is the reason for increase cold

ನಗರದಲ್ಲಿ ಚಳಿ ಹೆಚ್ಚಾಗಲು ಕಾರಣ ಏನು?

ಅರಬ್ಬಿ ಸಮುದ್ರ ಮಟ್ಟದಲ್ಲಿ ಮಂಗಳವಾರ ಒಂದು ಮೇಲ್ಮೈ ಸುಳಿಗಾಳಿ ಗುರ್ಬಲಗೊಂಡ ಬೆನ್ನಲ್ಲೆ ಮತ್ತೊಂದು ಸುಳಿಗಾಲಿ ಎದ್ದಿದೆ. ಜೊತೆಗೆ ಮಹಾರಾಷ್ಟ್ರದಿಂದ ಗೋವಾದ ಪಶ್ಚಿಮ ಕರಾವಳಿ ಭಾಗದಲ್ಲಿ ಗಾಳಿ ತೀವ್ರತೆ ಹೆಚ್ಚಾಗಿದೆ. ಇವೆಲ್ಲ ಕಾರಣದಿಂದ ಕರ್ನಾಟಕ ಕರಾವಳಿಗೆ ಭಾರಿ ಮಳೆ ಮುಂದುವರಿದಿದೆ.

Light rain in Bangalore for next 2 days, What is the reason for increase cold

"ಅಲ್ಲದೇ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಆಗಾಗ ಹಗುರದಿಂದ ಸಾಧಾರಣವಾಗಿ ಮಳೆ ಬರುವ ಸಾಧ್ಯತೆ ಹೆಚ್ಚಿದೆ. ಈ ಎಲ್ಲ ಕಾರಣದಿಂದ ನಗರದಲ್ಲಿ ಎರಡು ದಿನದಿಂದ ತಾಪಮಾನ ಕಡಿಮೆಯಾಗಿ ಚಳಿ ಹೆಚ್ಚಾಗಿದೆ. ಈ ವೇಳೆ ಗರಿಷ್ಠ ತಾಪಮಾನ 26ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 20ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ," ಎಂದು ಬೆಂಗಳೂರು ಹವಾಮಾನ ಕೇಂದ್ರದ ಅಧಿಕಾರಿ ಮತ್ತು ವಿಜ್ಞಾನಿ ಪ್ರಸಾದ್ ತಿಳಿಸಿದ್ದಾರೆ.

English summary
Light rain in Bangalore City for next two days. What is the reason for increase cold in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X