ಪತ್ನಿಕೊಂದ ಪತಿಗೆ ಜೀವಾವಧಿ ಶಿಕ್ಷೆ: ಸಾಕ್ಷಿ ಹೇಳಿದ್ದು ಯಾರು?
ಬೆಂಗಳೂರು, ಆಗಸ್ಟ್ 14: ಪತ್ನಿಯನ್ನು ಅನುಮಾನಿಸಿ ಕೊಲೆಗೈದಿದ್ದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಹಾಗಾದರೆ ಕೊಲೆಗೆ ಸಾಕ್ಷಿ ಹೇಳಿದ್ದು ಯಾರು ಎನ್ನುವುದು ನಿಮ್ಮಲ್ಲಿ ಮೂಡುವ ಸಾಮಾನ್ಯ ಪ್ರಶ್ನೆಯಾಗಿದೆ.
ಪರ ಪುರುಷನೊಂದಿಗೆ ಅನೈತಿಕ ಸಂಬಂಧವಿರುವ ಅನುಮಾನದ ಮೇಲೆ ಪತ್ನಿ ಕತ್ತು ಹಿಸುಕಿ ಹತ್ಯೆಗೈದು, ಮೃತದೇಹವನ್ನು ಮನೆಯಲ್ಲಿಯೇ ಹೂತಿದ್ದ ಮೈಸೂರಿನ ಎಚ್‌ಡಿ ಕೋಟೆಡಯ ಗೆಂಡೇಗೌಡನ ಕಾಲೊನಿಯ ದಾಸಪ್ಪಗೆ ಕೆಳ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಕಾಯಂಗೊಳಿಸಿದೆ.
ತಾಯಿಯನ್ನು ಕೊಲೆಗೈದ ತಂದೆಯ ವಿರುದ್ಧ ಮಕ್ಕಳೇ ಸಾಕ್ಷ್ಯ ನುಡಿಸು ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆ ಕೊಡಿಸಿದ ಅಪರೂಪದ ಘಟನೆ ಇದಾಗಿದೆ. ದಾಸಪ್ಪನ ಮಕ್ಕಳು ನುಡಿದ ಸಾಕ್ಷ್ಯ ಪರಿಗಣಿಸಿದ ಹೈಕೋರ್ಟ್, ಪತ್ನಿ ವಸಂತಮ್ಮಳನ್ನು ದಾಸಪ್ಪನೇ ಕೊಲೆ ಮಾಡಿರುವುದಾಗಿ ತೀರ್ಮಾನಿಸಿತು.

ಹಾಗೆಯೇ ಆತನಿಗೆ ಕೌಟುಂಬಿಕ ದೌರ್ಜನ್ಯ, ಕೊಲೆ ಮತ್ತು ಸಾಕ್ಷ್ಯಾಧಾರ ನಾಶ ಪ್ರಕರಣದಲ್ಲಿ ಮೈಸೂರಿನ 4ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿದೆ.
ಘಟನೆ ವಿವರ: ದಶಸಪ್ಪ ಹಾಗೂ ವಸಂತಮ್ಮ 28 ವರ್ಷಗಳ ಹಿಂದೆ ಮದುವೆಯಾಗಿದ್ದರು, ದಂಪತಿ 2003ರಿಂದ ಗೆಂಡೇಗೌಡನ ಕಾಲೊನಿಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ದಾಸಪ್ಪ ಟೀ ಅಂಗಡಿ ನಡೆಸುತ್ತಿದ್ದ, ದಂಪತಿಗೆ ನಾಲ್ವರು ಮಕ್ಕಳು, 2010ರ ಆ.4ರಂದು ಮಧ್ಯಾಹ್ನ 2 ಗಂಟೆಗೆ ದಾಸಪ್ಪದ ವಸಂತಮ್ಮನ ಕೊರಳಿಗೆ ಹಗ್ಗ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ, ಯಾರಿಗೂ ಅನುಮಾನ ಬರಬಾರದು ಎಂದು ಅಡುಗೆಮನೆಯ ಒಲೆಯ ಪಕ್ಕದಲ್ಲಿ ಗುಂಡಿ ತೋಡಿ ಹೂತಿಟ್ಟಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.












Click it and Unblock the Notifications