ಚಿರತೆ ಪ್ರತ್ಯಕ್ಷ: ಜಾಗರೂಕವಾಗಿರುವಂತೆ ಬೆಂಗಳೂರು ವಿವಿ ಸೂಚನೆ
ಬೆಂಗಳೂರು, ಜನವರಿ 12: ತನ್ನ ಕ್ಯಾಂಪಸ್‌ನಲ್ಲಿ ಚಿರತೆ ಕಾಣಿಸಿಕೊಂಡಿರುವ ಕುರಿತು ಮಾಧ್ಯಮ ವರದಿಗಳಿಂದ ಎಚ್ಚೆತ್ತ ಬೆಂಗಳೂರು ವಿಶ್ವವಿದ್ಯಾಲಯವು ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಇತರ ಸಿಬ್ಬಂದಿಗೆ ಜಾಗರೂಕರಾಗಿರುವಂತೆ ಸೂಚನೆ ನೀಡಿದೆ.
ಗುರುವಾರ ಹೊರಡಿಸಿದ ಸುತ್ತೋಲೆಯಲ್ಲಿ, ಜ್ಞಾನಭಾರತಿ ಕ್ಯಾಂಪಸ್‌ನ ಬೆಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಪತ್ರಿಕಾ ವರದಿಗಳನ್ನು ಉಲ್ಲೇಖಿಸಿ, ಚಿರತೆಯನ್ನು ಹಿಡಿದು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅರಣ್ಯ ಇಲಾಖೆಗೆ ಪತ್ರ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ ಎಂದು ಡಿಎಚ್ ವರದಿ ಮಾಡಿದೆ.
ಕ್ಯಾಂಪಸ್‌ನಲ್ಲಿ ಚಿರತೆ ಕಾಣಿಸಿಕೊಂಡಿರುವ ಕುರಿತು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳು, ವಿಶೇಷವಾಗಿ ವಿಶ್ವವಿದ್ಯಾಲಯದ ಹಾಸ್ಟೆಲ್‌ಗಳಲ್ಲಿ ಉಳಿದುಕೊಂಡಿರುವವರು, ಬೋಧಕ ಬೋಧಕ ಸಿಬ್ಬಂದಿ ಹಾಗೂ ಇತರೆ ಸಿಬ್ಬಂದಿ ಎಚ್ಚರಿಕೆ ವಹಿಸುವಂತೆ ಈ ಮೂಲಕ ಸೂಚಿಸಲಾಗಿದೆ. ರಾತ್ರಿಯಲ್ಲಿ ತಿರುಗಾಡುವುದನ್ನು ಕಡಿಮೆ ಮಾಡಿ ಒಂದು ವೇಳೆ ಚಿರತೆಯ ಚಲನವಲನವನ್ನು ಕಂಡು ಬಂದರೆ ತಕ್ಷಣ ತಮ್ಮ ಮೇಲಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಕಳೆದ ತಿಂಗಳು ಬೆಂಗಳೂರು ದಕ್ಷಿಣ ಭಾಗದ ಕೆಲವು ಭಾಗಗಳಲ್ಲಿ ಮತ್ತು ಕನಕಪುರ ರಸ್ತೆಯ ತುರಹಳ್ಳಿ ಅರಣ್ಯ ಮತ್ತು ಸುತ್ತಮುತ್ತ ಚಿರತೆಗಳ ಚಲನವಲನದ ಭೀತಿ ಇತ್ತು. ಎರಡು ಚಿರತೆಗಳು ನಗರದ ಸಮೀಪದಲ್ಲಿರುವ ಬನ್ನೇರುಘಟ್ಟ ಮೀಸಲು ಅರಣ್ಯದಿಂದ ತುರಹಳ್ಳಿ ಅರಣ್ಯ ಮತ್ತು ಸಮೀಪದ ಪ್ರದೇಶಗಳಿಗೆ ದಾರಿ ತಪ್ಪಿ ಎರಡು ಚಿರತೆಗಳು ಬಂದಿರಬಹುದು ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ.
ಡಿಸೆಂಬರ್‌ನಲ್ಲಿ ಬೆಂಗಳೂರಿನ ಸೋಮಾಪುರ ಸಮೀಪದ ತುರಹಳ್ಳಿ ರಾಜ್ಯ ಅರಣ್ಯದ ಸುತ್ತ ಎರಡು ವಾರಗಳ ಹಿಂದೆ ಕಾಣಿಸಿಕೊಂಡಿದ್ದ ಚಿರತೆ ಮತ್ತೆ ಕಾಣಿಸಿಕೊಂಡಿತ್ತು. ಈ ಬಗ್ಗೆ ಸ್ಥಳೀಯ ಜನರು ಆತಂಕಗೊಡಿದ್ದರು. ಚಿರತೆ ಓಡಾಡುವ ವಿಡಿಯೋ ಹೊರಬಂದ ಬೆನ್ನಲ್ಲೆ ತುರಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಮತ್ತೊಂದು ಚಿರತೆ ಕಾಣಿಸಿಕೊಂಡಿರುವ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡಲಾಗಿತ್ತು. ಈಗ ಬೆಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್ ಬಳಿಯು ಚಿರತೆ ಚಲನೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.












Click it and Unblock the Notifications