Lawyer Jagadish: ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಬಂಧನ, ತೀವ್ರ ವಿಚಾರಣೆ
ಬೆಂಗಳೂರು, ಆಗಸ್ಟ್ 22: ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ಅಭ್ಯರ್ಥಿಯಾಗಿದ್ದ ಲಾಯರ್ ಜಗದೀಶ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಆಗಾಗ ವಿಡಿಯೋ ಹಾಕುತ್ತಿದ್ದರು. ವಿವಾದಗಳಿಗೂ ಇವರಿಗೂ ಇನ್ನಿಲ್ಲದ ನಂಟು. ಇದೇ ಅವರನ್ನು ಜೈಲಿಗೆ ಕಳುಹಿಸಿದೆ. ಲಾಯರ್ ಜಗದೀಶ್ ಅವರನ್ನು ಶುಕ್ರವಾರ ಕೊಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇದಕ್ಕೆ ಕಾರಣವೇನು ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರಿನ ಮಂಜುನಾಥ್ ಎಂಬುವವರು ನೀಡಿದ ದೂರಿನ ಮೇಲೆಗೆ ಲಾಯರ್ ಜಗದೀಶ್ ಅವರ ಮೇಲೆ ಎಫ್‌ಐಆರ್ ದಾಖಲಿಸಿದ್ದ ಪೊಲೀಸರು ಇಂದು ನಗರದಲ್ಲಿ ಬಂಧಿಸಿದ್ದಾರೆ. ಇತ್ತೀಚೆಗೆ ನಟ ಪ್ರಥಮ್ ವಿಚಾರ, ಸೆಲೆಬ್ರೆಟಿಗಳು ಹಾಗೂ ರಾಜಕಾರಣಗಳ ಕುರಿತು ವಿಡಿಯೋ ಮಾಡುವ ಲಾಯರ್ ಆಗಾಗ ಸುದ್ದಿಯಾಗುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಲಾಯರ್ ಜಗದೀಶ್ ಜಾತಿ ನಿಂದನೆ ಮಾಡಿದ್ದಾರೆ ಎಂದು ಮಂಜುನಾಥ್ ಅವರು ಆರೋಪಿಸಿದ್ದಾರೆ. ನೆನ್ನೆ ಗುರುವಾರ ಆಗಸ್ಟ್ 21ರಂದು ನೋಟಿಸ್ ನೀಡಲು ತೆರಳಿದ್ದ ಪೊಲೀಸರಿಗೆ ಸರಿಯಾಗಿ ಪ್ರತಿಕ್ರಿಯಿಸಿಲ್ಲ. ಮನೆಗೆ ಬಾಗಿಲ್ಲ ತೆಗೆದಿಲ್ಲ ಎಂದು ಟಿವಿ ನೈನ್ ವರದಿ ಮಾಡಿದೆ. ಸದ್ಯ ಲಾಯರ್ ಜಗದೀಶ್ ಅವರನ್ನು ಬಂಧಿಸಿ ಕರೆತಂದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬಿಗ್ ಬಾಸ್‌ನಲ್ಲಿದ್ದಾಗಲೂ ಸಹ ಅವರು ವಿವಾದಕ್ಕೆ, ಸಹಸ್ಪರ್ಧಿಗಳಿಂದ ಟೀಕೆಗೆ ಗುರಿಯಾಗಿದ್ದಾರೆ. ಇದೀಗ ಜಾತಿ ನಿಂದನೆ ಆರೋಪದಲ್ಲಿ ಬಂಧನವಾಗಿದ್ದಾರೆ.
ಬಂಧನದ ಸುಳಿವು ಸಿಗುತ್ತಿದ್ದಂತೆ ಫೇಸ್‌ಬುಕ್‌ನಲ್ಲಿ ಲಾಯರ್ ಜಗದೀಶ್ ಪೋಸ್ಟ್ ಮಾಡಿದ್ದಾರೆ. ಯಾರೂ ಅಶಾಂತಿ ಮಾಡಬೇಡಿ. ಇದೊಂದು ಸಾಮಾನ್ಯ ಪ್ರಕ್ರಿಯೆ ಎಂದಿದ್ದಾರೆ. ಜೊತೆಗೆ 'ಇಂದು ಕೊಡಿಗೆಹಳ್ಳಿ ಪೊಲೀಸರು ನನ್ನನ್ನು ವಶಕ್ಕೆ ಪಡೆದಿದ್ದಾರೆ. ನಾನು ಧರ್ಮಸ್ಥಳ ಹತ್ಯಾಕಾಂಡದ ಬಗ್ಗೆ ಸತ್ಯ ಮಾತನಾಡಿದ್ದೇನೆ. ಇದು ತಪ್ಪೇ ಸಮಾಜದಲ್ಲಿ ತಪ್ಪು ನಡೆದಾಗ ಧ್ವನಿ ಎತ್ತುವುದು ಸಂವಿಧಾನಿಕ ಹಕ್ಕು. ನ್ಯಾಯಕ್ಕಾಗಿ ಹೋರಾಡುವುದು ಅಪರಾಧ ಅಲ್ಲ ಎಂದ ಅವರು ವಿಡಿಯೋ ಪೋಸ್ಟ್ ಜೊತೆಗೆ ಬರೆದುಕೊಂಡಿದ್ದಾರೆ.
ಇದು ನನ್ನ ಮೇಲಿನ ಸುಳ್ಳು ಪ್ರಕರಣ. ನಾನು ಸಾಕಿದ ನಾಯಿಗಳಿಗೆ ವಿಷ ಹಾಕಿ ಕೊಂದಿದ್ದಾರೆ. ಇದು ಕೇವಲ ಪ್ರಾಣಿಗಳ ಮೇಲೆ ನಡೆದ ದೌರ್ಜನ್ಯವಲ್ಲ. ನನ್ನ ಕುಟುಂಬದ ಮೇಲಿನ ಕ್ರೂರ ದಾಳಿ. ಮನೆಯ ಇನ್ನೊಂದು ಸಾಖು ನಾಯಿಯ ಕಾಲಿಗೆ ಬಲವಾಗಿ ಹೊಡೆದು ಗಾಯಗೊಳಿಸಿದ್ದಾರೆ. ನಿರಪರಾಧ ಪ್ರಾಣಿಗೆ ಇಂತಹ ಕ್ರೂರ ಕೃತ್ಯ ಮಾಡಿದವರ ವಿರುದ್ಧ ನ್ಯಾಯ ಸಿಗಬೇಕೆಂದು, ಪ್ರಾಣಿಗಳನ್ನು ಪ್ರೀತಿಯಿಂದ ಕಾಣುವಂತಲೂ ಅವರು ಪೋಸ್ಟ್ ಮಾಡಿದ್ದಾರೆ.












Click it and Unblock the Notifications