ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿವೇಶನ ಖರೀದಿ, ಮನೆ ನಿರ್ಮಾಣದ ಕಾನೂನು ಸರಳೀಕರಿಸುತ್ತೇವೆ, 10 ಲಕ್ಷ ಮನೆ ಕುಟ್ಟುವ ಗುರಿ- ಬೊಮ್ಮಾಯಿ

ಡ ವರ್ಗದ ಜನರಿಗೂ ನಿವೇಶನ ಖರೀದಿಸಲು ಹಾಗೂ ಮನೆ ಕಟ್ಟಿಕೊಳ್ಳಲು ನೆರವಾಗುವಂತೆ ಇರುವ ಕಾನೂನನ್ನು ಸರಳೀಕರಣ ಮಾಡುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ.

|
Google Oneindia Kannada News

ಬೆಂಗಳೂರು, ಜನವರಿ 31: ಬಡ ವರ್ಗದ ಜನರಿಗೂ ನಿವೇಶನ ಖರೀದಿಸಲು ಹಾಗೂ ಮನೆ ಕಟ್ಟಿಕೊಳ್ಳಲು ನೆರವಾಗುವಂತೆ ಇರುವ ಕಾನೂನನ್ನು ಸರಳೀಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಯಲಹಂಕ ವಲಯ ವ್ಯಾಪ್ತಿಯ ಅಗ್ರಹಾರಪಾಳ್ಯದಲ್ಲಿ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯ ಲೋಕಾರ್ಪಣೆ ಮತ್ತು ವಸತಿಗಳ ಹಸ್ತಾಂತರ ಮಾಡಿ ಮಾತನಾಡಿದರು. ಭವಿಷ್ಯದಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ರಾಜ್ಯದಲ್ಲಿ ಮನೆ ಕಟ್ಟುವುದು ಕಷ್ಟವಾಗಲಿದೆ. ಕಂದಾಯ ಕಾಯ್ದೆಯಲ್ಲಿ ಮನೆ ಕಟ್ಟಲು ನಿರ್ದಿಷ್ಟ ರಿಯಾಯಿತಿಗಳಿಲ್ಲ. ಭೂಮಿ ಬೆಲೆ ಹೆಚ್ಚಾಗಲು ಬೇಡಿಕೆ ಹೆಚ್ಚಾಗಿದೆ ಮತ್ತು ನಾವು ಮಾಡಿರುವ ಕಾನೂನುಗಳಿಂದ ಸಾಮಾನ್ಯ ಜನರು ನಿವೇಶನ ಖರೀದಿ ಮಾಡುವ ಪರಿಸ್ಥಿತಿಯಲ್ಲಿ ಇಲ್ಲ ಎಂಬ ವಿಚಾರವನ್ನು ಮುಖ್ಯಮಂತ್ರಿಗಳು ವಿವರಿಸಿದರು.

ಧಾರವಾಡದಲ್ಲಿ ಕೃಷಿ ಇಲಾಖೆಯ ನೂತನ ಯೋಜನೆಗಳಿಗೆ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿಧಾರವಾಡದಲ್ಲಿ ಕೃಷಿ ಇಲಾಖೆಯ ನೂತನ ಯೋಜನೆಗಳಿಗೆ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ

ಈ ಮಲಿನ ಎಲ್ಲ ಕಾರಣಗಳಿಂದಾಗಿ ಬಡವರ್ಗದವರಿಗೂ ನಿವೇಶನ ಖರೀದಿಗೆ, ಮನೆ ನಿರ್ಮಾಣಕ್ಕೆ ಅವಕಾಶ ಸಿಗುವಂತೆ ಕಾನೂನಿಗೆ ತಿದ್ದುಪಡಿ ತರಲಿದ್ದೇವೆ. ಇರುವ ನಿರ್ಬಂಧಗಳನ್ನು ದೂರಮಾಡಿ ನೇರವಾಗಿ ಕೈಗೆಟುಕುವ ಬೆಲೆಯಲ್ಲಿ ಜಮೀನು ದೊರೆಯುವ ವ್ಯವಸ್ಥೆ ಜಾರಿಗೆ ತರಲಾಗುವುದು. ವಸತಿಗಾಗಿಯೇ ಜಮೀನು ಪಡೆಯಲು, ಮನೆ ಕಟ್ಟಲು ಎಲ್ಲಾ ಕಾನೂನನ್ನು ಸರಳೀಕರಿಸಲಾಗುವುದು.

ವಸತಿ ಸಚಿವ ಸೋಮಣ್ಣನವರು ಮೂರು ಲಕ್ಷಕ್ಕೂ ಅಧೀಕ ನಿವೇಶನಗಳನ್ನು ಫಲಾನುಭವಿಗಳಿಗೆ ನೀಡಲಾಗಿದೆ.

ಪ್ರಗತಿಪರ ಚಿಂತನೆ ಮಾಡಿದಾಗ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ನಮ್ಮ ಸರ್ಕಾರ ಸಮಸ್ಯೆಯನ್ನು ಬಿಟ್ಟು ಹೋಗುವುದಿಲ್ಲ‌. ಬದಲಾಗಿ ಆ ಸಮಸ್ಯೆಗಳಿಗೆ ಪರಿಹಾರವನ್ನು ಜನರಿಗೆ ಒದಗಿಸುತ್ತದೆ ಎಂದರು.

ಅಂತಿಮ ಹಂತದಲ್ಲಿ ಐದು ಲಕ್ಷ ಮನೆಗಳು

ಅಂತಿಮ ಹಂತದಲ್ಲಿ ಐದು ಲಕ್ಷ ಮನೆಗಳು

ಹಿಂದಿನ ಸರ್ಕಾರ ಚುನಾವಣೆ ಸಂದರ್ಭದಲ್ಲಿ 15 ಲಕ್ಷ ಮನೆ ಘೋಷಣೆ ಮಾಡಿದರು. ಅದಕ್ಕೆ ಹಣ ಮೀಸಲಿಡದೇ ಹೋದರು‌. 15 ಸಾವಿರ ಕೋಟಿ ರೂ. ಅಗತ್ಯವಿದ್ದರೆ, 3 ಸಾವಿರ ಕೋಟಿ ಮೀಸಲಿಟ್ಟರು. ಅಗತ್ಯವಿರುವಷ್ಟು ಮನೆಗಳನ್ನು ಕಟ್ಟಲು ಸಾಧ್ಯವಾಗಲಿಲ್ಲ. ಘೋಷಣೆಗಳು ಬಹಳಷ್ಟು ಆಗುತ್ತವೆ‌. ಅದಕ್ಕೆ ಹಣ ಮೀಸಲಿಡಬೇಕು. ಆದರೆ ಅದು ಆಗಲಿಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಗತ್ಯ ಅನುದಾನ ಒದಗಿಸಿ ಸುಮಾರು 10 ಲಕ್ಷ ಮನೆಗಳನ್ನು ಕಟ್ಟುವ ಗುರಿ ಹೊಂದಿದೆ. ಇದರಲ್ಲಿ 5 ಲಕ್ಷ ಮನೆಗಳ ನಿರ್ಮಾಣ ಅಂತಿಮ ಹಂತ ತಲುಪಿವೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಜನರನ್ನು ಭ್ರಮಾ ಲೋಕದಲ್ಲಿಡುವ ಪ್ರಯತ್ನ

ಜನರನ್ನು ಭ್ರಮಾ ಲೋಕದಲ್ಲಿಡುವ ಪ್ರಯತ್ನ

ಸರ್ಕಾರ ಏನು ಮಾಡಲು ಸಾಧ್ಯವಿದೆ ಎಂಬ ಸತ್ಯ ಜನರಿಗೆ ತಿಳಿಸಬೇಕು. ಜನರನ್ನು ಭ್ರಮಾಲೋಕದಲ್ಲಿಡುವ ಪ್ರಯತ್ನ ಮಾಡಬಾರದು. ಜನರು ಇಂದು ಬುದ್ದಿವಂತರಿದ್ದಾರೆ, ಜಾಗೃತರಾಗಿದ್ದಾರೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಸುಳ್ಳು ಭರವಸೆ ಕೊಟ್ಟು ಜನರನ್ನು ದಾರಿ‌ತಪ್ಪಿಸುವ ಕೆಲಸವಾಗಬಾರದು. ಎಲ್ಲಾ ಉಚಿತವಾಗಿ ನೀಡುತ್ತೇವೆ ಎಂದರೆ ಯಾರೂ ನಂಬುವುದಿಲ್ಲ. ಜನರ ತೆರಿಗೆಯ ಮೂಲಕ ಬರುವ ಹಣವನ್ನು ಎಲ್ಲಿ ಉಪಯೋಗಿಸಬೇಕು, ದೀನ ದಲಿತರಿಗೆ ವಿಶೇಷವಾಗಿರುವ ಕಾರ್ಯಕ್ರಮ ರೂಪಿಸಬೇಕು. ಜನಪ್ರಿಯತೆಗಾಗಿ, ಅಧಿಕಾರಕ್ಕೆ ಬರಬೇಕೆಂದು ಹತಾಶರಾಗಿ ಇಡೀ ವ್ಯವಸ್ಥೆಯನ್ನು ಹದಗೆಡಿಸುವ ರೀತಿಯಲ್ಲಿ ಮಾತನಾಡಬಾರದು. ಈಗ ಜನರು ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಕಾಂಗ್ರೆಸ್‌ ಟಾಂಡ್ ನೀಡಿದರು.

ಐದು ಲಕ್ಷ ಮನೆ ಮಂಜೂರಾತಿ

ಐದು ಲಕ್ಷ ಮನೆ ಮಂಜೂರಾತಿ

ನಾನು ಮುಖ್ಯಮಂತ್ರಿಯಾದ ನಂತರ ರಾಜ್ಯದಲ್ಲಿ ಸುಮಾರು 5 ಲಕ್ಷ ಮನೆಗಳ ಮಂಜೂರಾತಿ ಮಾಡಿದ್ದೆನೆ. 4 ಲಕ್ಷ ಗ್ರಾಮೀಣ ಪ್ರದೇಶದಲ್ಲಿ ಹಾಗೂ 1 ಲಕ್ಷ ನಗರದಲ್ಲಿ ಮಂಜೂರಾತಿ ನೀಡಲಾಗಿದೆ. ಫಲಾನುಭಾವಿಗಳ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ನಾವು ಹೇಳಿದಂತೆ ನಡೆಯುತ್ತಿದ್ದೇವೆ. ಬೆಂಗಳೂರಿನಲ್ಲಿ ಒಂದು ಲಕ್ಷ ಮನೆಗಳನ್ನು ನಿರ್ಮಾಣ ಮಾಡಬೇಕೆಂದು ಏಳು ವರ್ಷಗಳಿಂದ ಪ್ರಯತ್ನ ಮಾಡಿದರೂ ಸಾಧ್ಯವಾಗಿರಲಿಲ್ಲ. ಜಮೀನು ಇದೆಯೋ ಇಲ್ಲವೋ ಎಂದು ಯೋಚಿಸದೇ ಹಿಂದಿನ ಸರ್ಕಾರ ಲಕ್ಷ ಲಕ್ಷ ಮನೆ ಘೋಷಣೆ ಮಾಡಿತ್ತು ಎಂದು ಕಾಂಗ್ರೆಸ್‌ ವಿರುದ್ಧ ಬೊಮ್ಮಾಯಿ ವ್ಯಂಗ್ಯವಾಡಿದರು.

ಯಲಹಂಕ ವ್ಯಾಪ್ತಿಯಲ್ಲಿ 900 ಮನೆ

ಯಲಹಂಕ ವ್ಯಾಪ್ತಿಯಲ್ಲಿ 900 ಮನೆ

ಸದ್ಯ 50ಸಾವಿರ ಮನೆಗಳ ನಿರ್ಮಾಣಕ್ಕೆ 492 ಎಕರೆ ಭೂಮಿಯನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಪಡೆದು ನಿರ್ಮಿಸುತ್ತಿದ್ದೇವೆ.

ಮೊದಲ ಹಂತದ 20 ಸಾವಿರ ಮನೆಗಳನ್ನು ಈಗ ಹಂಚಿಕೆ ಮಾಡಲಾಗುತ್ತಿದೆ. ಅದರಲ್ಲಿ 5 ಸಾವಿರ ಮನೆಗಳನ್ನು ಇಂದು ಹಂಚಿಕೆ ಮಾಡುತ್ತಿದ್ದೇವೆ. ಈ ಪೈಕಿ ಯಲಹಂಕದಲ್ಲಿ ಒಟ್ಟು 900 ಮನೆ ವಿತರಣೆ ನಡೆಯುತ್ತಿದೆ. ಸುಮಾರು 5-6 ಕ್ಷೇತ್ರಗಳಲ್ಲಿ ಇಂದು ಮನೆಗಳ ಹಂಚಿಕೆಯಾಗುತ್ತಿದೆ. ಹಂತ ಹಂತವಾಗಿ 50 ಸಾವಿರ ಮನೆಗಳನ್ನು ಹಸ್ತಾಂತರ ಮಾಡುವ ಗುರಿ ಇದೆ ಎಂದು ಅವರು ವಿವರಿಸಿದರು.

ಯಲಹಂಕದ ಚಿತ್ರಣವೇ ಬದಲಾಗಿದೆ

ಯಲಹಂಕದ ಚಿತ್ರಣವೇ ಬದಲಾಗಿದೆ

ಯಲಹಂಕದಲ್ಲಿ ಜನರ ಪರ ಕೆಲಸ ಮಾಡುತ್ತಿರುವ ಶಾಸಕ ಎಚ್.ವಿಶ್ವನಾಥ ಅವರು ಜನೊಪಯೋಗಿ ಶಾಸಕರು. ಬಿಡಿಎ ಅಧ್ಯಕ್ಷ ಸ್ಥಾನದ ಪ್ರಭಾವವನ್ನು ಯಲಹಂಕದ ಅಭಿವೃದ್ಧಿಗೆ ಬಳಸುತ್ತಿದ್ದಾರೆ. ವಿಶ್ವನಾಥ ಶಾಸಕರಾದ ಮೇಲೆ ಯಲಹಂಕ ಚಿತ್ರಣವೇ ಬದಲಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶ ಎರಡನ್ನೂ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಮುಂದಿನ 20 ವರ್ಷಗಳಲ್ಲಿ ಆಗುವ ಕೆಲಸವನ್ನು ಈಗಲೇ ಮಾಡಿದ್ದಾರೆ ಎಂದು ಶಾಸಕ ಕಾರ್ಯ ಶ್ಲಾಘಿಸಿದರು.

ವಸತಿ ಸಚಿವ ವಿ.ಸೋಮಣ್ಣ, ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾನಾಥ್, ಶಾಸಕ ಸಿದ್ದು ಸವದಿ, ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ, ಮಾಜಿ ಶಾಸಕ ನಾಗರಾಜ್, ವಸತಿ ಇಲಾಖೆ ಕಾರ್ಯದರ್ಶಿ ಡಾ, ಜೆ.ರವಿಶಂಕರ್, ಬೆಂಗಳೂರು ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.

English summary
Future days land purchase and house construction laws will do simplify in Karnataka, says CM Basavaraj Bommai,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X