ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪುನೀತ್ ವಿಶೇಷದ ಫಲಪುಷ್ಪೋತ್ಸವಕ್ಕೆ 15 ಲಕ್ಷ ಜನರ ನಿರೀಕ್ಷೆ: ಸಚಿವ ಮುನಿರತ್ನ

|
Google Oneindia Kannada News

ಬೆಂಗಳೂರು, ಆಗಸ್ಟ್ 03: ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ 75ನೇ ಅಮೃತ ಮಹೋತ್ಸವ ಸ್ವಾತಂತ್ರ್ಯೋತ್ಸವದ ಫಲವಾಗಿ ಫಲಪುಷ್ಪ ನಡೆಯಲಿದೆ. ಫಲಪುಷ್ಪ ಪ್ರದರ್ಶನಕ್ಕೆ ದಿನಗಣನೆ ಪ್ರಾರಂಭವಾಗಿದ್ದು ಇನ್ನೆರಡು ದಿನಗಳಲ್ಲಿ ಪ್ರಾರಂಭವಾಗದಲಿದೆ. ಈ ಸಲ ಪುನೀತ್ ರಾಜ್‌ಕುಮಾರ್ ಮತ್ತು ರಾಜ್‌ಕುಮಾರ್‍‌ವರಿಗೆ ಫಲಪುಷ್ಪ ಪ್ರದರ್ಶನ ಸಮರ್ಪಣೆ ಮಾಡಲಾಗುತ್ತಿದೆ.

ಲಾಲ್ ಬಾಗ್ ನಲ್ಲಿ ಈವರೆಗೂ 211 ಫ್ಲವರ್ ಶೋ ನಡೆದಿದೆ. ಒಂದೂವರೆ ವರ್ಷದ ಬಳಿಕ ಈ ಬಾರಿ ಫ್ಲವರ್ ಶೋ ನಡೆಯುತ್ತಿದ್ದೂ ಸುಮಾರು 15 ಲಕ್ಷಕ್ಕೂ ಹೆಚ್ಚು ಜನ ಫ್ಲವರ್ ಶೋಗೆ ಆಗಮಿಸುವ ಸಾಧ್ಯತೆಗಳಿವೆ. ಆಗಸ್ಟ್ 5 ರಿಂದ 15 ರವರೆಗೆ ಫ್ಲವರ್ ಶೋ 15 ದಿನಗಳ ಕಾಲ ನಡೆಯಲಿದೆ.

"ಸಿಎಂ ಬೊಮ್ಮಾಯಿ ಫ್ಲವರ್ ಶೋ ಉದ್ಘಾಟನೆ ಮಾಡಲಿದ್ದಾರೆ. ಈವರೆಗೆ 211 ಫ್ಲವರ್ ಷೋ ನಡೆಸಿದೆ , ಈ ಬಾರಿ 212 ಫ್ಲವರ್ ಷೋ ನಡೆಯಲಿದೆ. ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ , ರಾಘವೇಂದ್ರ ರಾಜಕುಮಾರ್ ಸೇರಿದಂತೆ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ" ಎಂದು ತೋಟಗಾರಿಕ ಸಚಿವ ಮುನಿರತ್ನ ತಿಳಿಸಿದ್ದಾರೆ.

 ಟಿಕೆಟ್ ದರವನ್ನು ಇಳಿಕೆ

ಟಿಕೆಟ್ ದರವನ್ನು ಇಳಿಕೆ

ಆಗಸ್ಟ್ 5 ರಿಂದ 15 ರವರೆಗೆ ಫ್ಲವರ್ ಶೋ 15 ದಿನಗಳ ಕಾಲ ನಡೆಯಲಿದೆ. ಬೆಳಗ್ಗೆ 7 ರಿಂದ ಸಂಜೆ 7ರವರೆಗೆ ಫ್ಲವರ್ ಶೋ ವೀಕ್ಷಣೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಈ ಬಾರಿ ಟಿಕೆಟ್ ದರವನ್ನು ಇಳಿಕೆ ಮಾಡಲಾಗಿದ್ದೂ 75 ರೂಪಾಯಿ ದರ ನಿಗದಿ ಮಾಡಲಾಗಿದೆ. 10 ನೇ ತರಗತಿ ವರೆಗಿನ ಮಕ್ಕಳಿಗೆ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದ್ದೂ ಈ ಬಾರಿ ಹೊರ ರಾಜ್ಯ ಹಾಗೂ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

 ಶಕ್ತಿಧಾಮದ ಮಕ್ಕಳು ಸಹ ಆಗಮನ

ಶಕ್ತಿಧಾಮದ ಮಕ್ಕಳು ಸಹ ಆಗಮನ

ಲಾಲ್‌ಬಾಗ್‌ನಲ್ಲಿನ ಫಲಪುಷ್ಪ ಪ್ರದರ್ಶನವನ್ನು ವಿಶೇಷವಾಗಿ ಪುನೀತ್ ರಾಜಕುಮಾರ್ ಹಾಗೂ ರಾಜಕುಮಾರ್ ಸ್ಮರಣಾರ್ಥ ಸಮರ್ಪಣೆ ಮಾಡಲಾಗುತ್ತಿದೆ. ಇದರಲ್ಲಿ 35ಅಡಿ ಪುನೀತ್ ಚಿನ್ನದ ಪ್ರತಿಮೆ ಇರುವ ಲೇಪನವನ್ನು ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗುತ್ತದೆ. ಅದೇ ರೀತಿ ಡಾ. ರಾಜಕುಮಾರ್ ವಾಸ ಮಾಡಿದ ಮನೆಯನ್ನು ಹೂವಿನ ಅಲಂಕಾರದಲ್ಲಿ ನಿರ್ಮಾಣ ಮಾಡಲಾಗುದು.

ಪುನೀತ್ ರಾಜಕುಮಾರ್ ಮಕ್ಕಳ ವಿದ್ಯಾಭ್ಯಾಸಕ್ಕೆ ಸದಾ ಸ್ಪಂದಿಸಿ ಶಕ್ತಿದಾಮ ಮಕ್ಕಳಿಗೇ ವಿದ್ಯಾಭ್ಯಾಸ ಕೊಡೋ ಕೆಲಸ ಮಾಡಿದ್ದಾರೆ. ಈ ಹಿನ್ನಲೆ ಅವತ್ತಿನ ದಿನ ಶಕ್ತಿ ಧಾಮ ಮಕ್ಕಳು ಸಹ ಬರ್ತಾರೆ.

 ಪುನೀತ್ ಮತ್ತು ರಾಜ್ ಕುಮಾರ್‍‌ಗೆ ಗೌರವ

ಪುನೀತ್ ಮತ್ತು ರಾಜ್ ಕುಮಾರ್‍‌ಗೆ ಗೌರವ

"ನಾನೊಬ್ಬ ಚಲನಚಿತ್ರ ನಿರ್ಮಾಪಕ ಆಗಿದ್ದು, ತೋಟಗಾರಿಕ ಇಲಾಖೆಗೆ ನಾನೇ ಸಚಿವನೂ ಆಗಿದ್ದೇನೆ. ರಾಜಕುಮಾರ್ ಹೆಸರಲ್ಲಿ ಪುನೀತ್ ಹೆಸರಲ್ಲಿ ಕಾರ್ಯಕ್ರಮ ಮಾಡ್ತಿರೋದು ಖುಷಿಯನ್ನು ತಂದಿದೆ. ಒಂದೂವರೆ ವರುಷದ ಬಳಿಕ ಲಾಲ್‌ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನವನ್ನು ನಡೆಸುತ್ತಿದ್ದು ಅದ್ದೂರಿಯಾಗಿ ಫಲಪುಷ್ಪ ಪ್ರದರ್ಶನವನ್ನು ನಡೆಸಲಾಗುತ್ತದೆ. ಪುನೀತ್ ಮನೆಯಿಂದ ಜ್ಯೋತಿ ತಂದು ಲಾಲ್‌ಬಾಗ್ ನಲ್ಲಿ ಹಚ್ಚಲಾಗುತ್ತದೆ" ಎಂದು ತೋಟಗಾರಿಕಾ ಸಚಿವ ಮುನಿರತ್ನ ತಿಳಿಸಿದ್ದಾರೆ.

 ಲಾಲ್‌ಬಾಗ್ ಮತ್ತಷ್ಟು ಅಭಿವೃದ್ದಿಗೆ ಪಣ

ಲಾಲ್‌ಬಾಗ್ ಮತ್ತಷ್ಟು ಅಭಿವೃದ್ದಿಗೆ ಪಣ

ಗಾಜಿನ ಮನೆಯಲ್ಲಿ 65ಕ್ಕಿಂತ ಹೆಚ್ಚು ವರ್ಷಪೂರ್ತಿ ಬರೋ ಹೂವು ಜೋಡಣೆಯನ್ನು ಮಾಡಲಾಗುತ್ತಿದೆ. ಊಟಿಯಿಂದ ಈಗಾಗಲೇ ಹೂವಿನ ಗಿಡಗಳು ಬಂದಿದೆ. ಜೊತೆಗೆ ಬೇರೆ ಬೇರೆ ದೇಶಗಳಿಂದ ಕೂಡ ಹೂವಿನ ಗಿಡ ಬಂದಿದೆ. ಹಂತ ಹಂತವಾಗಿ ಲಾಲ್‌ಬಾಗ್ ಅಭಿವೃದ್ಧಿ ಆಗ್ತಿದೆ .ಇನ್ನು ಹೆಚ್ಚಿನ ಗಮನ ಹರಿಸಿ ಅಭಿವೃದ್ಧಿ ಮಾಡ್ತೀವಿ ಎಂದು ಸಚಿವ ಮುನಿರತ್ನ ಹೇಳಿದ್ದಾರೆ.

English summary
Flower show will be held of the 75th Amrita Mahotsava Independence Day at Lalbagh in Bengaluru. The countdown to the Flower show will begin but it won't start for another two days. This time Flower show display is being dedicated to Puneeth Raj Kumar and Dr. Raj Kumar, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X