Lalbagh Entry Fee: ಲಾಲ್‌ಬಾಗ್‌ ಪ್ರವೇಶ ಶುಲ್ಕ ಏರಿಕೆ.! ಯಾರಿಗೆ ಎಷ್ಟು?-ಮಾಹಿತಿ ಇಲ್ಲಿದೆ

ಬೆಂಗಳೂರು, ನವೆಂಬರ್‌, 09: ಲಾಲ್‌ಬಾಗ್‌ ಬೆಂಗಳೂರಿನ ಸಸ್ಯಕಾಶಿ ಅಂತಲೇ ಪ್ರಸಿದ್ಧಿಯಾಗಿದೆ. ಅಲ್ಲದೆ, ಇದನ್ನು ಕೆಂಪು ತೋಟ ಅಂತಲೂ ಕರೆಯುತ್ತಾರೆ. ಇಲ್ಲಿದೆ ಪ್ರತಿದಿನವೂ ಸಾವಿರಾರು ಜನ ಅಂತೂ ಇಲ್ಲಿಗೆ ಭೇಟಿ ನೀಡುತ್ತಾರೆ.
ಇನ್ನು ತೋಟಗಾರಿಕೆ ಇಲಾಖೆಯು ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಸಾರ್ವಜನಿಕರ ಪ್ರವೇಶ ಶುಲ್ಕ ಹಾಗೂ ವಾಹನಗಳ ನಿಲುಗಡೆ ಶುಲ್ಕವನ್ನು ಹೆಚ್ಚಿಸಿದೆ. ಮಾಹಿತಿ ಇಲ್ಲಿದೆ ತಿಳಿಯಿರಿ

ಎಷ್ಟು ದರ ಏರಿಕೆ?: ತೋಟಗಾರಿಕೆ ಇಲಾಖೆಯಿಂದ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಸಾರ್ವಜನಿಕರ ಪ್ರವೇಶ ಶುಲ್ಕವನ್ನು ಏರಿಕೆ ಮಾಡಲಾಗಿದೆ. ವಯಸ್ಕರಿಗೆ 50 ರೂಪಾಯಿ & ಮಕ್ಕಳಿಗೆ 20 ರೂಪಾಯಿ ಪ್ರವೇಶ ದರವನ್ನು ನಿಗದಿಪಡಿ ಮಾಡಲಾಗಿದೆ.

Lalbagh Entry Fee Hike Know statistics details

ಈ ಹಿಂದೆ ದರ ಎಷ್ಟಿತ್ತು?: 2018ರಲ್ಲಿ ನಿಗದಿಪಡಿಸಿದ್ದ ದರವನ್ನು 6 ವರ್ಷಗಳ ಬಳಿಕ ಏರಿಕೆ ಮಾಡಲಾಗಿದೆ. ಈ ಹಿಂದೆ ವಯಸ್ಕರರಿಗೆ ತಲಾ 30 ರೂಪಾಯಿ ಹಾಗೂ ಮಕ್ಕಳಿಗೆ 10 ರೂಪಾಯಿ ಪ್ರವೇಶ ದರ ಇತ್ತು. ಇದನ್ನು ಇದೀಗ ವಯಸ್ಕರಿಗೆ 50 ರೂಪಾಯಿ ಮತ್ತು ಮಕ್ಕಳಿಗೆ 20 ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ.

ವಾಹನಗಳಿಗೆ ದರ ಎಷ್ಟು?: ಅದೇ ರೀತಿಯಾಗಿ ವಾಹನ ನಿಲುಗಡೆ ದರದಲ್ಲಿಯೂ ಏರಿಕೆ ಮಾಡಲಾಗಿದೆ. ಕಾರು ನಿಲುಗಡೆಗೆ 40 ರೂಪಾಯಿ ಇದ್ದದ್ದನ್ನು 60 ರೂಪಾಯಿಗೆ, ಟೆಂಪೋ ಟ್ರಾವೆಲ್‌ 80-100 ರೂಪಾಯಿಗೆ ಮತ್ತು ಬಸ್‌ಗಳಿಗೆ 120-200 ರೂಪಾಯಿಗೆ ಏರಿಕೆ ಮಾಡಲಾಗಿದೆ. ಆದರೆ, ದ್ವಿಚಕ್ರ ವಾಹನ ನಿಲುಗಡೆ ದರ ಬದಲಾಯಿಸಿಲ್ಲ.

ನಿರ್ವಹಣಾ ಕಾರ್ಯ, ನೀರಿನ ನಿರ್ವಹಣೆ, ವಿದ್ಯುತ್‌ ಬಳಕೆ, ಭದ್ರತಾ ವ್ಯವಸ್ಥೆಯ ವೆಚ್ಚ ವರ್ಷದಿಂದ ವರ್ಷಕ್ಕೆ ದುಬಾರಿ ಆಗುತ್ತಿದೆ. ಜೊತೆಗೆ ಲಾಲ್‌ಬಾಗ್‌ಗೆ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಆದ್ದರಿಂದ ಉದ್ಯಾನದ ಸ್ವತ್ಛತೆ ಕಾರ್ಯವೂ ಅಧಿಕ ಆಗುತ್ತದೆ. ಈ ಹಿನ್ನೆಲೆ ಸಾರ್ವಜನಿಕರ ಪ್ರವೇಶ ದರ ಏರಿಕೆ ಮಾಡಲಾಗಿದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್‌ ತಿಳಿಸಿದ್ದಾರೆ.

ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ ಅಧ್ಯಕ್ಷತೆಯಲ್ಲಿ ಮೊದಲ ಸಭೆ ನಡೆಸಲಾಗಿದ್ದು, ಫ್ಲೈವುಡ್‌ ಸಂಶೋಧನಾ ಕೇಂದ್ರದಿಂದಲೂ ವರದಿ ಸಲ್ಲಿಸುವುದು ಬಾಕಿ ಇದೆ. ನಂತರ ಪುರಾತತ್ವ ಇಲಾಖಾ ತಜ್ಞರಿಂದ ಸಭೆ ಜರುಗಲಿದೆ. ಒಟ್ಟಾರೆ ತಜ್ಞರ ಸಲಹೆ ಮೇರೆಗೆ ಮುಂದಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಜಗದೀಶ್‌ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+