ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಗೇರಿಯಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಜಯಂತಿ ಬ್ರಹ್ಮೋತ್ಸವ

|
Google Oneindia Kannada News

ಬೆಂಗಳೂರು,ಏಪ್ರಿಲ್ 13: ನಗರದ ಕೆಂಗೇರಿ ಬಳಿಯ ಮಧ್ವನಾರಾಯಣಾಶ್ರಮದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಜಯಂತಿ ಬ್ರಹ್ಮೋತ್ಸವ ಏ.19ರಿಂದ 28ರವರೆಗೆ ನಡೆಯಲಿದೆ.

ಪೃಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದಾರೆ. ಅಂದು ಪಂಡಿತರಿಂದ ವೇದಶಾಸ್ತ್ರ ಗ್ರಂಥಗಳ ಪಾರಾಯಣ, ಶ್ರೀಲಕ್ಷ್ಮೀ ನರಸಿಂಹ ದೇವರಿಗೆ ಮಧು ಅಭಿಷೇಕ, ಶ್ರೀನಿವಾಸ ಕಲ್ಯಾಣ ಪ್ರವಚನ,ಭಜನಾ ಕಾರ್ಯಕ್ರಮ ನಡೆಯಲಿದೆ.

ಶ್ರೀ ಯೋಗಲಕ್ಷ್ಮೀನರಸಿಂಹ ಸ್ವಾಮಿಯ ಸನ್ನಿಧಿಯು ಭೂಮಿಯಿಂದ 21 ಅಡಿಗಳಷ್ಟು ಎತ್ತರದ ಬೆಟ್ಟದ ಮೇಲೆ ನಿರ್ಮಿಸಲಾಗುತ್ತದೆ.

ಬೆಟ್ಟದ ತುದಿಯು 108 ವಿಶಾಲವಾದ ಕಮಲದ ದಳಗಳಿಂದ ಕೂಡಿರುತ್ತದೆ. ಅದರ ಒಳಗೆ ಕಂಗೊಳಿಸುವ ತಪೋವನದ ಮಧ್ಯದಲ್ಲಿ 3 ಅಡಿ ಎತ್ತರದಲ್ಲಿ ದೇವಾಲಯವು ವಿರಾಜಿಸುವುದು. ಈ ದೇವಾಲಯದ ಹೊರ ಪ್ರಾಕಾರವು ಕುಸುರಿ ಕೆಲಸಗಳಿಂದ ಅಲಂಕೃತವಾದ 24 ಸ್ಥಂಭಗಳನ್ನು ಹೊಂದಿರುತ್ತದೆ. ಇದರ ಮಧ್ಯದಲ್ಲಿ 2 ಅಡಿ ಎತ್ತರಕ್ಕೆ ಪೂಜಾ ಪ್ರಾಕಾರವು 12 ಸ್ಥಂಭಗಳನ್ನು ಹೊಂದಿರುತ್ತದೆ.

Lakshmi Narasimha Jayanti and Brahmotsava in Kengeri

ಇಲ್ಲಿ 16 ಅಡಿ ಚೌಕಾಕಾರದ ಶಿಲಾಮಯವಾದಂತಹ ಗರ್ಭಗೃಹವು ನಿರ್ಮಾಣಗೊಳ್ಳುವುದು. ಅದರೊಳಗೆ 5 ಅಡಿ ಎತ್ತರದ ಶಾಲಿಗ್ರಾಮ ಶಿಲೆಯಿಂದ ನಿರ್ಮಿತವಾದ ಶ್ರೀ ಯೋಗಾಲಕ್ಷ್ಮಿ ನರಸಿಂಹಸ್ವಾಮಿಯನ್ನು ಪ್ರತಿಷ್ಠಾಪಿಸಲಾಗುವುದು ಎಂದು ಸ್ವಾಮೀಜಿ ತಿಳಿಸಿದ್ದಾರೆ.

ಏ 19 ಮಂತ್ರಾಲಯ ಶ್ರೀರಾಘವೇಂದ್ರ ಮಠದ ಶ್ರೀ ಸುಭುದೇಂದ್ರತೀರ್ಥರು ಮತ್ತು ಮುಳಬಾಗಿಲು ಶ್ರೀಪಾದರಾಜ ಮಠದ ಶ್ರೀ ಕೇಶವನಿಧಿ ತೀರ್ಥರಿಂದ ಬ್ರಹ್ಮೋತ್ಸವ ರಜತಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಏ.20ಕ್ಕೆ ಸೋಸಲೆ ವ್ಯಾಸರಾಜ ಮಠದ ಶ್ರೀವಿದ್ಯಾಶ್ರೀಶತೀರ್ಥರಿಂದ ಸಂಸ್ಥಾನ ಪೂಜೆ ನಡೆಯಲಿದೆ, ಬಾಟ್ನಿ ರಾಮಚಂದ್ರಾಚಾರ್ಯ ಪ್ರವಚನ, ಶ್ರೀ ಲಕ್ಷ್ಮೀ ಮತ್ತು ತಂಡ ಸಂಗೀತ ಕಾರ್ಯಕ್ರಮ ನಡೆಯಲಿದೆ.

21 ಶ್ರೀ ಸುವಿದ್ಯೇಂದ್ರತೀರ್ಥರಿಂದ ಸಂಸ್ಥಾನ ಪೂಜೆ , ಆನಂದ ತೀರ್ಥ ಮಾಳಗಿ -ಪ್ರವಚನ, -ಶ್ರೀ ಗೋಪಾಲ ಮತ್ತು ತಂಡ ವೀಣಾ ವಾದನ, ಏ.22ರಂದು ತಂಬಿಹಳ್ಳಿ ಮಾಧವ ತೀರ್ಥ ಮಠದ ಶ್ರೀ ವಿದ್ಯಾಸಾಗರ ಮಾಧವತೀರ್ಥರಿಂದ ಸಂಸ್ಥಾನ ಪೂಜೆ ಜಿ ಪಿ ನಾಗರಾಜಾಚಾರ್ಯ - ಪ್ರವಚ, ಅರ್ಚನ ಕುಲಕರ್ಣೀ , ಧಾರವಾಡ ಮತ್ತು ತಂಡ ಸಂಗೀತ ಕಾರ್ಯಕ್ರಮ ಮೂಡಿಬರಲಿದೆ
.
ಏ.23 ರಂದು ಉಡುಪಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥರಿಂದ ಸಂಸ್ಥಾನ ಪೂಜೆ, ಧನಂಜಯಾಚಾರ್ಯ- ಪ್ರವಚನ, ಶ್ರೀಧರ್ ಮತ್ತು ತಂಡದಿಂದ ಸಂಗೀತ, ಏ.24 ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಮತ್ತು ಶ್ರೀ ವಿಶ್ವಪ್ರಸನ್ನ ತೀರ್ಥರಿಂದ ಸಂಸ್ಥಾನ ಪೂಜೆ ಪ್ರವಚನ: ರಾಮವಿಠಲಾಚಾರ್ಯ, ಶ್ರೀ ಸರಸ್ವತಿ ಹಾಗೂ ಶೃತಿ ಮತ್ತು ತಂಡ ಸಂಗೀತ ಕಾರ್ಯಕ್ರಮ ಜರುಗಲಿದೆ.

25 ಉಡುಪಿ ಅದಮಾರು ಮಠದ ಶ್ರೀ ವಿಶ್ವ ಪ್ರಿಯ ತೀರ್ಥರಿಂದ ಸಂಸ್ಥಾನ ಪೂಜೆ, ತಿರುಮಲ ಕುಲಕರ್ಣಿ ಅವರಿಂದ ಪ್ರವಚನ, -ಶ್ರೀ ಅನಂತ ಕುಲಕರ್ಣಿ ಮತ್ತು ತಂಡ ಸಂಗೀತ ಕಾರ್ಯಕ್ರಮ, ಪ್ರತಿನಿತ್ಯ ಬೆಳಿಗ್ಗೆ ಹಲವಾರು ಭಜನಾ ಮಂಡಳಿಗಳಿಂದ ನಾಮ ಸಂಕೀರ್ತನೆ , ಅನೇಕ ಹೋಮಗಳು , ಕಲ್ಯಾಣೋತ್ಸವ , ಎಲ್ಲಾ ಶ್ರೀಪಾದರಿಗೆ ಗೋಪಿ ಚಂದನದಿಂದ ತುಲಾಭಾರ ,ದೀಪೋತ್ಸವ ನಡೆಯಲಿದೆ. ನಗರದ ಸಿಟಿ ಮಾರ್ಕೆಟ್ ವಿಕ್ಟೋರಿಯಾ ಆಸ್ಪತ್ರೆಯ ಮುಂಬದಿಯಿಂದ 227 ಬಿಎಂಟಿಸಿ ಬಸ್ ಸೌಕರ್ಯವಿದೆ.

English summary
lakshmi Narasimha Jayanti, Bramhotsava and Silver jublee celebration will be held at Madhwanarayanashrama. Dodda Aladamara road in Kengeri from April 19 to 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X