ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆರೆ ಒತ್ತುವರಿ ತೆರವು: ಬಿಬಿಎಂಪಿಗೆ ಹೈಕೋರ್ಟ್ ತರಾಟೆ

By ಎಸ್‌ಎಸ್ಎಸ್
|
Google Oneindia Kannada News

ಬೆಂಗಳೂರು, ಜುಲೈ 15; ಮಹಾನಗರದಲ್ಲಿನ ಕೆರೆಗಳ ಒತ್ತುವರಿ ತೆರವುಗೊಳಿಸುವುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಪಾಲಿಸದ ಬಿಬಿಎಂಪಿಯನ್ನು ಹೈಕೋರ್ಟ್ ಮತ್ತೆ ತರಾಟೆಗೆ ತೆಗೆದುಕೊಂಡಿದೆ.

ಅಲ್ಲದೆ, ಕೆರೆಗಳ ಒತ್ತುವರಿ ತೆರವು ಮಾಡಲು ಎಷ್ಟು ದಿನ ಬೇಕು?, ಕೋರ್ಟ್‌ ಆದೇಶ ಪಾಲನೆ ಎಂದರೆ ಕಚೇರಿಗಳಲ್ಲಿ ಕುಳಿತು ಅಧಿಕಾರಿಗಳು ಪತ್ರ ಬರೆಯುವುದಲ್ಲ ಎಂದು ಬಿಬಿಎಂಪಿಯನ್ನು ಪ್ರಶ್ನಿಸಿದೆ.

ಸಿದ್ದಾಪುರ: ಕೆರೆ ಬೇಟೆಗೆ ಬಂದು ಮೀನು ಸಿಗದಿದ್ದಕ್ಕೆ ಆಕ್ರೋಶಸಿದ್ದಾಪುರ: ಕೆರೆ ಬೇಟೆಗೆ ಬಂದು ಮೀನು ಸಿಗದಿದ್ದಕ್ಕೆ ಆಕ್ರೋಶ

ಬಿಬಿಎಂಪಿ ವಾದ ಆಲಿಸಿದ ಬಳಿಕ ನ್ಯಾಯಪೀಠ, "ಒತ್ತುವರಿ ತೆರವು ಮಾಡಲು ಕೋರ್ಟ್‌ ಬಿಬಿಎಂಪಿಗೆ ನಿರ್ದೇಶನ ನೀಡಿತ್ತು. ಈಗ ಬಂದು ಒತ್ತುವರಿ ತೆರವು ನಮಗೆ ಸಂಬಂಧಿಸಿದ್ದಲ್ಲ. ಸಂಬಂಧಪಟ್ಟವರಿಗೆ ಪತ್ರ ಬರೆಯಲಾಗಿದೆ ಎಂದು ಹೇಳುತ್ತಿದ್ದೀರಿ?. ಬಿಬಿಎಂಪಿ ಅಧಿಕಾರಿಗಳು ಬೇರೊಬ್ಬ ಅಧಿಕಾರಿಗೆ ಪತ್ರ ಬರೆದುಕೊಂಡು ಕುಳಿತರೆ, ಒತ್ತುವರಿ ತೆರವು ಮಾಡಿದ ಹಾಗಾಗುತ್ತದೆಯೇ?" ಎಂದು ಕೇಳಿತು.

ದಾವಣಗೆರೆ; ಕುಂದವಾಡ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಅವ್ಯವಹಾರ? ದಾವಣಗೆರೆ; ಕುಂದವಾಡ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಅವ್ಯವಹಾರ?

Lake Encroachment Clearance Issue : HC Taken BBMP Officials Task Again

ಪಾಲಿಕೆ ಅಧಿಕಾರಿಗಳು ಕಚೇರಿಗಳಲ್ಲಿ ಕುಳಿತು ಆರಾಮ ಜೀವನ ನಡೆಸುತ್ತಿದ್ದರೆ, ನೀವು ನ್ಯಾಯಾಲಯದಲ್ಲಿ ಅಂತಹ ಅಧಿಕಾರಿಗಳನ್ನು ಸಮರ್ಥಿಸಿಕೊಳ್ಳುತ್ತಿದ್ದೀರಿ ಎಂದು ಬಿಬಿಎಂಪಿ ಪರ ವಕೀಲರನ್ನು ಟೀಕಿಸಿತು.

ಕಪ್ಪು ಬಣ್ಣಕ್ಕೆ ತಿರುಗಿದ ಕೆರೆ ನೀರು; ಗ್ರಾಮಸ್ಥರ ನಿರೀಕ್ಷೆಗೆ ತಣ್ಣೀರು ಕಪ್ಪು ಬಣ್ಣಕ್ಕೆ ತಿರುಗಿದ ಕೆರೆ ನೀರು; ಗ್ರಾಮಸ್ಥರ ನಿರೀಕ್ಷೆಗೆ ತಣ್ಣೀರು

2014ರಲ್ಲಿ ಕೆರೆಗಳ ಒತ್ತುವರಿ ತೆರವು ಮತ್ತು ಅವುಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಆಲೋಕ್‌ ಆರಾಧೆ ಹಾಗೂ ನ್ಯಾ. ಜೆ.ಎಂ. ಖಾಜಿ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು.

ಬಿಬಿಎಂಪಿ ಪರ ವಕೀಲರು, ನಗರದ ಸುಬ್ರಮಣ್ಯಪುರ ಹಾಗೂ ಬೇಗೂರು ಕೆರೆಗಳಲ್ಲಿನ ಒತ್ತುವರಿಗಳನ್ನು ತೆರವುಗೊಳಿಸುವ ಸಂಬಂಧ 2022ರ ಜೂ.2ರಂದು ಹೈಕೋರ್ಟ್‌ ನೀಡಿದ್ದ ಆದೇಶದಂತೆ, ಸುಬ್ರಮಣ್ಯಪುರ ಕೆರೆ ಪ್ರದೇಶದ 3.39 ಎಕರೆ ಪ್ರದೇಶದಲ್ಲಿ ಸ್ಲಂ ನಿವಾಸಿಗಳು ವಾಸವಾಗಿದ್ದು, ಅವರನ್ನು ತೆರವುಗೊಳಿಸುವುದು ಕೊಳಗೇರಿ ಅಭಿವೃದ್ಧಿ ಮಂಡಳಿ ವ್ಯಾಪ್ತಿಗೆ ಬರುತ್ತದೆ. ಅವರಿಗೆ ಈ ವಿಚಾರ ತಿಳಿಸಲಾಗಿದೆ. ಅದೇ ರೀತಿ ಬೇಗೂರು ಕೆರೆ ಒತ್ತುವರಿ ತೆರವು ಬಗ್ಗೆ ಸಂಬಂಧಪಟ್ಟ ತಹಶೀಲ್ದಾರ್‌ಗೆ ಬಿಬಿಎಂಪಿ ಅಧಿಕಾರಿಗಳು ಪತ್ರ ಬರೆದಿದ್ದಾರೆ ಎಂದರು.

ಅಧಿಕಾರಿಗಳಿಗೆ ಬುಲಾವ್; ಸುಬ್ರಮಣ್ಯಪುರ ಹಾಗೂ ಬೇಗೂರು ಕೆರೆ ಒತ್ತುವರಿ ತೆರವು ವಿಚಾರವಾಗಿ ಸಂಬಂಧಪಟ್ಟ ಬಿಬಿಎಂಪಿ ವಲಯದ ಎಕ್ಸಿಕ್ಯೂಟಿವ್‌ ಇಂಜಿನಿಯರ್‌ಗಳು ಮುಂದಿನ ವಿಚಾರಣೆ ವೇಳೆ ಖುದ್ದು ಹಾಜರಬೇಕು ಎಂದು ನ್ಯಾಯಪೀಠ ಸೂಚಿಸಿ ವಿಚಾರಣೆಯನ್ನು ಜು.20ಕ್ಕೆ ಮುಂದೂಡಿತು.

ಅಧಿಕಾರಿಗಳು ಎಷ್ಟು ದಿನಗಳಲ್ಲಿ ಒತ್ತುವರಿಗಳನ್ನು ತೆರವುಗೊಳಿಸಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ನಿರ್ದೇಶನ ನೀಡಿದೆ. ಜೆಪಿ ನಗರದ ಪುಟ್ಟೇನಹಳ್ಳಿ ಕೆರೆ ಒತ್ತುವರಿ ತೆರವಿಗೆ ಕೈಗೊಳ್ಳುವ ಕ್ರಮಗಳ ಕುರಿತು ವಿವರಿಸಲು ಬೊಮ್ಮನಹಳ್ಳಿ ಉಪ ವಲಯದ ಎಕ್ಸಿಕ್ಯೂಟಿವ್‌ ಇಂಜಿನಿಯರ್‌ ಖುದ್ದು ವಿಚಾರಣೆಗೆ ಹಾಜರಾಗಬೇಕು ಎಂದು ನ್ಯಾಯಪೀಠ ಸೂಚನೆ ನೀಡಿತು.

English summary
Karnataka high court upset with Bruhat Bengaluru Mahanagara Palike (BBMP) in the issue of encroachment clearance from lakes in Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X