ಲಾಲ್‌ಬಾಗ್ ಕೆರೆಯಲ್ಲಿ ಇನ್ನುಮುಂದೆ ಜಲಚರಗಳು ಸುರಕ್ಷಿತ
ಬೆಂಗಳೂರು, ಏಪ್ರಿಲ್ 10: ಲಾಲ್‌ಬಾಗ್‌ನ ಕೆರೆಯ ನೀರನ್ನು ಶುದ್ಧಿಕರಣಗೊಳಿಸಲು ಕೆರೆಯಲ್ಲಿ ಎಂಟು ಏರಿಯೇಟರ್ಸ್ ಗಳನ್ನು ಅಳವಡಿಸಲಾಗಿದೆ.
ಮಲಿನಗೊಂಡು ಪಾಚಿಗಟ್ಟಿರುವ ಕೆರೆ ನೀರಿನಲ್ಲಿ ಆಮ್ಲಜನಕ ಕೊರತೆ ಇದ್ದು, ಇದಕ್ಕಾಗಿ ಏರಿಯೇಟರ್ಸ್ ಗಳನ್ನು ಅಳವಡಿಸಲಾಗಿದೆ. ಇವುಗಳು ಕೆರೆಯಲ್ಲಿ ಆಮ್ಲಜನಕ ಹೆಚ್ಚಿಸುವುದರಿಂದ ಜಲಚರಗಳ ಉಳಿವಿಗೆ ಕಾರಣವಾಗುತ್ತವೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಏರಿಯೇಟರ್ಸ್ ಗಳನ್ನು ಅಳವಡಿಕೆಗೆ ತಗಲುವ ವೆಚ್ಚ ಮತ್ತು ಮೂರು ವರ್ಷಗಳ ಕಾಲ ಅವುಗಳ ನಿರ್ವಹಣೆಯನ್ನು ಬಾಷ್ ಕಂಪನಿ ವಹಿಸಿಕೊಂಡಿದೆ. ಇದಕ್ಕೆ ಸರ್ಕಾರ ಕೂಡ ಒಪ್ಪಿಗೆ ನೀಡಿದೆ.

ಸದ್ಯ ಕೆರೆಯಲ್ಲಿ ಒಂಬತ್ತು ಏರಿಯೇಟರ್ ಗಳನ್ನು ಅಳವಡಿಸಲಾಗಿದೆ. ಸದ್ಯ 14 ಅಡಿ ಎತ್ತರದ ಎಂಟು ಸಾಮಾನ್ಯ ಏರಿಯೇಟರ್ ಗಳ ಅಳವಡಿಕೆ ಮಾಡಲಾಗಿದೆ. ನಾಳೆ 50 ಅಡಿ ಎತ್ತರದ ಒಂದು ಹೈ ಜೆಟ್ ಏರಿಯೇಟರ್ ಅನ್ನು ಅಳವಡಿಸಲಾಗುತ್ತದೆ. ಈ ಏರಿಯೇಟರ್ ಗಳ ಅಳವಡಿಕೆಯಿಂದಾಗಿ ಕೆರೆಯಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಾಗಲಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಂ. ಜಗದೀಶ್ ತಿಳಿಸಿದ್ದಾರೆ.
ಏರಿಯೇಟರ್ಸ್ ಗಳು : ಸಾಮಾನ್ಯವಾಗಿ ಗಾಳಿಯಲ್ಲಿ ಕನಿಷ್ಠ ಶೇ.21ರಷ್ಟು ಆಮ್ಲಜನಕವಿರುತ್ತದೆ. ಆದರೆ ನೀರಿನಲ್ಲಿ ಕನಿಷ್ಠ ಶೇ. ನಾಲ್ಕರಿಂದ ಐದರಷ್ಟಿರಬೇಕು. ಆದರೆ ನೀರಿನಲ್ಲಿ ಆಮ್ಲಜನಕದ ಪ್ರಮಾಣ ಶೇ.4ಕ್ಕಿಂತ ಕಡಿಮೆಯಾದರೆ ಅಲ್ಲಿನ ಬ್ಯಾಕ್ಟೀರಿಯಾಗಳು ಸಾವನ್ನಪ್ಪುತ್ತವೆ.
ಇದರಿಂದ ನೀರಿನಲ್ಲಿ ಆಮ್ಲಜನಕ ತೀವ್ರ ಪ್ರಮಾಣದಲ್ಲಿ ಕಡಿಮೆಯಾಗತ್ತದೆ. ಆಗ ಕೆರೆಯೊಳಗೆ ಜೀವಿಸುವ ಇತರೆ ಜಲಚರಗಳು ಕೂಡ ಸಾವನ್ನಪ್ಪುತ್ತವೆ. ಹೀಗಾಗಿ ಕೆರೆಯೊಳಗೆ ಏರಿಯೇಟರ್‌ಗಳನ್ನು ಅಳವಡಿಸುವುದರಿಂದ ನೀರು ಕಾರಂಜಿಗಳ ರೀತಿ ಮೇಲಿಂದ ಕೆಳಗೆ ರಭಸವಾಗಿ ಬಿದ್ದಾಗ ಪರಸ್ಪರ ಅಲೆಗಳ ಮೂಲಕ ಆಮ್ಲಜನಕ ಉತ್ಪತ್ತಿಯಾಗುತ್ತದೆ. ಇದರಿಂದ ಜಲಚರಗಳಿಗೆ ಪ್ರಾಣಾಪಾಯ ಉಂಟಾಗುವುದಿಲ್ಲ.
-
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ












Click it and Unblock the Notifications