ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಸ ಸಮಸ್ಯೆ ಕುರಿತು ಬಿಬಿಎಂಪಿ ಶ್ವೇತ ಪತ್ರ ಹೊರಡಿಸಲಿ

By Kiran B Hegde
|
Google Oneindia Kannada News

ಬೆಂಗಳೂರು, ನ. 20: ನಗರದ ತ್ಯಾಜ್ಯ ನಿರ್ವಹಣೆ ಸಮಸ್ಯೆ ಸಂಪೂರ್ಣ ಬಗೆಹರಿದಿಲ್ಲ. ಆದ್ದರಿಂದ ಸಮಸ್ಯೆ ನಿವಾರಣೆಗೆ ಬಿಬಿಎಂಪಿ ಯಾವ ಕ್ರಮಗಳನ್ನು ಕೈಗೊಂಡಿದೆ ಎಂಬುದರ ಕುರಿತು ಶ್ವೇತ ಪತ್ರ ಹೊರಡಿಸಬೇಕೆಂದು ಲೋಕಸತ್ತಾ ಪಕ್ಷ ಆಗ್ರಹಿಸಿದೆ.

ಸುದ್ದಿಗೋಷ್ಠಿ ನಡೆಸಿದ ಪಕ್ಷದ ಮುಖಂಡ ಸಿ.ಎನ್. ದೀಪಕ್, ಪ್ರತಿವರ್ಷ ನೂರಾರು ಕೋಟಿ ರೂ.ಗಳನ್ನು ಕಸ ನಿರ್ವಹಣೆಗಾಗಿ ವೆಚ್ಚ ಮಾಡಲಾಗುತ್ತಿದೆ. ವೆಚ್ಚ ಕಡಿಮೆ ಮಾಡುವ ಕುರಿತು ಹಾಗೂ ಪರಿಸರ ಸ್ನೇಹಿ ಕ್ರಮ ಕೈಗೊಳ್ಳುವ ಕುರಿತು ಇದುವರೆಗೂ ಯೋಚನೆ ಮಾಡಿಲ್ಲ ಎಂದು ಅವರು ಆರೋಪಿಸಿದ್ದಾರೆ. [ಮಂಡೂರಿನಲ್ಲಿ ಕಸ ಹಾಕಲ್ಲ]

ಬೆಂಗಳೂರಿನ ಸುತ್ತಲಿನ ಪ್ರದೇಶಗಳಲ್ಲಿ ಕಸ ಸುರಿಯುವ ಮೂಲಕ ಮತ್ತೆ ಹಳೆಯ ಪದ್ಧತಿಗೇ ಬಿಬಿಎಂಪಿ ಮೊರೆ ಹೋಗಿದೆ ದೀಪಕ್ ಟೀಕಿಸಿದರು. ಕಸವನ್ನು ಮನೆಯಲ್ಲಿಯೇ ವಿಂಗಡಿಸುವ ಕುರಿತು ಕಾಯ್ದೆ ಜಾರಿಗೆ ತರಬೇಕು. ಇಲ್ಲದಿದ್ದರೆ ನ. 29ರಂದು ಬಿಬಿಎಂಪಿ ಕಚೇರಿ ಎದುರು ಕಸ ಸುರಿದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. [ಸ್ಯಾನ್ ಫ್ರಾನ್ಸಿಸ್ಕೋ ನೆರವು]

ಪಕ್ಷದ ಮುಖಂಡರಾದ ರೋಹಿಣಿ ಚಂದ್ರಕಾಂತ, ಡಾ. ಮೀನಾಕ್ಷಿ ಭರತ್, ರವಿಕುಮಾರ್, ಫಣಿಸಾಯಿ ಭಾರದ್ವಾಜ್ ಇದ್ದರು.

garbage

ಕಸ ಸಂಸ್ಕರಣ ಘಟಕ ಶಾಶ್ವತ ಪರಿಹಾರವೇ?
ನಗರದಲ್ಲಿ ಪ್ರತಿದಿನ ಉತ್ಪಾದನೆಯಾಗುತ್ತಿರುವ ಕಸಗಳನ್ನು ಡೊಡ್ಡಬಳ್ಳಾಪುರ ತಾಲೂಕಿನ ಚಿಗರನಹಳ್ಳಿಯಲ್ಲಿರುವ ಕಸ ಸಂಸ್ಕರಣ ಘಟಕಕ್ಕೆ ಕಳುಹಿಸಲಾಗುತ್ತಿದೆ. 15 ಎಕರೆಯಷ್ಟು ವಿಸ್ತೀರ್ಣದ ಪ್ರದೇಶದಲ್ಲಿ ಪ್ರತಿದಿನ 450 ಟನ್‌ಗಳಷ್ಟು ಕಸವನ್ನು ಇಲ್ಲಿ ಸಂಸ್ಕರಿಸಲಾಗುತ್ತಿದೆ. ಆದರೆ, ಇದು ಶಾಶ್ವತ ಪರಿಹಾರವೇ ಎಂಬುದನ್ನು ಸರ್ಕಾರ ಖಚಿತಪಡಿಸಿಲ್ಲ. [ಕಸ ಸಮಸ್ಯೆ ನಿವಾರಣೆಗೆ ಗಡುವು]

ಸಂಸ್ಕರಣೆ ಸಾಮರ್ಥ್ಯವನ್ನು 500 ಟನ್‌ಗೆ ಹೆಚ್ಚಿಸುವುದಾಗಿ ಸರ್ಕಾರ ತಿಳಿಸಿದ್ದರೂ, ಬೆಂಗಳೂರಿನ ಒಟ್ಟೂ ಕಸ ಸಂಸ್ಕರಣೆ ಇಲ್ಲಿ ಸಾಧ್ಯವೇ ಎಂಬುದು ತಿಳಿದಿಲ್ಲ. ಪ್ಲಾಸ್ಟಿಕ್, ಗಾಜು, ಲೋಹಗಳನ್ನು ಬೇರ್ಪಡಿಸಲು ಮನೆಗಳಿಗೇ ಸೂಚಿಸುವುದಾಗಿ ತಿಳಿಸಿದ್ದ ಬಿಬಿಎಂಪಿ ಇದುವರೆಗೂ ಈ ಕುರಿತು ಕ್ರಮ ಕೈಗೊಂಡಿಲ್ಲ.[ಚಿಗರನ ಹಳ್ಳಿಯಲ್ಲಿ ಸಂಸ್ಕರಣಗೊಳ್ಳುತ್ತಿದೆ ಕಸ]

English summary
Lakasatta party has asked white paper report from BBMP regarding garbage problem of Bengaluru. Party leader Deepak told that law must be done to divide garbage in the house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X