• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯುವತಿಗೆ ಅಶ್ಲೀಲ ವಿಡಿಯೋ ತೋರಿಸಿದ್ದ ಓಲಾ ಚಾಲಕ ಪ್ರಕರಣ ಹೈಕೋರ್ಟ್‌ಗೆ

|

ಬೆಂಗಳೂರು, ಮಾರ್ಚ್ 8: ಓಲಾ ಕ್ಯಾಬ್ ಚಾಲಕ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಕಂಪನಿ ಬಳಿ ದೂರು ನೀಡಿದರೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಯುವತಿ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ.

ನ್ಯಾ. ಅಲೋಕ್ ಅಠಾರೆ ಅವರಿದ್ದ ಏಕಸದಸ್ಯಪೀಠ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿ ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಆಂತರಿಕ ದೂರು ಸಮಿತಿ ಮತ್ತು ಓಲಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿದೆ.

ಓಲಾ ವಿರುದ್ಧ ಮುಷ್ಕರ ನಡೆಸಲು ಮುಂದಾದ ಚಾಲಕರ ಒಕ್ಕೂಟ

ಅರ್ಜಿದಾರ ಯುವತಿ ತಾನು 2018ರ ಆಗಸ್ಟ್‌ನಲ್ಲಿ ಕಂಪನಿ ಕೆಲಸಕ್ಕೆ ಕ್ಯಾಬ್‌ನಲ್ಲಿ ಹೋಗುತ್ತಿದ್ದಾಗ ಚಾಲಕ ತನಗೆ ಕಾಣುವಂತೆ ಅಶ್ಲೀಲ ದೃಶ್ಯಗಳನ್ನು ಮೊಬೈಲ್‌ನಲ್ಲಿ ವೀಕ್ಷಣೆ ಮಾಡುತ್ತಿದ್ದ. ಜೊತೆಗೆ ಆತ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ.

ಜೊತೆಗೆ ಕೆಟ್ಟದಾಗಿ ನಡೆದುಕೊಂಡಿದ್ದ ಈ ಬಗ್ಗೆ ಓಲಾ ಕಂಪನಿಗೆ ದೂರು ನೀಡಿದ ಬಳಿಕ ಆತನನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಹಾಗೆಯೇ ಕೌನ್ಸೆಲಿಂಗ್ ಮಾಡಿಸಲಾಗುವುದು ಎಂದು ಹೇಳಿತ್ತು. ಆದರೂ ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

ಯುವತಿಗೆ ಅಶ್ಲೀಲ ವಿಡಿಯೋ ತೋರಿಸಿದ ಓಲಾ ಚಾಲಕ ಮಿಸ್ಸಿಂಗ್: ಪೊಲೀಸರ ತಲಾಶ್

ಬಳಿಕ 2018ರ ಸೆಪ್ಟೆಂಬರ್ ತಿಂಗಳಲ್ಲಿ ಓಲಾ ಕಂಪನಿಗೆ ಲೀಗಲ್ ನೋಟಿಸ್ ನೀಡಿ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಲಾಗಿತ್ತು. ಆದರೆ ಕಂಪನಿ ಆತನ ತಮ್ಮ ಕಂಪನಿಯ ಕಾಯಂ ಉದ್ಯೋಗಿ ಅಲ್ಲ, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುದರಿಂದ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದ ಕಾರಣ ಯುವತಿ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ.

English summary
Lady passenger files a writ petition in Karnataka High Court over Ola cab driver. Police didn't act over her complaint, So she moves to court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X