ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಟ್ಟೆ ಬದಲಾಯಿಸುವುದನ್ನು ಕದ್ದು ಕದ್ದು ನೋಡೋ ಕಳ್ಳನಿವ !

|
Google Oneindia Kannada News

ಬೆಂಗಳೂರು, ಫೆಬ್ರವರಿ 23: ಹೆಸರಿಗೆ ಆತ ಲ್ಯಾಬ್ ಟೆಕ್ನೀಷಿಯನ್. ಆದ್ರೆ ಮಾಡ್ತಿದ್ದು ಮಾತ್ರ ಕದ್ದು ಮುಚ್ಚಿ ನೋಡೊ ಕಾಯಕ ! ಮಹಿಳೆಯರು ಬಟ್ಟೆ ಬದಲಾಯಿಸುವುದನ್ನು ಕದ್ದು ಮುಚ್ಚಿ ನೋಡುತ್ತಿದ್ದ. ಬಳಿಕ ಅದನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡು ಮನೆಯಲ್ಲಿ ನೋಡುತ್ತಾ ವಿಕೃತ ಆನಂದ ಮೆರೆಯುತ್ತಿದ್ದ. ಮಹಿಳೆಯರು ಬಟ್ಟೆ ಬದಲಾಯಿಸುವುದನ್ನು ರೆಕಾರ್ಡ್ ಮಾಡಿಕೊಂಡು ಕದ್ದು ಮುಚ್ಚಿ ನೋಡ್ತಿದ್ದ ಕಳ್ಳ ನನ್ನು ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ.

ನಿಮ್ಹಾನ್ಸ್ ಆಸ್ಪತ್ರೆಯ ಲ್ಯಾಬ್ ಟೆಕ್ನೀಷಿಯನ್ ಮಾಲತೇಶ್ ಬಂಧಿತ ಆರೋಪಿ. ಈತ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನೀಷಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಆಪರೇಷನ್ ಥೇಟರ್ ನಲ್ಲಿ ಈತ ಹೆಚ್ಚಾಗಿ ಕೆಲಸ ಮಾಡುತ್ತಿದ್ದ. ಆಪರೇಷನ್ ಗೆ ಹೋಗುವ ಮುನ್ನ ಮಹಿಳಾ ಸಿಬ್ಬಂದಿ ಬಟ್ಟೆ ಬದಲಾಯಿಸುತ್ತಿದ್ದರು. ಇದನ್ನು ಕದ್ದು ಮುಚ್ಚಿ ನೋಡಿದ್ದ ಮಾಲತೇಶ್, ಅದನ್ನು ರೆಕಾರ್ಡಿಂಗ್ ಮಾಡಿಕೊಳ್ಳುವ ಉಪಾಯ ಹೂಡಿದ್ದ.

Lab technician arrested for recording Staffs Changing clothes

Recommended Video

ಕೊರೋನಾ ನಿರ್ಲಕ್ಷ್ಯಿಸಿದ್ರೆ ರಾಜ್ಯದಲ್ಲೂ ಟಫ್ ರೂಲ್ಸ್ | Sudhakar | Oneindia Kannada

ಆಪರೇಷನ್ ಥೇಟರ್ ನಲ್ಲಿ ಮೊಬೈಲ್ ಚಾರ್ಜ್ ಗೆ ಹಾಕಿ ಬರುವ ಸೋಗಿನಲ್ಲಿ ರೆಕಾರ್ಡಿಂಗ್ ಮೋಡಿನಲ್ಲಿ ಹಾಕಿ ಬರುತ್ತಿದ್ದ. ರೆಕಾರ್ಡ್ ಆದ ಬಳಿಕ ಅದನ್ನು ಮನೆಯಲ್ಲಿ ನೋಡಿ ಆನಂದ ಪಡೆಯುತ್ತಿದ್ದ. ಇತ್ತೀಚೆಗೆ ಮಹಿಳಾ ವೈದ್ಯರು ಬಟ್ಟೆ ಬದಲಾಯಿಸಲು ಹೋದಾಗ ಮೊಬೈಲ್ ನೋಡಿ ಅನುಮಾನಗೊಂಡಿದ್ದರು. ಕೂಡಲೇ ಅದನ್ನು ಹೋಗಿ ಪರಿಶೀಲಿಸಿದಾಗ ರೆಕಾರ್ಡಿಂಗ್ ಮೋಡ್ ನಲ್ಲಿ ಹಾಕಿರುವುದು ಗೊತ್ತಾಗಿದೆ. ಕೂಡಲೇ ಮೊಬೈಲ್ ತೆಗೆದುಕೊಂಡು ನೋಡಿದಾಗ ಮಹಿಳಾ ಸಿಬ್ಬಂದಿಯ ಅನೇಕ ವಿಡಿಯೋಗಳು ಇರುವುದು ಗೊತ್ತಾಗಿದೆ. ಈ ಕುರಿತು ಮಹಿಳಾ ಸಿಬ್ಬಂದಿ ತಿಲಕ್ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಆರೋಪಿ ಮಾಲತೇಶ್ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

English summary
Bengaluru: Lab technician arrested for recording Staffs Changing clothes in NIMHANS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X