ಜಜೀರಾ ಏರ್‌ವೇಸ್‌ನಿಂದ ಕುವೈತ್-ಬೆಂಗಳೂರು ನೇರ ವಿಮಾನ ಸೇವೆ
ಬೆಂಗಳೂರು, ನವೆಂಬರ್ 2: ಕುವೈತ್ ಮೂಲದ ಕಡಿಮೆ ಪ್ರಯಾಣ ದರದ ಏರ್‌ಲೈನ್ ಸಂಸ್ಥೆ ಜಜೀರಾ ಏರ್‌ವೇಸ್ ನವೆಂಬರ್ 3ರಿಂದ ಬೆಂಗಳೂರಿಗೆ ನೇರ ವಿಮಾನ ಸೇವೆಯನ್ನು ಪ್ರಾರಂಭಿಸಿಲಿದೆ. ಇದು ವಾರಕ್ಕೆ ಎರಡು ಬಾರಿ ಅಂದರೆ ಗುರುವಾರ ಮತ್ತು ಶನಿವಾರದಂದು ಕುವೈತ್ ನಗರಕ್ಕೆ ಹಾರಾಟ ನಡೆಸುತ್ತದೆ.
ಈ ಸೇವೆಯು ಭಾರತದಲ್ಲಿ ಜಜೀರಾ ವಿಮಾನ ಸಂಸ್ಥೆ ವಿಸ್ತರಣೆಯ ಭಾಗವಾಗಿದೆ. ಹೊಸ ಸೇವೆಗಳೊಂದಿಗೆ ಜಜೀರಾ ಏರ್‌ಲೈನ್ ಈಗ ಎರಡು ದೇಶಗಳ ನಡುವಿನ ದ್ವಿಪಕ್ಷೀಯ ವ್ಯವಸ್ಥೆಯಲ್ಲಿ ಲಭ್ಯವಿರುವ ಎಲ್ಲಾ ಸ್ಥಳಗಳಿಗೆ ಹಾರಾಟ ನಡೆಸುತ್ತದೆ ಎಂದು ಸಂಸ್ಥೆಯ ಹೇಳಿಕೆಯು ಮಂಗಳವಾರ ತಿಳಿಸಿದೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ 99 ಕೋಟಿ ಮೌಲ್ಯದ ಹೆರಾಯಿನ್ ವಶ
ದಕ್ಷಿಣ ಏಷ್ಯಾ ಪ್ರಾದೇಶಿಕ ವ್ಯವಸ್ಥಾಪಕರಾದ ರೊಮಾನಾ ಪರ್ವಿ, ಬೆಂಗಳೂರು ಕುವೈತ್ ಈ ವಿಮಾನ ಸೇವೆಯು ಕುವೈತ್‌ನಲ್ಲಿರುವ ಭಾರತೀಯ ವಲಸಿಗ ಜನಸಂಖ್ಯೆಯನ್ನು ಭಾರತದೊಂದಿಗೆ ಸಂಪರ್ಕಿಸುತ್ತದೆ. ಭಾರತದಿಂದ ಪ್ರಯಾಣಿಕರನ್ನು ರಜೆ ಮತ್ತು ತೀರ್ಥಯಾತ್ರೆಯ ಸ್ಥಳಗಳಿಗೆ ಸಂಪರ್ಕಿಸುತ್ತದೆ ಎಂದು ಹೇಳಿದರು.
ಕುವೈತ್‌ನಿಂದ ಬೆಂಗಳೂರಿಗೆ (ಜೆ9 431) ಜಜೀರಾ ಏರ್‌ವೇಸ್‌ನ ವಿಮಾನಗಳು ಗುರುವಾರ ಮತ್ತು ಶನಿವಾರದಂದು ಸ್ಥಳೀಯ ಕಾಲಮಾನ ರಾತ್ರಿ 5.55 ಕ್ಕೆ ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುತ್ತವೆ ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಜೆ9 432) ಹಿಂದಿರುಗುವ ವಿಮಾನಗಳು ಶುಕ್ರವಾರ ಮತ್ತು ಭಾನುವಾರದಂದು ಸ್ಥಳೀಯ ಕಾಲಮಾನ 2 ಗಂಟೆಗೆ ಟೇಕ್ ಆಫ್ ಆಗಲಿವೆ ಹೇಳಿಕೆ ತಿಳಿಸಿದೆ.

ಜಜೀರಾ ಏರ್‌ವೇಸ್ ವಿಮಾನಯಾನ ಸಂಸ್ಥೆಯು ಭಾರತದ ತನ್ನ ಕಾರ್ಯಾಚರಣೆಯನ್ನು ಹೈದರಾಬಾದ್‌ನೊಂದಿಗೆ ಅಕ್ಟೋಬರ್ 2017ರಲ್ಲಿ ಪ್ರಾರಂಭಿಸಿತ್ತು. ಇದು ಈಗ ಭಾರತದಲ್ಲಿ ಎಂಟು ಸ್ಥಳಗಳಿಗೆ ವಿಮಾನಯಾನ ಸೇವೆ ಸಲ್ಲಿಸುತ್ತದೆ.